ನನ್ನ ಸಹೋದರ ಪವನ್ ಕಲ್ಯಾಣ್ ಬೆಂಕಿ ಕಿಡಿ.. ಪವರ್​ಸ್ಟಾರ್ ಹುಟ್ಟುಹಬ್ಬಕ್ಕೆ ಚಿರಂಜೀವಿ ಸ್ಪೆಷಲ್ ವಿಶ್

ನನ್ನ ಸಹೋದರ ಪವನ್ ಕಲ್ಯಾಣ್ ಬೆಂಕಿ ಕಿಡಿ.. ಪವರ್​ಸ್ಟಾರ್ ಹುಟ್ಟುಹಬ್ಬಕ್ಕೆ ಚಿರಂಜೀವಿ ಸ್ಪೆಷಲ್ ವಿಶ್

ಟಾಲಿವುಡ್​ನ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಇಂದು ತಮ್ಮ 50 ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಾರೆ. ಟಾಲಿವುಡ್​ನ ಅನೇಕ ಸ್ಟಾರ್​ ನಟ ನಟಿಯರು ಪವನ್​ ಬರ್ತ್​ಡೇ ಪ್ರಯುಕ್ತ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಟಾಲಿವುಡ್​ನ ಮೆಗಾ ಸ್ಟಾರ್​ ಕೂಡ ತಮ್ಮ ಪ್ರೀತಿಯ ಸಹೋದರ ಪವನ್​ ಕಲ್ಯಾಣ್​ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಹೌದು ಕೆಲ ವರ್ಷಗಳ ಹಿಂದೆ ಟಾಲಿವುಡ್​ನ ಈ ಮೆಗಾ ಸಹೋದರದ ಮಧ್ಯೆ ಕೆಲ ಮನಸ್ತಾಪ ಉಂಟಾಗಿತ್ತು ಎಂಬ ಮಾತು ಕೇಳಿ ಬಂದಿತ್ತು. ಅದಾದ ಬಳಿಕ ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಇಬ್ಬರೂ ಒಟ್ಟಿಗೆ ಅಷ್ಟಾಗಿ ಕಾಣಿಸಿಕೊಳುತ್ತಿಲ್ಲ. ಇತ್ತೀಚೆಗೆ ಚಿರಂಜೀವಿ ಅವರ ಹುಟ್ಟಹಬ್ಬ ಕಾರ್ಯಕ್ರಮದಲ್ಲಿ ಮೂವರು ಸಹೋದರರು ಒಟ್ಟಿಗೇ ಕಾಣಿಸಿಕೊಂಡಿದ್ದರು. ಸದ್ಯ ಈ ಸಹೋದರನ ಹುಟ್ಟಹಬ್ಬಕ್ಕೆ ವಿಶ್​ ಮಾಡಿ ಚಿರಂಜೀವಿ ಟ್ವೀಟ್​ ಮಾಡಿದ್ದಾರೆ.

ಇನ್ನು “ಬಾಲ್ಯದಿಂದಲೂ ಸಮಾಜ ಬಗ್ಗೆಯೇ ಕಲ್ಯಾಣ್​​ರ ಪ್ರತಿಯೊಂದು ಆಲೋಚನೆ.. 10 ಜನಕ್ಕೆ ಒಳ್ಳೆಯದಾಗಬೇಕು ಎಂದು ಪ್ರತಿಕ್ಷಣ ಯೋಚನೆ ಮಾಡುವ ಬೆಂಕಿ ಕಿಡಿ.. ಪವನ್ ಕಲ್ಯಾಣ್​ ತನ್ನ ಗುರಿಯನ್ನು ತಲುಪಬೇಕು ಅಂತ ಆಶಿಸುತ್ತಿದ್ದೇನೆ.. ಸಹೋದರನಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಂತ ಚಿರಂಜೀವಿ ಟ್ವೀಟ್ ಮಾಡುವ ಮೂಲಕ ಪವನ್​ ಕಲ್ಯಾಣ್​ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನು ಪವನ್​ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಗೆ ಇಂದು ಪವನ್​ ಸಿನಿಮಾಗಳ ಭರ್ಜರಿ ಗಿಫ್ಟ್​ಗಳು ಸಿಗಲಿದೆ.

Source: newsfirstlive.com Source link