ಶೆಹನಾಜ್‌ ಗಿಲ್‌ ಮುಗ್ಧ ಸ್ನೇಹಕ್ಕೆ ಬದಲಾಗಿದ್ದ ಌಂಗ್ರಿ ಯಂಗ್‌ ಮ್ಯಾನ್‌; ಎಷ್ಟು ಬೇಗ ಯಾಕೆ ಹೋದೆ ಸಿದ್?

ಶೆಹನಾಜ್‌ ಗಿಲ್‌ ಮುಗ್ಧ ಸ್ನೇಹಕ್ಕೆ ಬದಲಾಗಿದ್ದ ಌಂಗ್ರಿ ಯಂಗ್‌ ಮ್ಯಾನ್‌; ಎಷ್ಟು ಬೇಗ ಯಾಕೆ ಹೋದೆ ಸಿದ್?

ಇವತ್ತು ಹೃದಯಾಘಾತಕ್ಕೆ ಮೃತಪಟ್ಟ ಸಿದ್ದಾರ್ಥ್‌ ಶುಕ್ಲಾ ಹಾಗೂ ಶೆಹನಾಜ್‌ ಗಿಲ್‌ ಅವ್ರ ಸ್ನೇಹದ ಬಗ್ಗೆ ತಿಳಿಯದೇ ಇರುವವರು ಬಹಳ ಕಡಿಮೆ. ಬಿಗ್‌ಬಾಜ್‌ ಸೀಜನ್‌ 13 ಮುಗಿದು 2 ವರ್ಷಗಳಾದ್ರೂ ಇವತ್ತಿಗೂ ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗ್ತಿರೋ ಸೆಲೆಬ್ರಿಟಿ ಜೋಡಿ ಅಂದ್ರೆ ಅದು #Sidnazz ಅಂದ್ರೆ ಸಿದ್ದಾರ್ಥ್‌ ಮತ್ತು ಶೆಹನಾಜ್‌.

ಶೆಹನಾಜ್‌ ಗಿಲ್‌ – ಸಿದ್ದಾರ್ಥ್‌ ಶುಕ್ಲಾ ಪರಸ್ಪರ ಪರಿಚತರಾಗಿದ್ದೇ ಬಿಗ್‌ಬಾಸ್‌ ಸೀಜನ್‌ 13ರಲ್ಲಿ. ಆಗ ಸಿದ್ದಾರ್ಥ್‌ ಹಿಂದಿ ಕಿರುತೆಯ ಫೇಮಸ್‌ ನಟ. ಶೆಹನಾಜ್‌ ಪಂಜಾಬ್‌ ಸಿನಿಮಾ ಇಂಡಸ್ಟ್ರಿಯ ಸಿಂಗರ್‌. ಅಷ್ಟೇನು ಪರಿಚಿತವಲ್ಲದ ಮುಖ. ಆದ್ರೆ ಸೀಜನ್‌ ಶುರುವಾಗ್ತಿದ್ದಂತೆ ಶೆಹನಾಜ್‌ ಮುಗ್ಧತೆಗೆ ಮರುಳಾಗಿ ಬಿಡ್ತಾರೆ ಸಿದ್ದಾರ್ಥ್‌ ಶುಕ್ಲಾ. ಶೋಗೆ ಬರೋಕೂ ಮೊದಲು ಸಾಕಷ್ಟು ನಟಿಯರ ಹೆಸರು ಸಿದ್ದಾರ್ಥ್‌ ಶುಕ್ಲಾ ಜೊತೆ ತಳುಕು ಹಾಕಿಕೊಂಡಿತ್ತು. ಆದ್ರೆ ಯಾವುದೂ ಹೆಚ್ಚು ದಿನ ನಡೆದಿರಲಿಲ್ಲ. ಸಿದ್ದಾರ್ಥ್‌ರದ್ದು ಮೂಲತಃ ತುಂಬಾನೇ ಕೋಪದ ಸ್ವಭಾವ. ಸೆಟ್‌ನಲ್ಲೂ ಬೇಗನೆ ಸಿಟ್ಟು ಮಾಡಿಕೊಳ್ಳೋರು. ಹಲ್ಲೆ ಮಾಡಿರೋ ಬಗ್ಗೆಯೂ ಹಿಂದೆ ವರದಿಯಾಗಿದ್ದಿದೆ. ಸಾಕಷ್ಟು ಬಾರಿ ಕೋ ಌಕ್ಟರ್‌ ಜೊತೆಯೂ ಜಗಳ ಆಡಿದ ಉದಾಹರಣೆಯೂ ಇದೆ. ಹೀಗಾಗಿಯೇ ಎಲ್ಲಾ ಗೆಳತಿಯರೂ ದೂರಾಗಿದ್ರು ಅನ್ನೋದು ಹಿಂದಿ ಕಿರುತೆರೆ ಅಂಗಳದಲ್ಲಿ ಕೇಳಿಬರೋ ಮಾತು. ಆದ್ರೆ ಬಿಗ್‌ಬಾಸ್‌ ಸೀಜನ್‌ 13 ಸಿದ್ದಾರ್ಥ್‌ ಶುಕ್ಲಾರನ್ನ ಬದಲಿಸಿಬಿಟ್ಟಿತ್ತು.

