ಗ್ಯಾಸ್ ಬೆಲೆ ಮತ್ತೆ ಏರಿಕೆ; ಸಿಲಿಂಡರ್​ಗೆ ಎಳ್ಳು-ನೀರು ಬಿಟ್ಟ ಪ್ರತಿಭಟನಾಕಾರರು

ಗ್ಯಾಸ್ ಬೆಲೆ ಮತ್ತೆ ಏರಿಕೆ; ಸಿಲಿಂಡರ್​ಗೆ ಎಳ್ಳು-ನೀರು ಬಿಟ್ಟ ಪ್ರತಿಭಟನಾಕಾರರು

ಮೈಸೂರು: ಎಲ್.ಪಿ.ಜಿ ಸಿಲಿಂಡರ್ ದರ ಮತ್ತೆ 25 ರೂ ಏರಿಕೆ, ಅಗತ್ಯ ವಸ್ತುಗಳು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಅರಸು ಪ್ರತಿಮೆ ಪ್ರತಿಷ್ಠಾನ ಹಾಗೂ ವಿವಿಧ ಸಂಘಸಂಸ್ಥೆಗಳು ಇಂದು ವಿನೂತನ ಪ್ರತಿಭಟನೆ ನಡೆಸಿವೆ.

ಇದನ್ನೂ ಓದಿ: ಗ್ಯಾಸ್ ಬೆಲೆ ಮತ್ತೆ ಏರಿಕೆ: ನಮಗೆ ‘ಬೂರೆದಿನ್’ ಕೊಡಿ ಸಾಕು ಎಂದ ಕುಸುಮಾ ಹನುಮಂತರಾಯಪ್ಪ

ಮೈಸೂರಿನ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇನ್ಮುಂದೆ ಬಡವರ ಪಾಲಿಗೆ ಸಿಲಿಂಡರ್ ಸಿಗಲ್ಲ ಎಂದು ಎಳ್ಳು-ನೀರು ಬಿಟ್ಟಿದ್ದಾರೆ. ದಿನಸಿ ವಸ್ತುಗಳ ಬೆಲೆ ಏರಿಕೆ ಮಾಡಿರೋದು ಬಿಜೆಪಿಯ ಅಚ್ಚೇದಿನ್. ಮೋದಿ ಸರ್ಕಾರ ಮಧ್ಯಮವರ್ಗದ ಜನರನ್ನು ಬೀದಿ ಪಾಲು ಮಾಡಿದೆ. ಇನ್ಮುಂದೆ ಸಾಮಾನ್ಯ ಜನರು ಬದುಕುವುದು ಕಷ್ಟಸಾಧ್ಯ. ಕೂಡಲೇ ನರೇಂದ್ರ ಮೋದಿ ಅಧಿಕಾರ ಬಿಟ್ಟು ತೊಲಗಲಿ ಎಂದು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

Source: newsfirstlive.com Source link