ಸಿದ್ದಾರ್ಥ್‌ ಶುಕ್ಲಾ ಅಕಾಲಿಕ ಸಾವಿಗೆ ದಿಗ್ಭ್ರಮೆಯಲ್ಲಿ ಇಡೀ ಚಿತ್ರರಂಗ; ಸಿದ್​-ನಾಜ್ ಸ್ನೇಹದ್ದೇ ಮಾತು

ಸಿದ್ದಾರ್ಥ್‌ ಶುಕ್ಲಾ ಅಕಾಲಿಕ ಸಾವಿಗೆ ದಿಗ್ಭ್ರಮೆಯಲ್ಲಿ ಇಡೀ ಚಿತ್ರರಂಗ; ಸಿದ್​-ನಾಜ್ ಸ್ನೇಹದ್ದೇ ಮಾತು

ಹಿಂದಿ ಕಿರುತೆರೆಯ ಸ್ಟಾರ್‌ ನಟ, ಬಿಗ್‌ಬಾಸ್‌ ಸೀಸನ್‌ 13 ವಿನ್ನರ್‌ ಸಿದ್ದಾರ್ಥ್‌ ಶುಕ್ಲಾ ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ. ಸಿದ್ದಾರ್ಥ್‌ ಶುಕ್ಲಾ ಅಕಾಲಿಕ ಸಾವು ಇಡೀ ಹಿಂದಿ ಕಿರುತೆಗೆ ಆಘಾತ ತಂದೊಡ್ಡಿದೆ.

40 ವರ್ಷ ವಯಸ್ಸಿನ ಸಿದ್ದಾರ್ಥ್‌ ಶುಕ್ಲಾ ಹಿಂದಿಯ ಸಾಕಷ್ಟು ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಪಾರ್ಟಿಸಿಪೇಟ್‌ ಮಾಡಿದ್ರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಬಾಲಿಕಾ ವಧು ಸೀರಿಯಲ್‌ ಸಿದ್ದಾರ್ಥ್‌ ಶುಕ್ಲಾಗೆ ಸಾಕಷ್ಟು ಫೇಮ್‌ ತಂದುಕೊಟ್ಟಿತ್ತು. ನಂತ್ರ ದಿಲ್‌ ಸೆ ದಿಲ್ ತಕ್‌ ಶೋನಲ್ಲೂ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ರು. ಆ ಬಳಿಕ ಬಿಗ್‌ಬಾಸ್‌ ಸೀಸನ್‌ 13 ರಲ್ಲಿ ಭಾಗಿಯಾದ ಸಿದ್ದಾರ್ಥ್‌ ಟ್ರೋಫಿಯನ್ನೂ ಗೆದ್ದಿದ್ರು. ಅವ್ರ ಹಾಗೂ ಶೆಹನಾಜ್‌ ಗಿಲ್‌ ಜೋಡಿ ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಶೋ ಮುಗಿದು 2 ವರ್ಷವಾದ್ರೂ ಅವರಿಬ್ಬರ ಸ್ನೇಹ ಕಡಿಮೆಯಾಗಿರ್ಲಿಲ್ಲ. ಇವತ್ತಿಗೂ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗ್ತಿದ್ದ ಜೋಡಿ ಅದು.

ಕಳೆದ ವಾರವಷ್ಟೇ ಖಾಸಗಿ ವಾಹಿನಿಯ ಡ್ಯಾನ್ಸ್‌ ದಿವಾನೆ ಶೋನಲ್ಲೂ ಸಿದ್ದಾರ್ಥ್‌ ಶುಕ್ಲಾ ಮತ್ತು ಶೆಹನಾಜ್‌ ಗಿಲ್‌ ಭಾಗಿಯಾಗಿದ್ರು. ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬರ್ತಿರೋ ಬಿಗ್‌ಬಾಸ್‌ ಶೋನಲ್ಲೂ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ರು. ಆಗಲೂ ಬಹಳ ಆಕ್ಟೀವ್‌ ಆಗಿದ್ರು ಸಿದ್ದಾರ್ಥ್‌ ಶುಕ್ಲಾ. ಆದ್ರೆ ಇವತ್ತು ಬೆಳಗ್ಗೆ ಏಕಾಏಕಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ಬರಸಿಡಿಲಿನಂತೆ ಬಡಿದುಬಿಟ್ಟಿದೆ. ಇಡೀ ಬಾಲಿವುಡ್‌ ಕಿರುತೆರೆ ಕಣ್ಣೀರಿಡ್ತಿದೆ.

Source: newsfirstlive.com Source link