ಎಲ್ಲೆಲ್ಲೂ ಹಬ್ಬಿದ ‘ಪರಮ ಸುಂದರಿ’ ಪರಿಮಳ… ಹಾಡು​ ಕೇಳಿದ್ರೆ ಕುಣಿತಾರೆ ಅಭಿಮಾನಿಗಳು

ಎಲ್ಲೆಲ್ಲೂ ಹಬ್ಬಿದ ‘ಪರಮ ಸುಂದರಿ’ ಪರಿಮಳ… ಹಾಡು​ ಕೇಳಿದ್ರೆ ಕುಣಿತಾರೆ ಅಭಿಮಾನಿಗಳು

ಯಾವುದೇ ಹಾಡಿನ ರಾಗ ಕೇಳುಗರ ಮನಸಿನಲ್ಲಿ ಕಾಡಬೇಕು, ಮನ ಬಿಚ್ಚಿ ಹಾಡುವಂತಾಗ ಬೇಕು , ಹಾಡುತ್ತಾ ಕುಣಿಯುವಂಗೆ ಆಗಬೇಕು..ಆಗ್ಲೇ ಆ ಹಾಡು ಕಂಪೋಸ್ ಮಾಡಿಸಿ ಹಾಡಿಸಿದಕ್ಕೆ ಸಾರ್ಥಕವಾಗೋದು.ಬಹು ದಿನಗಳ ನಂತರ ಎ.ಆರ್​.ರಹಮಾನ್ ಕಂಪೋಸ್ ಮಾಡಿರೋ ಹಾಡು ಮ್ಯೂಸಿಕ್ ಪ್ರೇಮಿಗಳ ಮನೆ ಮನದೊಳಗೆ ಮೇಳೈಸುತ್ತಿದೆ. ಈಗ ಎಲ್ಲಿ ನೋಡಿದ್ರು ಪರಂ ಪರಂ ಪರಮ್​ ಸುಂದ್ರಿಯದ್ದೆ ಸದ್ದು.

blank

ಕೆಲವೊಂದು ಸಲ ಹಾಡಾಗಲಿ ಸಿನಿಮಾವಾಗಲಿ ಭಾಷೆಯ ಗಡಿಗುಡಿಗಳನ್ನ ಮೀರಿ ಚಿತ್ರಪ್ರೇಮಿಗಳ ಮನಸಿನಲ್ಲಿ ಉಳಿದು ಉತ್ಸವ ಮಾಡಿ ಬಿಡ್ತಾವೆ.. ಅದರಂತೆ ‘‘ಹಾಯ್ ಮೇರಿ ಪರಂ ಪರಂ ಪರಮ ಸುಂದರಿ’’ ಹಾಡು ಸದ್ದು ಸಂಭ್ರಮ ಮಾಡ್ತಿದೆ.. ಯಾರ್ ಸೋಶಿಯಲ್ ಅಂಗಳದ ಮನೆ ಮನದಲ್ಲೂ ಇದೇ ಹಾಡಿನದ್ದೆ ಪರಿಮಳ.

blank

ಥಿಯೇಟರ್​​ನಲ್ಲಿ ಪ್ರೇಕ್ಷಕ ಸಾಗರ ತುಂಬಿ ಆ ಸಿನಿಮಾದ ಹಾಡು ಮತ್ತು ದೃಶ್ಯಗಳ ಮೆಚ್ಚುಗೆ ದುಂಬಿ ಎಲ್ಲಾ ಕಡೆ ಹಬ್ಬಿದ್ರೆ ಮಾತ್ರ ಸಿನಿಮಾ ಹಿಟ್ಟು ಅನ್ನೊ ಕಾಲ ಈಗ ದೂರ ಸರಿತ್ತಿದೆ.ಅಂಗೈಯಲ್ಲೇ ಆಕಾಶ ನೋಡೋ ಟೆಕ್ನಾಲಜಿಯ ಟೈಮ್ ಇದು.. ವಾಕರಿಕೆ ಬರೋಷ್ಟು ರಂಜನೆ ಹೆಜ್ಜೆ ಹೆಜ್ಜೆಗೂ ಸಿಗುತ್ತೆ.ಆದ್ರೆ ಯಾವುದು ಶಕ್ತಿಶಾಲಿ ಎಂಟರ್​​ಟೈನ್ಮೆಂಟ್ ಆಗಿರುತ್ತಾವೋ ಅಂತಹ ಸಿನಿಮಾಗಳು ಮಾತ್ರ ಈಗೀನ ಜನರ ಮನಸನ್ನ ಕದಿಯುತ್ತವೆ.ಈಗ ಓಟಿಟಿ ಫ್ಲಾಟ್ ಫಾರ್ಮ್​​ನಲ್ಲಿ ಬಿಡುಗಡೆಯಾಗಿರೋ ಮಿಮ್ಮಿ ಸಿನಿಮಾದ ಬಗ್ಗೆ ಭಾರಿ ಮೆಚ್ಚುಗೆಯ ಮಳೆ ಸೋಶಿಯಲ್ ಮೀಡಿಯಾದ ಹೊಳೆಯಲ್ಲಿ ಹರಿಯುತ್ತಿದೆ.

