ಇದ್ಯಾವ ಹೊಸ ಫ್ಯಾಷನ್..? ಏರ್​ಪೋರ್ಟ್​ನಲ್ಲಿ ಬಿಗ್​ಬಾಸ್ ಸ್ಪರ್ಧಿ ಡ್ರೆಸ್​ ಕಂಡು ದಂಗಾದ ಜನ

ಇದ್ಯಾವ ಹೊಸ ಫ್ಯಾಷನ್..? ಏರ್​ಪೋರ್ಟ್​ನಲ್ಲಿ ಬಿಗ್​ಬಾಸ್ ಸ್ಪರ್ಧಿ ಡ್ರೆಸ್​ ಕಂಡು ದಂಗಾದ ಜನ

ನವದೆಹಲಿ: ಓಟಿಟಿ ಫ್ಲಾಟ್​​ಫಾರ್ಮ್​ನಲ್ಲಿ ಪ್ರಾರಂಭವಾಗಿರೋ ಬಿಗ್​ಬಾಸ್ ಹಲವು ವಿಚಾರಗಳಿಗೆ ಸುದ್ದಿಯಾಗ್ತಿದೆ. ಇನ್ನು ಈ ಬಿಗ್​ಬಾಸ್​ನ ಕಂಟೆಸ್ಟೆಂಟ್​ಗಳೂ ಸಹ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರ್ತಾರೆ. ಈ ಬಿಗ್​ಬಾಸ್​ನಿಂದ ಹೊರಬಿದ್ದ ಉರ್ಫಿ ಜಾವೇದ್ ಇತ್ತೀಚೆಗೆ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಷಯ ಅಂದ್ರೆ ಅವರು ಧರಿಸಿದ್ದ ಡ್ರೆಸ್ ಏರ್​ಪೋರ್ಟ್​ನಲ್ಲಿದ್ದವರನ್ನೆಲ್ಲ ದಂಗುಬಡಿಸಿದೆ.

ಉರ್ಫಿ ಜಾವೇದ್ ಏರ್​ಪೋರ್ಟ್​ನಲ್ಲಿ ರಿಪ್ಡ್​​ ಡೆನಿಮ್ ಜಾಕೆಟ್ ಧರಿಸಿದ್ದಾರೆ. ಜಾಕೆಟ್ ಹೇಗಿತ್ತು ಅಂದ್ರೆ ಅವರು ಧರಿಸಿದ ಲೈಟ್ ಪಾಸ್ಟೆಲ್ ಕಲರ್​ನ ಬ್ರಾವನ್ನು ಹೈಲೈಟ್ ಮಾಡುವಂತಿತ್ತು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ತಮ್ಮ ಡ್ರೆಸ್​ನಿಂದಾಗಿ ಟ್ರೋಲ್​ಗೆ ಒಳಗಾಗಿದ್ದಾರೆ.

24 ವರ್ಷದ ಉರ್ಫಿ ಜಾವೇದ್ 2016 ರಲ್ಲಿ ಬಡೇ ಭೈಯ್ಯ ಕಿ ದುಲ್ಹಾನಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು.. ಮೆರಿ ದುರ್ಗ, ಬೆಪನ್ನಾ ಮತ್ತು ಪಂಚ್ ಬೀಟ್ ಸೀಸನ್​2 ನಲ್ಲಿ ಕಾಣಿಸಿಕೊಂಡಿದ್ದಾರೆ.

Source: newsfirstlive.com Source link