ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್ ಲಾಯರ್​ ಟೀಂ ಬಂಧಿಸಿದ CBI

ಮಹಾರಾಷ್ಟ್ರ ಮಾಜಿ ಸಚಿವ ಅನಿಲ್​ ದೇಶ್​ಮುಖ್ ಲಾಯರ್​ ಟೀಂ ಬಂಧಿಸಿದ CBI

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಮುಂಬೈ ವಕೀಲ ಆನಂದ್ ದಾಗಾ ಅವರನ್ನು ಸಿಬಿಐ ಬಂಧಿಸಿದೆ.

ಇದನ್ನೂ ಓದಿ: ಅನಿಲ್ ದೇಶ್​ಮುಖ್​ಗೆ ಮತ್ತೆ ಸಂಕಷ್ಟ; ₹4.20 ಕೋಟಿ ಆಸ್ತಿ ಸೀಜ್ ಮಾಡಿದ ED

ಮುಂಬಯಿ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಆದೇಶ ಪಡೆದಿದ್ದು, ದಾಗಾ ಅವರನ್ನು ದೆಹಲಿ ನ್ಯಾಯಾಲಯಕ್ಕೆ ಸಿಬಿಐ ಹಾಜರುಪಡಿಸಲಿದೆ. ದಾಗಾ ಅವರನ್ನ ಸಿಬಿಐ ತನಿಖೆಯ ಮೇಲೆ ಪ್ರಭಾವ ಬೀರುತ್ತಿರುವ ಆರೋಪದ ಮೇಲೆ ಸಿಬಿಐ ವಿಚಾರಣೆಗೊಳಪಡಿಸಲಾಗಿತ್ತು. ಆನಂದ್ ದಾಗಾ ಜೊತೆಗೆ ಮತ್ತೋರ್ವ ವಕೀಲನನ್ನೂ ಸಹ ಬಂಧಿಸಲಾಗಿದೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ: ₹100 ಕೋಟಿ ಭ್ರಷ್ಟಾಚಾರ ಆರೋಪ ಪ್ರಕರಣ: ಅನಿಲ್ ದೇಶ್​ಮುಖ್​ಗೆ ED ಬುಲಾವ್, ಪಿಎ ಬಂಧನ

ಸಿಬಿಐ ಬುಧವಾರ ತನಿಖಾ ವರದಿಯ ಕಂಟೆಂಟ್​​ಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆ ಕೇಸ್ ದಾಖಲಿಸಿತ್ತು. ಕಚೇರಿ ಮತ್ತು ನಿವಾಸದಲ್ಲಿ ನಡೆಸಿದ ತಪಾಸಣೆಯ ಮಾಹಿತಿ ಲೀಕ್ ಆದ ಹಿನ್ನೆಲೆ ತಿವಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ತಿವಾರಿ ಸಹ ದೇಶ್​​ಮುಖ್​ ಟೀಂನಲ್ಲಿ ಗುರುತಿಸಿಕೊಂಡಿದ್ದು ಲಂಚ ಪಡೆಯುವಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪವಿದೆ.

Source: newsfirstlive.com Source link