ಯಾದಗಿರಿ: ಕೊರೊನಾ ನಿಯಮ ಉಲ್ಲಂಘಿಸಿ ಜಾತ್ರೆ.. ದೇವಸ್ಥಾನ ಆಡಳಿತ ಮಂಡಳಿ ಮೇಲೆ ಬಿತ್ತು ಕೇಸ್​

ಯಾದಗಿರಿ: ಕೊರೊನಾ ನಿಯಮ ಉಲ್ಲಂಘಿಸಿ ಜಾತ್ರೆ.. ದೇವಸ್ಥಾನ ಆಡಳಿತ ಮಂಡಳಿ ಮೇಲೆ ಬಿತ್ತು ಕೇಸ್​

ಯಾದಗಿರಿ : ಸುರಪುರ ವೇಣುಗೋಪಾಲ ಸ್ವಾಮಿ ಅದ್ಧೂರಿ ಜಾತ್ರೆ ಪ್ರಕರಣಕ್ಕೆ ಸಂಬಂಧಿಸಿ ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ  ಪ್ರಕರಣ ದಾಖಲಾಗಿದೆ. ಆಗಸ್ಟ್​ 31 ರಂದು ವೇಣುಗೋಪಾಲ ಸ್ವಾಮಿ ಜಾತ್ರೆಯಲ್ಲಿ ಸಾವಿರಾರು ಜನ ಸೇರಿ ಕೋವಿಡ್​ ನಿಯಮ ಉಲ್ಲಂಘನೆ ಮಾಡಲಾಗಿತ್ತು. ಈ ಕುರಿತು ನ್ಯೂಸ್​ಫಸ್ಟ್​ ‘ಕೊರೊನಾ ನಿಯಮ ಉಲ್ಲಂಘಿಸಿ ಶಾಸಕ ರಾಜುಗೌಡ ತವರೂರಲ್ಲಿ ಅದ್ಧೂರಿ ಜಾತ್ರೆ’ ಎಂಬ ಶೀರ್ಷಿಕೆಯಡಿ ವರದಿ ಬಿತ್ತರಿಸಿತ್ತು. ಸುದ್ದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿ ಮೇಲೆ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:  ಅಮಾನವೀಯ ಕೃತ್ಯದ ಆರೋಪ; ಗಂಡ ಮಾಡಿದ ಸಾಲಕ್ಕೆ ಹೆಂಡತಿ ಒತ್ತೆಯಾಳಾಗಿ ಇಟ್ಟುಕೊಂಡ ಫೈನಾನ್ಸರ್

ದೇವಸ್ಥಾನದ ದಕ್ಷಿಣಕ್ಕೆ ಒಂದು ಕಿ.ಮೀ ವ್ಯಾಪ್ತಿಯ ವ್ಯಾಪಾರಸ್ಥರು, ಹಾಗೂ ದೇವಸ್ಥಾನದ ಕಮಿಟಿಯ ಮೇಲೆ ಪ್ರಕರಣ ದಾಖಲಾಗಿದ್ದು, ಜಾತ್ರಾ ಕಮಿಟಿಯವರ ವಿರುದ್ಧ, ಸುರಪುರ ಕಂದಾಯ ನಿರೀಕ್ಷಕರು ದೂರು ದಾಖಲಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ನo 134/21 ರಂತೆ ಪ್ರಕರಣ ದಾಖಲಾಗಿದೆ ಎಂದು ಯಾದಗಿರಿ ಎಸ್ಪಿ, ಸಿ. ಬಿ. ವೇದಮೂರ್ತಿ ನ್ಯೂಸ್​ಫಸ್ಟ್ ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಶಾಸಕ ರಾಜುಗೌಡ ತವರೂರಲ್ಲಿ ಅದ್ಧೂರಿ ಜಾತ್ರೆ

Source: newsfirstlive.com Source link