ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

ಮುಂಬೈ: ನಟ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಬಾಲಿವುಡ್ ಭಾಯಿಜಾನ್ ಕಂಬನಿ ಮಿಡಿದಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಬಿಗ್‍ಬಾಸ್-13ರ ವಿನ್ನರ್ ಆಗಿದ್ದರು. ಸಿದ್ಧಾರ್ಥ್ ನಿಧನದ ಸುದ್ದಿ ಕೇಳಿ ಸಿನಿ ಅಂಗಳವೇ ಅಘಾತಕ್ಕೊಳಗಾಗಿದ್ದು, ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಅಂದು ಸಿದ್ಧಾಥ್ ಕೈ ಮೇಲೆತ್ತಿ ವಿನ್ನರ್ ಎಂದು ಘೋಷಿಸಿದ್ದ ಸಲ್ಮಾನ್ ಖಾನ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಲ್ಮಾನ್ ಸಂತಾಪ:
ಬಹಳ ಬೇಗೆ ಹೋದೆ ಸಿದ್ಧಾರ್ಥ್.. ನೀನು ಸದಾ ನಮ್ಮ ನೆನಪಿನಲ್ಲಿರುತ್ತೀಯಾ. ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ನಿಮ್ಮ ಅತ್ಮಕ್ಕೆ ಶಾಂತಿ ಸಿಗಲಿ.

ಬಿಗ್‍ಬಾಸ್ ಸೀಸನ್-13 ಆರಂಭದಿಂದಲೂ ಸಿದ್ಧಾರ್ಥ್ ಶುಕ್ಲಾ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಸನ್ ಆಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಪದೇ ಪದೇ ಕೋಪಗೊಳ್ಳುತ್ತಿದ್ದ ಶುಕ್ಲಾಗೆ ವೀಕೆಂಡ್ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಕ್ಲಾಸ್ ಸಹ ತೆಗೆದುಕೊಂಡಿದ್ದರು. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಆ ವೇಳೆ ನೀವಾಡುವ ಮಾತುಗಳ ಮೇಲೆ ಹಿಡಿತ ಇರಬೇಕು ಎಂದು ಸಿದ್ಧಾರ್ಥ್ ಶುಕ್ಲಾಗೆ ಸಲ್ಮಾನ್ ಸಲಹೆ ನೀಡಿದ್ದರು. ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಸಾವು

ಇಂದು ಬೆಳಗ್ಗೆ ಹೃದಯಾಘಾತದಿಂದ ಕುಸಿದಿದ್ದ ಸಿದ್ಧಾರ್ಥ್ ಶುಕ್ಲಾ ಅವರನ್ನು ಆಪ್ತರು ಆಸ್ಪತ್ರೆಗೆ ದಾಖಲಿಸಿದ್ದರು. ಸಿದ್ಧಾರ್ಥ್ ಅವರನ್ನ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರೋದನ್ನು ಖಚಿತ ಪಡಿಸಿದರು. ಸದ್ಯ ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ನಿವಾಸಕ್ಕೆ ತರಲಾಗಿದ್ದು, ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ. ಸಿದ್ಧಾರ್ಥ್ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಬಾಲಿಕಾ ವಧು ಧಾರಾವಾಹಿ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದರು.

Source: publictv.in Source link