ಸಿದ್​​ ಸಾವಿನ ಸುತ್ತ ಅನುಮಾನಗಳ ಹುತ್ತ; ನಿಖರ ಕಾರಣ ತಿಳಿದುಬಂದಿಲ್ಲ ಎಂದ ಪೊಲೀಸರು-ವೈದ್ಯರು

ಸಿದ್​​ ಸಾವಿನ ಸುತ್ತ ಅನುಮಾನಗಳ ಹುತ್ತ; ನಿಖರ ಕಾರಣ ತಿಳಿದುಬಂದಿಲ್ಲ ಎಂದ ಪೊಲೀಸರು-ವೈದ್ಯರು

ಬಾಲಿವುಡ್​ನ ರಿಯಾಲಿಟಿ ಸ್ಟಾರ್ ಸಿದ್ಧಾರ್ಥ್ ಶುಕ್ಲಾ ಇಂದು ಸಾವನ್ನಪ್ಪಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಈವರೆಗೆ ವರದಿಯಾಗಿತ್ತು. ಆದರೆ ಇದೀಗ ಸಿದ್ಧಾರ್ಥ್ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ: ಹಿಂದಿ ಬಿಗ್​​ಬಾಸ್​​ 13ರ ವಿನ್ನರ್ ಸಿದ್ದಾರ್ಥ್​ ಶುಕ್ಲಾ ಹೃದಯಾಘಾತದಿಂದ ನಿಧನ

ಇದಕ್ಕೆ ಕಾರಣವಾಗಿದ್ದು ಮುಂಬೈನ ಕೂಪರ್ ಆಸ್ಪತ್ರೆ ನೀಡಿರುವ ಹೇಳಿಕೆ.. ಕೂಪರ್ ಆಸ್ಪತ್ರೆ ಸಿದ್ಧಾರ್ಥ್ ಸಾವಿನ ಕಾರಣವನ್ನು ಇನ್ನಷ್ಟೇ ಪತ್ತೆಹಚ್ಚಬೇಕಿದೆ ಎಂದು ಹೇಳಿದೆ.

ಇದನ್ನೂ ಓದಿ: ‘ಲೈಫ್ ಈಸ್ ಟೂ ಶಾರ್ಟ್’.. ಸಿದ್ಧಾರ್ಥ್ ಶುಕ್ಲಾರ ರೀಸೆಂಟ್ ಟ್ವೀಟ್ ನೋಡಿ ಭಾವುಕರಾದ ಅಭಿಮಾನಿಗಳು

ಸಿದ್ಧಾರ್ಥ್ ಶುಕ್ಲಾ ಅವರನ್ನ ಇಂದು ಬೆಳಗ್ಗೆ 10:30ಕ್ಕೆ ಕೂಪರ್ ಆಸ್ಪತ್ರೆಗೆ ಕರೆತರಲಾಗಿದೆ.. ಆದರೆ ಕರೆತರುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಅದಷ್ಟೇ ಅಲ್ಲದೆ.. ಸಿದ್ಧಾರ್ಥ್ ಶುಕ್ಲಾ ಅವರ ದೇಹದ ಮೇಲೆ ಯಾವುದೇ ಗಾಯದ ಕಲೆಗಳಿಲ್ಲ.. ಅವರ ಸಾವಿನ ಹಿಂದಿನ ಕಾರಣ ಇನ್ನಷ್ಟೇ ಬೆಳಕಿಗೆ ಬರಬೇಕಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಇನ್ನು ಪೊಲೀಸರ ತಂಡವೊಂದು ಶುಕ್ಲಾ ಅವರ ನಿವಾರಸದಲ್ಲಿ ತಪಾಸಣೆ ನಡೆಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದಾರ್ಥ್‌ ಶುಕ್ಲಾ ಅಕಾಲಿಕ ಸಾವಿಗೆ ದಿಗ್ಭ್ರಮೆಯಲ್ಲಿ ಇಡೀ ಚಿತ್ರರಂಗ; ಸಿದ್​-ನಾಜ್ ಸ್ನೇಹದ್ದೇ ಮಾತು

ಇನ್ನು ಶುಕ್ಲಾ ಅವರ ಮೃತದೇಹನವನ್ನು ಪೋಸ್ಟ್ ಮಾರ್ಟಮ್ ನಡೆಸಲಾಗುವುದು.. ನಂತರವಷ್ಟೇ ಸಾವಿನ ಹಿಂದಿನ ನಿಖರ ಕಾರಣ ಬೆಳಕಿಗೆ ಬರಲಿದೆ ಎನ್ನಲಾಗಿದೆ.

Source: newsfirstlive.com Source link