ವ್ಯಾಕ್ಸಿನ್​ ಹಾಕಲು ಬಂದ ಸಿಬ್ಬಂದಿಗೆ ದೊಣ್ಣೆ ಹಿಡಿದು ಅಟ್ಟಾಡಿಸಿದ ಭೂಪ

ವ್ಯಾಕ್ಸಿನ್​ ಹಾಕಲು ಬಂದ ಸಿಬ್ಬಂದಿಗೆ ದೊಣ್ಣೆ ಹಿಡಿದು ಅಟ್ಟಾಡಿಸಿದ ಭೂಪ

ಯಾದಗಿರಿ : ವ್ಯಾಕ್ಸಿನ್ ಹಾಕಲು ಬಂದ ಆರೋಗ್ಯ ಸಿಬ್ಬಂದಿಗೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊರ್ವ, ದೊಣ್ಣೆ ಹಿಡಿದು ಬೆನ್ನಟ್ಟಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ನಡೆದಿದೆ.

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಗ್ರಾಮಕ್ಕೆ ಕೊರೊನಾ ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಗೆ ತಮ್ಮ ಊರಿಗೆ ಕಾಲಿಡುತ್ತಿದ್ದಂತೆ ಅವಾಜ್​ ಹಾಕಿದ್ದು, ಗ್ರಾಮ ಪ್ರವೇಶ ಮಾಡದಂತೆ ಊರ ಬಾಗಿಲಿನ ಬಳಿ ದೊಣ್ಣೆ ಹಿಡಿದು ನಿಂತಿ ಅಡ್ಡಪಡಿಸಿದ್ದಾನೆ. ನಮ್ಮೂರಲ್ಲಿ ನೀವು ಯಾರು ಕಾಲಿಡೋದು ಬೇಡ.. ಯಾರು ಬರ್ತಾರೆ ಬರಲಿ, ಡಿಸಿ ಬಂದು ನನ್ನ ಟಚ್ ಮಾಡ್ಲಿ ನೋಡೋಣ ಎಂದು ಹಾವಳಿ ಇಟ್ಟಿದ್ದಾನೆ. ದೊಣ್ಣೆ ಹಿಡಿದು ಬಂದ ವ್ಯಕ್ತಿಯ ವರ್ತನೆ ಕಂಡು ಗಾಬರಿಗೊಳಗಾದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ವ್ಯಾಕ್ಸಿನ್​ ಹಾಕದೆ ಅಲ್ಲಿಂದ ವಾಪಸ್​ ಆಗಿದ್ದಾರೆ.

ಇದನ್ನೂ ಓದಿ:  ಈ ಬಾರಿ ಕನ್ನಡಿಗರಿಗೇ ಕಮಿಷನರ್ ಪಟ್ಟ.. ಬೆಂಗಳೂರಿಗೆ ನೂತನ ಸಾರಥಿಯಾಗೋದು ಇವರೇನಾ..?

ಇದನ್ನೂ ಓದಿ: ಕಮಿಷನರ್ ಕಮಲ್​ಪಂತ್ ಖುದ್ದಾಗಿ ಕೋರ್ಟ್​ ಮುಂದೆ ಹಾಜರಾಗ್ಬೇಕು- ಹೈಕೋರ್ಟ್ ಹೀಗಂದಿದ್ದೇಕೆ..?

ಇದನ್ನೂ ಓದಿ: ಸೆ.6 ರಿಂದ 6, 7 ಮತ್ತು 8ನೇ ತರಗತಿ ಶಾಲೆ ಆರಂಭ -ಸಚಿವ ಆರ್.ಅಶೋಕ್​

Source: newsfirstlive.com Source link