ಮುಗ್ಧ ಸ್ನೇಹಕ್ಕೆ ಬದಲಾಗಿದ್ದ ಌಂಗ್ರಿ ಯಂಗ್‌ ಮ್ಯಾನ್‌

blank

ಸಿದ್ದಾರ್ಥ್‌ ಶುಕ್ಲಾಗೆ ಯಾವಾಗ ಶೆಹನಾಜ್ ಗಿಲ್‌ ಪರಿಚಯ ಆಯ್ತೋ ಸೀಜನ್‌ 13ನಲ್ಲಿ ಎಲ್ಲರಿಗೂ ಸಿದ್ದಾರ್ಥ್ ಒಳಗಿದ್ದ ಒಬ್ಬ ಹುಡುಗಾಟದ ಹುಡುಗ ಪರಿಚಯ ಆಗಿದ್ದ. ಇವರಿಬ್ಬರ ತುಂಟಾಟ ಶೋನ ಹೈಲೈಟ್‌ ಆಗಿತ್ತು. ಆಗಾಗ ಜಗಳ ಮತ್ತೆ ಪ್ರೀತಿ.. ಯಾವತ್ತೂ ಅಳಿಸೋಕಾಗದ ಸ್ನೇಹ.. ಇದೇ ಇವರಿಬ್ಬರ ರಿಲೇಶನ್‌ಶಿಪ್‌ನ ಹೈಲೈಟ್‌. ಶೋನ ಮಧ್ಯಂತರದವರೆಗೂ ಸ್ನೇಹದ ಬೆಸುಗೆಯಲ್ಲಿದ್ದ ಸಂಬಂಧ ಮಧ್ಯಂತರದ ಬಳಿಕ ಬದಲಾಗಿತ್ತು. ಶೆಹನಾಜ್‌ ಗಿಲ್‌ ಸಿದ್ದಾರ್ಥ್ ಶುಕ್ಲಾರನ್ನ ಪ್ರೀತಿಸೋಕೆ ಶುರು ಮಾಡಿದ್ರು. ಇದನ್ನ ಶೋನಲ್ಲೇ ಅನೌನ್ಸ್‌ ಕೂಡ ಮಾಡಿದ್ರು. ಆದ್ರೆ ತನಗಿಂತ ಸುಮಾರು 14 ವರ್ಷ ಕಿರಿಯವರಾದ ಶೆಹನಾಜ್‌ರನ್ನ ಹ್ಯಾಂಡಲ್‌ ಮಾಡೋದೆ ಸಿದ್ದಾರ್ಥ್‌ಗೆ ಕಷ್ಟದ ಕೆಲಸವಾಗಿತ್ತು. ಶೋ ಮುಗಿಯೋ ವೇಳೆಗೆ ಇವರಿಬ್ಬರೂ ತುಂಬಾನೆ ಹಚ್ಚಿಕೊಂಡುಬಿಟ್ಟಿದ್ರು. ಫಿನಾಲೆ ದಿನವೂ ಪ್ರೀತಿಯ ಜಗಳ ನೋಡುಗರನ್ನ ಮೋಡಿ ಮಾಡಿತ್ತು. ಶೋ ಮುಗಿದ ಬಳಿಕ ಶೆಹನಾಜ್‌ ಮುಜ್‌ ಸೇ ಶಾದಿ ಕರೋಗಿ ಶೋನಲ್ಲಿ ಪಾರ್ಟಿಸಿಪೇಟ್‌ ಮಾಡಿದ್ರು. ಆ ಶೋನಲ್ಲೂ ಆಕೆ ಹೇಳಿದ್ದು ಸಿದ್ದಾರ್ಥ್‌ ಶುಕ್ಲಾ ಹೆಸರೇ.

