₹40 ಲಕ್ಷ ವಂಚನೆ ಮಾಡಿದ್ದಾರೆ ಅಂತ ಉದ್ಯಮಿ ದೂರು -ಶಿಲ್ಪಾ ಶೆಟ್ಟಿ, ರಾಜ್​​ ಕುಂದ್ರಾಗೆ ಹೊಸ ಸಂಕಷ್ಟ

₹40 ಲಕ್ಷ ವಂಚನೆ ಮಾಡಿದ್ದಾರೆ ಅಂತ ಉದ್ಯಮಿ ದೂರು -ಶಿಲ್ಪಾ ಶೆಟ್ಟಿ, ರಾಜ್​​ ಕುಂದ್ರಾಗೆ ಹೊಸ ಸಂಕಷ್ಟ

ಅಶ್ಲೀಲ ಸಿನಿಮಾ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿರುವ ಉದ್ಯಮಿ ರಾಜ್​​ ಕುಂದ್ರಾ ಹಾಗೂ ಪತ್ನಿ ಶಿಲ್ಪಾ ಶೆಟ್ಟಿಗೆ ಹೊಸ ಸಂಕಷ್ಟ ಎದುರಾಗಿದ್ದು, ದೆಹಲಿ ಮೂಲದ ಉದ್ಯಮಿಯೊಬ್ಬರು ಸ್ಟಾರ್ ದಂಪತಿ ವಿರುದ್ಧ ವಂಚನೆ ಪ್ರಕರಣ ದಾಖಲು ಮಾಡಿದ್ದಾರೆ.

ರಾಜ್​ ಕುಂದ್ರಾ ಸೇರಿದಂತೆ ಹಲವು ತಮ್ಮನ್ನು ಮುಂಬೈ ಮೂಲದ ಕಂಪನಿವೊಂದರಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು. ಆದರೆ ಇದುವರೆಗೂ ಸಂಸ್ಥೆಯಿಂದ ಹಣ ವಾಪಸ್ ಬಂದಿಲ್ಲ. ಸುಮಾರು 40 ಲಕ್ಷ ರೂಪಾಯಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದೇನೆ. ಆದರೆ ಆ ಹಣವನ್ನು ಅಕ್ರಮ ಚಟುವಟಿಕೆ ನಡೆಸಲು ಬಳಕೆ ಮಾಡಿಕೊಂಡಿದ್ದಾರೆ ಎಂದು ಉದ್ಯಮಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಮೋಸ ಮತ್ತು ವಂಚನೆ ಸೇರಿದಂತೆ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ, ಮಹಿಳೆಯರ ಪ್ರಾತಿನಿಧ್ಯ (ನಿಷೇಧ) ಕಾಯ್ದೆ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್​​ಗಳ ಅನ್ವಯ ರಾಜ್​ ಕುಂದ್ರಾ ದಂಪತಿ ಸೇರಿದಂತೆ ಇತರೇ ಆರು ಮಂದಿಯ ವಿರುದ್ಧ ದೂರು ದಾಖಲು ಮಾಡಿದ್ದಾರೆ ಅಂತ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

Source: newsfirstlive.com Source link