ಕಟ್ಟಾ ರಾಜಕೀಯ ವಿರೋಧಿಗಳನ್ನೂ ಒಂದೇ ವೇದಿಕೆಯಲ್ಲಿ ಕೂರಿಸಿದ ಕವಿಮನಸು

ಕಟ್ಟಾ ರಾಜಕೀಯ ವಿರೋಧಿಗಳನ್ನೂ ಒಂದೇ ವೇದಿಕೆಯಲ್ಲಿ ಕೂರಿಸಿದ ಕವಿಮನಸು

ರಾಮನಗರ: ರಾಜಕಾರಣಿಗಳಿಗೂ ಕವಿಗಳಿಗೂ ಅಜಗಜಾಂತರ ಸಂಬಂಧವಿದೆ. ರಾಜಕಾರಣಿಗಳು ತಮ್ಮ ಬೆಳವಣಿಗೆಗಾಗಿ ಎದುರಾಳಿ ಪಕ್ಷಗಳ ವಿರೋಧ ಕಟ್ಟಿಕೊಳ್ತಾರೆ. ಅಣ್ಣ ತಮ್ಮಂದಿರೇ ಎರಡೆರಡು ಪಕ್ಷಗಳಲ್ಲಿ ಗುರುತಿಸಿಕೊಂಡು ವೈಯಕ್ತಿಕ ದ್ವೇಷ ಬೆಳೆಸಿಕೊಂಡ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.

ಇದನ್ನೂ ಓದಿ: ತಿಹಾರ್ ಜೈಲಿಗೆ ಹೋಗಿಬಂದ ಮೇಲೆ ಡಿಕೆಎಸ್​ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ-ಯೋಗೇಶ್ವರ್

ಆದರೆ ಕವಿಯ ಗುಣ ಹಾಗಲ್ಲ.. ಕವಿ ಒಡೆದ ಮನಸ್ಸುಗಳನ್ನು ಒಂದಾಗಿಸುವ ಸಾಮರ್ಥ್ಯ ಉಳ್ಳವನು.. ಒಡೆದ ಹೃದಯಗಳಲ್ಲಿ ಪ್ರೀತಿಯ ಚಿಲುಮೆಯೊಡೆಯುವಂತೆ ಮಾಡುತ್ತಾನೆ.. ಸಂಬಂಧಗಳನ್ನು ಬೆಸೆಯುತ್ತಾನೆ.

ಇದನ್ನೂ ಓದಿ: ನೀನು ನನ್ನ ಮುಂದೆ ಬಚ್ಚಾ ಇದೀಯಾ.. ಲೀಡರ್ ಆಗುವ ಪ್ರಯತ್ನ ಬೇಡ- ಯೋಗೇಶ್ವರ್​ಗೆ ಹೆಚ್​ಡಿಕೆ ಕಿಡಿ

ಹೌದು ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ ಇಂದು ಚನ್ನಪಟ್ಟಣದ ಕವಿ ಸಿದ್ದಲಿಂಗಯ್ಯನವರ ನುಡಿನಮನ ಕಾರ್ಯಕ್ರಮ ಸಾಕ್ಷಿಯಾಗಿದೆ. ಒಬ್ಬರು ಕಾಂಗ್ರೆಸ್​ನ ಸಂಸದ ಡಿ.ಕೆ. ಸುರೇಶ್, ಮತ್ತೊಬ್ಬರು ಜೆಡಿಎಸ್​ ರಾಜ್ಯಾಧ್ಯಕ್ಷ, ಮಾಹಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ.. ಮಗದೊಬ್ಬರು ಬಿಜೆಪಿ ಶಾಸಕ ಸಿ.ಪಿ. ಯೋಗೇಶ್ವರ್. ರಾಜಕೀಯದಲ್ಲಿ ಮೂವರೂ ನಾಯಕರು ಕಟ್ಟಾ ವಿರೋಧಿಗಳು. ಮೂವರ ಸಿದ್ಧಾಂತಗಳ ನಡುವೆ ಭಾರೀ ಅಂತರವಿದೆ.

ಇದನ್ನೂ ಓದಿ: ಡಿಕೆಎಸ್​-ಹೆಚ್​ಡಿಕೆ ನಡುವೆ ಬಿರುಕು; ಯೋಗೇಶ್ವರ್‌ಗೆ ಬಿಜೆಪಿಯ ಹೊಸ ಅಸೈನ್‌ಮೆಂಟ್?

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಅಂಬೇಡ್ಕರ್ ಭವನದಲ್ಲಿ ಕವಿ ಸಿದ್ದಲಿಂಗಯ್ಯನವರ ನುಡಿನಮನ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಈ ಮೂವರೂ ರಾಜಕೀಯ ವಿರೋಧಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಕಪಕ್ಕದ ಕುರ್ಚಿಗಳಲ್ಲೇ ಈ ರಾಜಕೀಯ ನಾಯಕರು ಕಾಣಿಸಿಕೊಂಡಿದ್ದು ಈ ಅಪರೂಪದ ಸಮಾಗಮಕ್ಕೆ ಕಾರ್ಯಕ್ರಮ ಸಾಕ್ಷಿಯಾಗಿದೆ.

Source: newsfirstlive.com Source link