blank

ಶೋಗಳು ಮುಗಿದ್ರೂ ಇವರಿಬ್ಬರ ಸ್ನೇಹ ಬದಲಾಗಲಿಲ್ಲ. ಆಗಾಗ ಮೀಟ್‌ ಆಗೋದು, ಎರಡೂ ಫ್ಯಾಮಿಲಿ ಜೊತೆಗೆ ಬರ್ತ್‌ಡೇ ಸೆಲಬ್ರೇಟ್‌ ಮಾಡೋದು ಎಲ್ಲವೂ ನಡೆದಿತ್ತು. ಶೆಹನಾಜ್‌ ಗಿಲ್‌ ಅವ್ರಿಗೂ ತುಂಬಾ ಅವಕಾಶಗಳು ಸಿಗೋಕೆ ಶುರುವಾಗುತ್ತೆ. ಆಗಲೂ ಸ್ನೇಹಕ್ಕೆ ಬ್ರೇಕ್‌ ಬಿದ್ದಿರಲಿಲ್ಲ. ಈ ಸ್ನೇಹ ಎಂಥಾ ಮ್ಯಾಜಿಕ್‌ ಮಾಡಿಬಿಡುತ್ತೆ ಅಂದ್ರೆ ಸಿದ್ದಾರ್ಥ್‌ ಶುಕ್ಲಾರ ಌಂಗ್ರಿಯಂಗ್‌ ಮ್ಯಾನ್‌ ಇಮೇಜ್‌ನ ಬದಲಿಸಿಬಿಡುತ್ತೆ. ಗುರ್‌ ಅಂತಿದ್ದ ಸಿದ್ದಾರ್ಥ್‌ ಸ್ನೇಹ ಜೀವಿಯಾಗಿದ್ರು. ತಾಳ್ಮೆ ಕಲಿತುಕೊಂಡಿದ್ರು. ಮಕ್ಕಳಂತೆ ಜೀವನ ಎಂಜಾಯ್‌ ಮಾಡೋಕೆ ಶುರು ಮಾಡಿದ್ರು. ಮುಗ್ಧ ಸ್ನೇಹ ಅನಾವರಣ ಆಗಿದ್ದೇ ಆಗ. ಇವತ್ತಿಗೂ ಇವರಿಬ್ಬರೂ ಪ್ರೀತಿಸ್ತಾರೆ ಅನ್ನೋ ಮಾತು ಜೋರಾಗಿದ್ರೂ, ಶೆಹನಾಜ್‌ ಈ ಬಗ್ಗೆ ಮಾಧ್ಯಮಗಳಲ್ಲೇ ಇಂಗಿತ ವ್ಯಕ್ತಪಡಿಸಿದ್ರೂ ಸಿದ್ದಾರ್ಥ್‌ ಇಲ್ಲ ನಮ್ಮದು ಸ್ನೇಹಕ್ಕಿಂತಲೂ ಮಿಗಿಲಾದ ಸಂಬಂಧ ಅಂದಿದ್ರು. ಆದ್ರಿವತ್ತು ಅದೇ ಸಿದ್ದಾರ್ಥ್‌ ಶುಕ್ಲಾ ಎಲ್ಲರನ್ನೂ, ಎಲ್ಲವನ್ನೂ ಬಿಟ್ಟು ದೂರ ಸಾಗಿದ್ದಾರೆ.

blank

ಶೆಹನಾಜ್‌ ಗಿಲ್‌ ಈ ಆಘಾವನ್ನ ಹೇಗೆ ಸಹಿಸಿಕೊಳ್ತಾರೋ ಗೊತ್ತಿಲ್ಲ. ಮುಂಬೈಗೆ ಬಂದಾಗೆಲ್ಲಾ ಸಿದ್ದಾರ್ಥ್ ಶುಕ್ಲಾ ಜೊತೆ, ಅವ್ರ ತಾಯಿ ಜೊತೆ ಇರ್ತಿದ್ದ ಶೆಹನಾಜ್‌ಗೆ ಇದು ದೊಡ್ಡ ಆಘಾತ. ತನ್ನ ಅತ್ಯಾಪ್ತ ಸ್ನೇಹಿತನ ಈ ರೀತಿಯ ಸಾವು ಶೆಹನಾಜ್‌ ಗಿಲ್‌ರನ್ನ ಸದ್ಯ ಆಘಾತಕ್ಕೆ ತಳ್ಳಿಬಿಟ್ಟಿದೆ. ಇದು ಯಾರೂ ನಿರೀಕ್ಷಿಸದ, ಯಾರೂ ಊಹಿಸದ ಆಘಾತ.

ವಿಶೇಷ ಬರಹ: ವಿದ್ಯಶ್ರೀ, ಆ್ಯಂಕರ್ ಡೆಸ್ಕ್ 

Source: newsfirstlive.com Source link