ರಸ್ತೆ ಬದಿ ಹಸು ಮೇಯಿಸುತ್ತಿದ್ದ ವೃದ್ಧೆಯ ಚಿನ್ನದ ಸರ ಕಸಿದು ಸರಗಳ್ಳ ಪರಾರಿ

ಚಿಕ್ಕಬಳ್ಳಾಪುರ: ರಸ್ತೆ ಬದಿ ದನ ಮೇಯಿಸುತ್ತಿದ್ದ ವೃದ್ಧೆಯ ಬಳಿ ಮಾತಿಗಿಳಿದ ಬೈಕ್ ಸವಾರ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

ಅರೆಹಳ್ಳಿ ಗುಡ್ಡದಹಳ್ಳಿಯ ವೃದ್ದೆ ಗೌರಮ್ಮ ಸರ ಕಳೆದುಕೊಂಡ ವೃದ್ಧೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯಲ್ಲಿ ಎಂದಿನಂತೆ ಹಸು ಮೇಯಿಸುತ್ತಿದ್ದ ಗೌರಮ್ಮ ಬಳಿ ಬೈಕ್ ನಿಲ್ಲಿಸಿ, ಅಜ್ಜಿ ನಮ್ಮ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಆಗಿದೆ. ಇಲ್ಲಿಂದ ಬೈಕ್‍ನಲ್ಲಿ ಯಾರಾದ್ರೂ ಹೋದ್ರಾ ಅಂತ ಮಾತಿಗಿಳಿದಿರೋ ಕಳ್ಳ ಅಜ್ಜಿಯ ಕುತ್ತಿಗೆಗೆ ಕೈ ಹಾಕಿ ಸರ ಕಸಿದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಅನೈತಿಕ ಸಂಬಂಧ- ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾನ್‍ಸ್ಟೇಬಲ್

ಘಟನೆ ನಂತರ ಅಘಾತಗೊಂಡ ಅಜ್ಜಿ ಮನೆಗೆ ಹೋಗಿ ವಿಷಯ ತಿಳಿಸಿದ್ದಾರೆ. ತದನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿ ಸರಗಳ್ಳನಿಗಾಗಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಹುಟುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಪಿಎಚ್‍ಡಿ ವ್ಯಾಸಂಗ ಬೇಡ ಎಂದ ಪಾಲಕರು- ಯುವತಿ ಆತ್ಮಹತ್ಯೆ

Source: publictv.in Source link