ವಿಕ್ರಾಂತ್​ ರೋಣನ ಬಿರುಗಾಳಿಗೆ ಯೂಟ್ಯೂಬ್​ ಉಡೀಸ್; ಗಂಟೆಗೆ ಬರೀ 83 ವ್ಯೂ, 66 ಸಾವಿರ ಲೈಕ್

ವಿಕ್ರಾಂತ್​ ರೋಣನ ಬಿರುಗಾಳಿಗೆ ಯೂಟ್ಯೂಬ್​ ಉಡೀಸ್; ಗಂಟೆಗೆ ಬರೀ 83 ವ್ಯೂ, 66 ಸಾವಿರ ಲೈಕ್

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್​ ಇಂದು ತನ್ನ 50ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೊನಾ ಕಾರಣದಿಂದ ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದಾರೆ. ಈ ನಡುವೆ ಸುದೀಪ್​ ನಟನೆಯ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಕಿಚ್ಚನ ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದೆ.

ಹುಟ್ಟುಹಬ್ಬದ ವಿಶೇಷವಾಗಿ ವಿಕ್ರಾಂತ್ ರೋಣ ಸಿನಿಮಾದ ಗ್ಲಿಮ್ಸ್​​ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಡೆಡ್​​ಮ್ಯಾನ್ ಆ್ಯಂಥಮ್​​ ಕಥೆ ಅಭಿಮಾನಿಗಳ ಕುತೂಹಲವನ್ನು ಡಬಲ್​ ಮಾಡಿದೆ. ಮಳೆ, ಬೆಂಕಿಯ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ವಿಡಿಯೋ ನೋಡುವವರಿಗೆ ಸಖತ್ ಥ್ರಿಲ್​​ ಕೊಡ್ತಿದೆ. ಈ ನಡುವೆ ಟಿ ಸಿರೀಸ್​​ನಲ್ಲಿ ಬಿಡುಗಡೆಯಾಗಿರುವ ವಿಕ್ರಾಂತ್ ರೋಣ ಸಿನಿಮಾದ ಗ್ಲಿಮ್ಸ್ ವಿಡಿಯೋ ಅಬ್ಬರಕ್ಕೆ ಯೂಟ್ಯೂಬ್​ ಕ್ರ್ಯಾಶ್ ಆಗಿದ್ದು, ವಿಡಿಯೋ ಬಿಡುಗಡೆಯಾದ ಒಂದು ಗಂಟೆಗೆ ಬಳಿಕವೂ ಬರೀ 83 ವ್ಯೂ, 66 ಸಾವಿರ ಲೈಕ್ ತೋರಿಸುತ್ತಿದೆ.

blank

Source: newsfirstlive.com Source link