ಹಾವೇರಿಯಲ್ಲಿ ಹುಚ್ಚು ಕೋತಿಯ ದಾಳಿ..ಗಂಭೀರವಾಗಿ ಗಾಯಗೊಂಡ ರೈತ

ಹಾವೇರಿಯಲ್ಲಿ ಹುಚ್ಚು ಕೋತಿಯ ದಾಳಿ..ಗಂಭೀರವಾಗಿ ಗಾಯಗೊಂಡ ರೈತ

ಹಾವೇರಿ : ಕೋತಿಗಳಿಗೆ ಆಟ ಮನುಷ್ಯರಿಗೆ ಸಂಕಟ ಎಂಬ ಮಾತು ಅಕ್ಷರಶಃ ಇಲ್ಲಿ ಸತ್ಯವಾಗುತ್ತಿದೆ. ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಕೋತಿಗಳ ಮಂಗಾಟಕ್ಕೆ ಸ್ಥಳೀಯರು ಹೈರಾಣಗಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿರೋ ಜನರ ಮೇಲೆ ಮನಸೋ ಇಚ್ಛೆ ದಾಳಿ ಮಾಡುತ್ತಿರುವ ಕೋತಿಗಳ ದಾಳಿಗೆ ಜನರು ಭಯಭೀತರಾಗಿದ್ದು, ಪರಿಣಾಮ ರೈತನೋರ್ವನ ಮೇಲೆ ಕೋತಿ ದಾಳಿ ನಡೆಸಿ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ನೀರಲಗಿ ಗ್ರಾಮದಲ್ಲಿ ನಡೆದಿದೆ.

blank

ಇದನ್ನೂ ಓದಿ: ಪ್ರವಾಹದ ಸುಳಿಗೆ ಸಿಲುಕಿದ ವಾನರ ಸೈನ್ಯ.. 4 ದಿನದಿಂದ ಆಹಾರ ಇಲ್ಲದೇ ಪರದಾಟ

ಆಕಳಿಗೆ ಮೇವು ತರಲು ರೈತ ಗದ್ದೆ ಬಳಿ ಹೊರಟಿದ್ದಾಗ ಹಿಂದಿನಿಂದ ಏಕಾಏಕಿ ದಾಳಿ ಮಾಡಿದ ಹುಚ್ಚು ಹಿಡಿದ ಕೋತಿ ರೈತನ ಮೇಲೆರಗಿ ದಾಳಿ ನಡೆಸಿದೆ. ಪರಿಣಾಮ ರೈತನ ಬಲಗಾಲಿಗೆ ಕಚ್ಚಿದ್ದು ರೈತ ಗಂಭಿರವಾಗಿ ಗಾಯಗೊಂಡಿದ್ದಾನೆ. ಕೋತಿಯ ಕಾಟಕ್ಕೆ ಜನ ಬೆಚ್ಚಿಬಿದ್ದಿದ್ದು, ಅರಣ್ಯಾಧಿಕಾರಿಗಳು ಬಾರದ ಹಿನ್ನೆಲೆ ಕೋತಿಯ ಸೆರೆಗಾಗಿ ಗ್ರಾಮಸ್ಥರೆ ಕಾರ್ಯಾಚರಣೆಗೆ ಇಳಿದಿದ್ದಾರೆ.

ಹೊಸ ಎಟಿಎಂ ಕಾರ್ಡ್​​ ನೀಡ್ತೀವಿ ಅಂತೇಳಿ ಓಟಿಪಿ ಪಡೆದು ₹1 ಲಕ್ಷ ವಂಚನೆ

Source: newsfirstlive.com Source link