ಅಮೆರಿಕದ ಯಡವಟ್ಟೇ ತಾಲಿಬಾನ್​​ಗೆ ವರದಾನ; USA ಸ್ನೇಹಿತರಿಗೆ ಶುರುವಾಗಿದೆ ‘ಯಮ’ಯಾತನೆ

ಅಮೆರಿಕದ ಯಡವಟ್ಟೇ ತಾಲಿಬಾನ್​​ಗೆ ವರದಾನ; USA ಸ್ನೇಹಿತರಿಗೆ ಶುರುವಾಗಿದೆ ‘ಯಮ’ಯಾತನೆ

ಅಫ್ಘಾನ್​ನಲ್ಲಿ ತಾಲಿಬಾನ್​ ಯುಗ ಶುರುವಾಗಿದೆ. 20 ವರ್ಷಗಳ ವಾಸ ಮುಗಿಸಿ ಅಮೆರಿಕದ ಸೇನೆ ತವರಿಗೆ ಮರಳಿದೆ. ಅಮೆರಿಕ ಸೇನೆ ವಾಪಸ್ಸಾಗಿದ್ದೆ ತಡ, ತಾಲಿಬಾನ್​ಗಳ ಅಟ್ಟಹಾಸ ಮುಗಿಲು ಮುಟ್ಟಿದೆ. ಅಮೆರಿಕ ಪರವಾಗಿ ಕೆಲಸ ಮಾಡಿದವರವರನ್ನ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ.

ಅಮೆರಿಕದ 20 ವರ್ಷಗಳ ಕಾಲದ ಅಫ್ಘಾನ್​ ವಾಸ ಮುಗಿದಿದೆ. ದೊಡ್ಡಣ್ಣನ ಕಡೆಯ ಫ್ಲೈಟ್ ಕಾಬೂಲ್​ ಏರ್​ಪೋರ್ಟ್​​ನಿಂದ ತವರಿನತ್ತ ಹಾರಿದೆ. ಕಾಬೂಲ್​ ಏರ್​ಪೋರ್ಟ್​ ಅಮೆರಿಕ ಸೇನೆಯ ರಕ್ಷಣೆ ಇಲ್ಲದೆ ಬಡವಾಗಿದೆ. ದೊಡ್ಡಣ್ಣನ ಸೇನೆ ತವರಿಗೆ ಮರಳುತ್ತಿದ್ದಂಗೆ ಅಮೆರಿಕ ಪರ ಕೆಲಸ ಮಾಡಿದವರ ಸ್ಥಿತಿ ಚಿಂತಾಜನಕವಾಗಿದೆ. ಇಪತ್ತು ವರ್ಷಗಳ ಕಾಲ ತಾಲಿಬಾನ್​ಗಳ ಮನದಲ್ಲಿ ಮಡುವುಗಟ್ಟಿ ನಿಂತ್ತಿದ್ದ ಕ್ರೌರ್ಯದ ಕೆಂಡ ಇದೀಗ ಬೆಂಕಿಯಾಗಿ ಸ್ಫೋಟಗೊಂಡಿದ್ದು, ಅಮಾಯಕರ ನರಮೇಧ ಶುರುಮಾವಾಗಿದೆ.

ಅಫ್ಘಾನ್​ ನೆಲದಿಂದ ಅಮೆರಿಕ ಸೇನೆ ತೊರೆದಿದ್ದೆ ತಡ, ತಾಲಿಬಾನ್​ಗಳು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ತಾಲಿಬಾನ್​ಗಳು ರಕ್ಕಸ ನಗೆ ಬೀರುತ್ತಾ ಹಿಂಸಾಚಾರದ ರಣಕಹಳೆ ಮೊಳಗಿಸಿದ್ದಾರೆ. ತಾಲಿಬಾನ್​ ಕ್ರೌರ್ಯ ಮುಗಿಲು ಮುಟ್ಟಿದ್ದು, ಅಮೆರಿಕ ಸೇನೆ ಪರ ಮಾತಾಡಿದವರನ್ನ ಕ್ರೂರವಾಗಿ ಹಿಂಸಿಸಲು ಶುರು ಮಾಡಿದ್ದಾರೆ.

