ಪುತ್ರಿ ಮದುವೆಯಲ್ಲಿ ‘ಎಂದೆಂದೂ ನಿನ್ನನು ಮರೆತು’ ಎಂದು ಪತ್ನಿ ಕೈಹಿಡಿದು ಸ್ಟೆಪ್​ ಹಾಕಿದ ಕೇಂದ್ರ ಸಚಿವ ಜೋಶಿ

ಪುತ್ರಿ ಮದುವೆಯಲ್ಲಿ ‘ಎಂದೆಂದೂ ನಿನ್ನನು ಮರೆತು’ ಎಂದು ಪತ್ನಿ ಕೈಹಿಡಿದು ಸ್ಟೆಪ್​ ಹಾಕಿದ ಕೇಂದ್ರ ಸಚಿವ ಜೋಶಿ

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಮ್ಮ ಪುತ್ರಿಯ ವಿವಾಹದ ಸಂಭ್ರಮದಲ್ಲಿದ್ದಾರೆ. ಪ್ರಲ್ಹಾದ್ ಜೋಶಿ ಪುತ್ರಿ ಅರ್ಪಿತಾ ಮತ್ತು ಹೃಷಿಕೇಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ರಿಲ್ಯಾಕ್ಸ್​ ಮೂಡಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ನಿ ಜ್ಯೋತಿ ಜೊತೆ ಸೇರಿ ಸ್ಟೆಪ್​ ಹಾಕಿ ಎಂಜಾಯ್​​ ಮಾಡಿದ್ದಾರೆ.

blank

ನಿನ್ನೆ ನಗರದ ಖಾಸಗಿ ಹೋಟೆಲ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಚಿವ ಜೋಶಿ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಎಂಬ ಕನ್ನಡದ ಹಾಡಿಗೆ ಪತ್ನಿ ಜೊತೆ ನೃತ್ಯ ಮಾಡಿದ್ದು ಸಾಕಷ್ಟು ವೈರಲ್​ ಆಗಿದೆ..

blank

ಜೋಶಿ ಪುತ್ರಿಯ ಮದುವೆಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋತ್, ಕೇಂದ್ರ ಸಚಿವ ಮೇಘವಾಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಬಿಜೆಪಿ ನಾಯಕರು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪುತ್ರಿ ಅರ್ಪಿತಾ

 

Source: newsfirstlive.com Source link