ಎಲ್ಲೆಲ್ಲೂ ಹಬ್ಬಿದೆ ಪರಮ ಸುಂದರಿಯ ಪರಿಮಳ
ಎಲ್ಲಾ ಅಂಗಳದಲ್ಲಿ ಪರಮಸುಂದ್ರಿ ಸದ್ದು ಸಂಭ್ರಮ

ಎ.ಆರ್​​.ರಹಮಾನ್ ಅದ್ಯಾಕೋ ಇತ್ತಿಚೆಗೆ ತಮ್ಮ ಟ್ಯೂನ್​​ಗಳಿಂದ ಚಮತ್ಕಾರವನ್ನ ಮಾಡಲು ಆಗದೇ ಸೈಲೆಂಟ್ ಆಗಿದ್ರು.. ಆದ್ರೆ ಬಂತು ನೋಡಿ ಈ ಮಿಮ್ಮಿ ಸಿನಿಮಾ.ಮಿಮ್ಮಿ ಸಿನಿಮಾನೂ ಸೂಪರು , ರೆಹಮಾನ್ ಮ್ಯೂಸಿಕೂ ಡೂಪರು ಅನ್ನೊಂಗೆ ಆಗಿದೆ.. ರೆಹಮಾನ್ ಸಂಯೋಜಿಸಿರುವ ಅಮಿತಾಭ್ ಭಟ್ಟಚಾರ್ಯ ಸಾಹಿತ್ಯ ಬ್ಯುಟಿಫುಲ್ ಗಾಯಕಿ ಶ್ರೇಯಾ ಘೋಷಾಲ್ ಹಾಡಿರೋ ಪರಂ ಪರಂ ಸುಂದರಿ ಹಾಡು ಈಗ ಕೇಳುಗರ ದಿಲ್ಕಿ ಫೇವರೆಟ್​. ಕೃತಿ ಸನೂನ್ ಕುಣಿತದಂತೆ ಕ್ಯಾಚಿ ಸ್ಟೆಪ್ಸ್​ ಅನ್ನ ಈಗ ಅಭಿಮಾನಿಗಳು ಹಾಕಿ ಸಂತೋಷ ಪಡ್ತಿದ್ದಾರೆ.

blank
ಬರಿ ಅಭಿಮಾನಿಗಳು ಮಾತ್ರ ಪರಂ ಸುಂದರಿ ಹಾಡಿಗೆ ಕುಣಿದಿಲ್ಲ. ನಮ್ಮ ಸ್ಯಾಂಡಲ್​ವುಡ್ ಅಂಗಳದ ನಟಿಮಣಿಯರು ಕುಣಿದು ಕುಪ್ಪಳಿಸಿದ್ದಾರೆ.ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ​,ಕೃಷಿ ತಾಪಂಡ ,ಪಟಾಕಿ ಪೋರಿ ಆಶಿಕಾ ರಂಗನಾಥ್ , ಸಿರಿಯಲ್ ನಟಿ ಪಲ್ಲವಿ ಗೌಡ, ಬಿಗ್ ಬಾಸ್ ಖ್ಯಾತಿಯ ಕಿಶನ್ ಸೇರಿದಂತೆ ಅನೇಕ ತಾರಾ ಮಣಿಗಳು ಪರಂ ಪರಂ ಪರಮ ಸುಂದರಿ ಎಂದು ಹಾಡಿ ಕುಣಿದಿದ್ದಾರೆ. 11 ಕೋಟಿಗೆ ಹೆಚ್ಚಿನ ವೀಕ್ಷಣೆಯನ್ನ ಯೂಟ್ಯೂಬ್​​ನಲ್ಲಿ ಪರಮ ಸುಂದರಿ ಹಾಡು ಕಂಡಿದೆ. ಈಗ ಎಲ್ಲಿ ನೋಡಿದ್ರು ಕೃತಿ ಸನೂನ್ ಪರಮ ಸುಂದರಿಯ ಹಾಡಿನ ಡ್ಯಾನ್ಸ್ ಝಲಕ್​​ನದ್ದೇ ಹಾವಳಿ ದೀಪಾವಳಿ.

 

Source: newsfirstlive.com Source link