ತಾಲಿಬಾನ್​ ವಿರೋಧಿಯನ್ನ ಹೆಲಿಕಾಫ್ಟರ್​ಗೆ ಕಟ್ಟಿ ಆಕಾಶದಲ್ಲಿ ಮೆರವಣಿಗೆ
ವಿರೋಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ತಾಲಿಬಾನ್​ಗಳು

ಅಮೆರಿಕದ ಹೆಲಿಕಾಫ್ಟರ್ ಆಕಾಶದಲ್ಲಿ ಹಾರಾಡುತ್ತಿದೆ.. ಆಕಾಶದಲ್ಲಿ ಹಾರುತ್ತಿರುವ ಇದೇ ಹೆಲಿಕಾಫ್ಟರ್​ನಲ್ಲಿ ವ್ಯಕ್ತಿಯೊಬ್ಬ ನೇತಾಡುತ್ತಿದ್ದಾನೆ. ಈ ದೃಶ್ಯ ತಾಲಿಬಾನ್​​ ರಕ್ಕಸರು ಪೈಶಾಚಿಕತೆಯನ್ನ ಸಾರಿ ಸಾರಿ ಹೇಳುತ್ತಿದೆ. ತಾಲಿಬಾನ್​ಗಳ ರಕ್ಕಸತನವನ್ನ ಜಗತ್ತೆನೆದುರು ಮತ್ತೊಮ್ಮೆ ಪ್ರದರ್ಶಣೆ ಮಾಡಿದೆ.

blank

ಹೌದು ಅಮೆರಿಕ ಸೇನೆ ತನ್ನ ತವರಿಗೆ ಮರಳುತ್ತಿದ್ದಂಗೆ, ಅಮೆರಿಕ ಸೇನಾ ಪರ ಕೆಲಸ ಮಾಡಿದವರು ನರಕಯಾತನೆ ಅನುಭವಿಸುತ್ತಿದ್ದಾರೆ. ತಾಲಿಬಾನ್​ಗಳು ಅಮೆರಿಕ ಪರ ಕೆಲಸ ಮಾಡಿದವರನ್ನ ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ಅಮೆರಿಕ ಸೇನಾ ಪರ ಕೆಲಸ ಮಾಡಿದ ವ್ಯಕ್ತಿಯನ್ನ ಹೆಲಿಕಾಫ್ಟರ್​ಗೆ ಕಟ್ಟಿ ಇಡೀ ಕಂದಹಾರ್​ ಪ್ರಾಂತ್ಯದಲ್ಲಿ ಹೆಲಿಕಾಫ್ಟರ್​ ಹಾರಾಟ ನಡೆಸಿದ್ದಾರೆ. ಅಮೆರಿಕದ ಮಿಲಿಟರಿ ಹೆಲಿಕಾಪ್ಟರ್​​ಗೆ ಹಗ್ಗ ಕಟ್ಟಿ ಓರ್ವ ವ್ಯಕ್ತಿ ತೂಗಾಡುತ್ತಿರುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹೆಲಿಕಾಫ್ಟರ್​ಗೆ ಕಟ್ಟಿ ಆಕಾಶದಲ್ಲಿ ಮೆರವಣಿಗೆ ಮಾಡಿದ್ದ ತಾಲಿಬಾನ್​ಗಳು, ತಮ್ಮನ್ನ ಎದುರು ಹಾಕೊಂಡ್ರೆ ನಿಮಗೂ ಇದೇ ಗತಿ ಬರಲಿದೆ ಅನ್ನೋ ಸಂದೇಶ ಸಾರಿದ್ದಾರೆ.

ಹೇಳೊದೊಂದು ಮಾಡೋದೊಂದು ಅನ್ನು ಮಾತು ಈ ಹೇಡಿ ತಾಲಿಬಾನ್​ಗಳನ್ನ ನೋಡಿ ಸೃಷ್ಟಿಸಿದ್ದಂತ್ತಿದೆ. ಯಾಕಂದ್ರೆ ತಾಲಿಬಾನ್ ವಿರುದ್ಧವಾಗಿ ಕೆಲಸ ಮಾಡಿದವರನ್ನ ಕ್ಷಮಿಸಿದ್ದೇವೆಂದು ಎಂದು ಬೂಡಾಟಿಕೆಯ ಮಾತುಗಳನ್ನಾಡಿದ್ದ ತಾಲಿಬಾನ್​, ಇದೀಗ ಅವರ ನರಮೇಧ ನಡೆಸಲು ಶುರು ಮಾಡ್ಕೊಂಡು ಬಿಟ್ಟಿದ್ದಾರೆ. ಅಮೆರಿಕ ಸೇನೆ ಕಾಬೂಲ್​ ಏರ್​​ಪೋರ್ಟ್​​ನಿಂದ ತೆರಳುತ್ತಿದ್ದಂಗೆ ತಾಲಿಬಾನ್​ಗಳು ಕಾಬೂಲ್​ ಏರ್​ಪೋರ್ಟನ್ನ ಕೂಡ ತಮ್ಮ ಸುಪರ್ದಿಗೆ ಹಾಕಿ ಕೊಂಡಿದ್ದಾರೆ. ಸುಪರ್ದಿಗೆ ತೆಗೆದುಕೊಳ್ಳುವುದರ ಜೊತೆ ಜೊತೆಗೆ ಹಿಂಸಾಚಾರವನ್ನ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆಹಾರವಿಲ್ಲ, ನೀರೂ ಇಲ್ಲ; ಕಾಬೂಲ್​ನಲ್ಲಿ ಸೇನಾ ಶ್ವಾನಗಳನ್ನ ಪಂಜರದಲ್ಲಿಟ್ಟು ಹೋದ ಅಮೆರಿಕನ್ ಸೈನಿಕರು

ವೆಪನ್ಸ್​​ಗಳ ಜೊತೆಗೆ ನಾಯಿಗಳನ್ನ ಬಿಟ್ಟು ಹೋದ ಅಮೆರಿಕ
ದೊಡ್ಡಣ್ಣನ ಯಡವಟ್ಟು, ತಾಲಿಬಾನ್​ಗಳಿಗೆ ವರದಾನ

2 ದಶಕಗಳ ಅಫ್ಘಾನ್​ ನೆಲದಲ್ಲಿ ಬೀಡು ಬಿಟ್ಟಿದ್ದ ಅಮೆರಿಕ 7 ರಿಂದ 8 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನ ದಾಸ್ತಾನು ಮಾಡಿತ್ತು. ಆದ್ರೆ ದೊಡ್ಡಣನ ಸೇನೆ ಅಮೆರಿಕ ತೊರೆಯುತ್ತಿದ್ದಂಗೆ ಅತ್ಯಾಧುನಿಕ ವೆಪನ್ಸ್​ಗಳೆಲ್ಲಾ ತಾಲಿಬಾನ್​ ತೆಕ್ಕೆಗೆ ಜಾರಿಕೊಂಡಿದೆ. ಅಮೆರಿಕ ಅಫ್ಘಾನ್ ಸೇನೆಗೆ ಉಡುಗೊರೆಯಾಗಿ ಕೊಟ್ಟಿದ್ದ 22 ಸಾವಿರ ಹಮ್​ವೇ ವಾಹನಗಳು, 42, ಸಾವಿರ ಟ್ರಕ್​ಗಳು, 64,363 ಮೆಷಿನ್​ ಗನ್​ಗಳು, 8 ಸಾವಿರ ಟ್ರಕ್​ಗಳು, 1 ಲಕ್ಷದ 62 ಸಾವಿರ 43 ರೇಡಿಯೋಸ್​ಗಳು, ಮೂರುವರೆಲಕ್ಷ ಅತ್ಯಾಧುನಿಕ ರೈಫಲ್​ಸ್​​ಗಳು, 1 ಲಕ್ಷದ 26 ಸಾವಿರ ಪಿಸ್ತೂಲ್​ಗಳು ಜೊತೆಗೆ ಸೇನಾ ಸಲಕರಣೆಗಳು, ಅತ್ಯಾಧುನಿಕ ಬಂದೂಕುಗಳು, ರಾಕೆಟ್ ಮತ್ತು ಗ್ರೆನೇಡ್​ ಲಾಂಚರ್​​ಗಳು, ಎಲ್ಲವು ತಾಲಿಬಾನ್​ ಬತ್ತಳಿಕೆಯಲ್ಲಿವೆ. ಬುಲೆಟ್ ಪ್ರೂಫ್ ಜಾಕೆಟ್, ನೈಟ್ ವಿಷನ್ ಕನ್ನಡಕಗಳು ಕೂಡ ತಾಲಿಬಾನ್​ಗಳ ವಶದಲ್ಲಿವೆ.

blank

ಇಷ್ಟೇ ಅಲ್ಲ, ಅಮೆರಿಕ ಸೇನೆಯ ಪರ ಕೆಲಸ ಮಾಡಿದ ಶ್ವಾನಗಳನ್ನ ಕೂಡ ಇದೇ ಅಮೆರಿಕ ಪಂಜರದಲ್ಲಿ ಬಿಟ್ಟು ಹೋಗಿದೆ. ಇದೀಗ ಇದೇ ಶ್ವಾನಗಳು ಪಂಜರದಲ್ಲಿ ಆಹಾರವಿಲ್ಲದೆ ಹಸಿವಿನಿಂದ ವಿಲ ವಿಲ ಒದ್ದಾಡುತ್ತಿದೆ. ಮಾನವರ ಮೇಲೇ ಮೃಗೀಯವಾಗಿ ಎರಗುತ್ತಿರುವ ಈ ತಾಲಿಬಾನ್ ರಕ್ಕಸರು ಇನ್ನೂ ಮೂಕ ಪ್ರಾಣಿಗಳನ್ನ ಸರಿಯಾಗಿ ನೋಡುತ್ತಾರಾ ಹೇಳಿ..? ಅದಲ್ಲದೆ, ಈ ತಾಲಿಬಾನ್​​ಗಳಿಗೆ ಹಂದಿ, ನಾಯಿಗಳನ್ನ ಮುಟ್ಟುವುದು ಕೂಡ ಇವರಿಗೆ ನಿಷಿದ್ಧ. ಹಂದಿ, ನಾಯಿ ಅಂದ್ರೆ ಹಾವು ಮೆಟ್ಟಿದ್ದಂಗೆ ಹೌಹಾರುವ ಈ ಪಾಪಿಗಳು ಇನ್ನೂ ನಾಯಿಗಳಿಗೆ ಆಹಾರ ಕೊಡ್ತಾರಾ ಹೇಳಿ..? ಶ್ವಾನಗಳು ಅಮೆರಿಕ ಸೇನೆಯ ಪರ ಕೆಲಸ ಮಾಡಿದ ತಪ್ಪಿಗೆ ಇದೀಗೆ ಪಂಜರದಲ್ಲಿ ಹಸಿವಿನಿಂದ ನರಳುತ್ತಿದೆ.

ವಿರೋಧಿಗಳ ದಾಖಲೆಯನ್ನ ತಾಲಿಬಾನ್ ಕೈಗೆ ಕೊಟ್ಟ ಅಮೆರಿಕ
ದೊಡ್ಡಣ್ಣನ ಯಡವಟ್ಟಿನಿಂದ ಅಮೆರಿಕ ಸ್ನೇಹಿತರಿಗೆ ‘ಯಮ’ಯಾತನೆ

ಅಮೆರಿಕ ಮಾಡಿದ ಎಡವಟ್ಟು ಒಂದಾ ಎರಡಾ..? ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಇಂತಹ ಸಂದಿಗ್ಧ ಸಮಯದಲ್ಲಿ ಮಾದರಿಯಾಗಬೇಕಿದ್ದ ಅಮೆರಿಕಾಗೆ ಇದೀಗ ಎಲ್ಲರೂ ಛೀಮಾರಿ ಹಾಕುವಂತಾಗಿದೆ. ಅದ್ಕೆ ಕಾರಣವಾಗಿದ್ದು ಅಮೆರಿಕದ ಜಾಣ ಕುರುಡುತನ. ಹೌದು, ಅಮೆರಿಕ ತವರಿಗೆ ಸೇರುವ ಜೊತೆಗೆ ಅಮೆರಿಕದ ಪರ ಕೆಲಸ ಮಾಡಿದರ ಎಲ್ಲಾ ದಾಖಲೆಯನ್ನ ಕೂಡ ತಾಲಿಬಾನ್​ಗಳ ಕೈಗೆ ಕೊಟ್ಟು ಹೋಗಿದೆ.
ಅಮೆರಿಕದ ಕೈಯಲ್ಲಿದ್ದ ಎಲ್ಲಾ ದಾಖಲೆಗಳು ಇದೀಗ ತಾಲಿಬಾನ್ ಕೈ ಸೇರಿದೆ. ಬಯೋಮೆಟ್ರಿಕ್ ಡಾಟಾ ತಾಲಿಬಾನ್​ ವಶವಾಗಿದೆ. ಇದೇ ಬಯೋಮೆಟ್ರಿಕ್ ಡಾಟ ಮುಂದಿಟ್ಟುಕೊಂಡು ಹಕ್ಕಾನಿ ನೆಟ್​​ವರ್ಕ್​​ ಅನ್ನೋ ಉಗ್ರ ಸಂಘಟನೆ ತಾಲಿಬಾನ್​ ವಿರೋಧಿಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

blank

ಈ ಬಯೋಮೆಟ್ರಿಕ್​ ಡಾಟದಲ್ಲಿ, 20 ವರ್ಷಗಳ ಕಾಲ ಅಮೆರಿಕ ಪರ ಕೆಲಸ ಮಾಡಿದ ಅಫ್ಘನ್ನರ ಮಾಹಿತಿ ಇದೆ. ಈ ದಾಖಲೆಯನ್ನ ಗೌಪ್ಯವಾಗಿ ಇಡಬೇಕಿದ್ದ, ಅಮೆರಿವೇ ಬಿಟ್ಟು ಹೋಗುವ ಮೂಲಕ, ಪರೋಕ್ಷವಾಗಿ ತಮ್ಮ ಪರವಾಗಿ ಕೆಲಸ ಮಾಡಿದವರನ್ನ ಸಂಕಷ್ಟದ ಕೂಪಕ್ಕೆ ತಳ್ಳಿದೆ. ತಮಗೆ ಸಿಕ್ಕ ಬಯೋಮೆಟ್ರಿಕ್ ಆಧಾರದ ಮೇಲೆನೆ ತಾಲಿಬಾನ್​ಗಳು ಇದೀಗ ತಮ್ಮ ವಿರೋಧಿಗಳ ಮನೆಯ ಕದ್ದ ತಟ್ಟುತ್ತಿತ್ತು, ವಿರೋಧಿಗಳನ್ನ ಹುಡುಕಾಟ ಮುಂದುವರೆಸಿದ್ದಾರೆ. ಈ ವೇಳೆ ಸಿಕ್ಕಿದ ವಿರೊಧಿಗಳನ್ನ ಹತ್ಯೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ಮತ್ತೊಂದು ಮೇಜರ್​ ಡೆವಲಪ್​ಮೆಂಟ್ಸ್​​​ ನಡೆದಿದೆ.

ಖತಾರ್​ನಲ್ಲಿ ಭಾರತೀಯ ಭೇಟಿಯಾದ ತಾಲಿಬಾನ್​
ಭಾರತದ ವಿರುದ್ಧ ಅಫ್ಘಾನ್​ ನೆಲವನ್ನ ಬಳಸಲ್ಲವೆಂದ ಉಗ್ರರು

ಈ ಎಲ್ಲಾ ಡೆವಲಪ್​ಮೆಂಟ್ಸ್​ ನಡುವೆ ತಾಲಿಬಾನ್​ ನಾಯಕ ಶೇರ್ ಮೊಹಮ್ಮದ್ ಶ್ವಾನಿಕ್ ಜೈ, ಕತಾರ್​ನಲ್ಲಿರುವ ಭಾರತದ ರಾಯಭಾರಿ ಡಾ.ದೀಪಕ್ ಮಿತ್ತಲ್ ಅವರನ್ನ ಭೇಟಿಯಾಗಿದ್ದಾರೆ. ದೀಪಕ್​ ಮಿತ್ತಲ್​ರನ್ನ ಮೊದಲ ಬಾರಿಗೆ ಭೇಟಿಯಾಗಿರುವ ಸ್ವಾನಿಕ್ ಜೈ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಭದ್ರತೆಯ ಕುರಿತು ಮಾತು ಕತೆ ನಡೆಸಿದ್ದಾರೆ. ಅಫ್ಘಾನಿಸ್ತಾನದ್ಲಲಿರುವ ಭಾರತೀಯ ರಕ್ಷಣೆಯ ಜವಾಬ್ದಾರಿ ನಮ್ಮದೆಂದು ಹೇಳಿದ್ದಾರೆ. ಅಲ್ಲದೆ ಅಫ್ಘಾನ್​ ನೆಲವನ್ನ ಭಾರತದ ವಿರುದ್ಧ ಯಾವುದೇ ಕಾರಣಕ್ಕೂ ಬಳಸಲ್ಲ ಎಂದು ಮಾತು ಕೊಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕ ಸೈನಿಕರು ಅಫ್ಘಾನಿಸ್ತಾನದಿಂದ ವಾಪಸ್: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳು

ತಾಲಿಬಾನ್​​ಗಳಿಗೆ ಈಗಾಗಲೇ ಭಾರತದ ಸೇನೆಯ ತಾಕತ್ತು ಏನು ಅನ್ನೋದು ಗೊತ್ತಿದೆ. ಅಲ್ಲದೆ ಭಾರತವನ್ನ ಕೆಣಕಿದ್ರೆ, ತಮ್ಮ ಸಮಾಧಿ ತಾವೇ ತೋಡಿದಂಗೆ ಅನ್ನೋ ಅರಿವು ಕೂಡ ಇದೆ. ಇದೇ ಕಾರಣಕ್ಕೆ ತಾಲಿಬಾನ್​ಗಳು ಇದೀಗ ಯಾವುದೇ ಕಾರಣಕ್ಕೂ ಭಾರತದ ತಂಟೆಗೆ ಬರಲ್ಲ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನಗಳವರೆಗೂ ಅಫ್ಘಾನ್​ನಲ್ಲಿ ಚಿತ್ರಣವೇ ಒಂದಾದ್ರೆ, ಇಂದಿನಿಂದ ಅಫ್ಘಾನ್​ನಲ್ಲಿ ಕಾಣ ಸಿಗುವ ವಾತಾವರಣವೇ ಬೇರೆ. ಅಫ್ಘಾನ್​ನಲ್ಲಿ ಸಂಪೂರ್ಣವಾಗಿ ತಾಲಿಬಾನ್ ಯುಗ ಶುರುವಾಗಿದ್ದು, ಮುಂದೆ ಅಫ್ಘಾನ್​ ಇನ್ಯಾವ ಪರಿಸ್ಥಿತಿ ತಲುಪುತ್ತೋ, ತಾಲಿಬಾನ್​ಗಳು ಅದ್ಯಾವಾ ರಾಕ್ಷಸೀಯ ಆಟ ಆಡ್ತಾರೋ ಅನ್ನೋದನ್ನ ಕಾದು ನೋಡಬೇಕಾಗಿದೆ.

ತಾಲಿಬಾನ್​ಗಳ ಮಾತಿಗಿಂತ ತಾಲಿಬಾನ್​​ಗಳ ಕೈಯಲ್ಲಿರುವ ಬಂದೂಕುಗಳೇ ಹೆಚ್ಚು ಮಾತಾನಾಡತೊಡಗಿವೆ. ತಾಲಿಬಾನ್​ಗಳು ಅದ್ಯಾವಾಗ ಬಂದೂಕು ಬದಿಗಿಟ್ಟು ಮಾತಿಗೆ ಒತ್ತು ಕೊಡ್ತಾರೋ ಗೊತ್ತಿಲ್ಲ. ತಮ್ಮ ನೆಲದಲ್ಲಿ ಅಟ್ಟಹಾಸ ಮೆರೆದಂಗೆ, ಭಾರತದ ತಂಟೆಗೆ ಏನಾದ್ರೂ ಬಂದ್ರೆ ಅಪಾಯ ಮಾತ್ರ ತಾಲಿಬಾನ್​ಗಳಿಗೆ ಕಟ್ಟಿಟ್ಟ ಬುತ್ತಿ.

Source: newsfirstlive.com Source link