ರಿಮೋಟ್​ ಬಳಸಿ ಡಿಜಿಟಲ್​ ತೂಕದ ಮಷಿನ್​ನಲ್ಲಿ ದೋಖಾ ಮಾಡ್ತಿದ್ದ ನಾಲ್ವರು ಅಂದರ್​

ರಿಮೋಟ್​ ಬಳಸಿ ಡಿಜಿಟಲ್​ ತೂಕದ ಮಷಿನ್​ನಲ್ಲಿ ದೋಖಾ ಮಾಡ್ತಿದ್ದ ನಾಲ್ವರು ಅಂದರ್​

ಬೆಂಗಳೂರು : ಡಿಜಿಟಲ್​ ತೂಕದ ಮಷಿನ್​ನಲ್ಲಿ ರಿಮೋಟ್​ ಬಳಸಿ, ತೂಕ ಹೆಚ್ಚು ಕಡಿಮೆ ಆಗುವಂತೆ ಮಾಡುವ ತೂಕದ ಮಷಿನ್​ಗಳನ್ನು ಸರಬರಾಜು ಮಾಡ್ತಿದ್ದ ಖತರ್ನಾಕ್​ ಖದೀಮರ ಗ್ಯಾಂಗ್ ಒಂದನ್ನು ರಾಜಗೋಪಾಲ ನಗರ ಪೊಲೀಸರು ಬಂಧಿಸಿದ್ದಾರೆ.

ರವೀಂದ್ರ, ರಾಘವೇಂದ್ರ, ನಾಗೇಶ್ ನಾಯ್ಕ, ವಿಘ್ನೇಶ್ವರನ್ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ರಾಘವೇಂದ್ರ ಎಂಬಾತ ಈ ಟೀಂ ನ ಲೀಡರ್ ಎನ್ನಲಾಗಿದ್ದು, ಈತ ವಿಜಯನಗರ ಭಾಗದಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ನೇರವಾಗಿ ತೂಕದ ಮಷಿನ್​ ಇರೋ ಅಂಗಡಿಗೆ ತೆರಳಿ ವ್ಯವಹಾರಕ್ಕೆ ಇಳಿತಿದ್ದ ಆರೋಪಿ ತೂಕ ಹೆಚ್ಚು ಕಡಿಮೆ ಮಾಡಿ ಕೊಡ್ತೀನಿ ಅಂತ ವ್ಯಾಪಾರಸ್ಥರಿಗೆ ಆಸೆ ತೋರಿಸ್ತಿದ್ದನಂತೆ.

blank

ಇದನ್ನೂ ಓದಿ: ರಾಜೀವ್​ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಮರುನಾಮಕರಣ ಮಾಡಿ -ಪ್ರತಾಪ್​ ಸಿಂಹ ಮನವಿ

ತೂಕದ ಮಷಿನ್ ಗೆ ಐಸಿ(ಇಂಟಿಗ್ರೇಟೆಡ್ ಸರ್ಕ್ಯೂಟ್) ಅಳವಡಿಸಿ ತೂಕವನ್ನ ನಮಗೆ ಹೊಂದಾಣಿಕೆಯಾಗುವಂತೆ ತೂಕ ಇಳಿಸುವ, ಹೆಚ್ಚಿಸುವ ಕೆಲಸವನ್ನ ಮಾಡಿಕೊಡ್ತಿದ್ದ ಎನ್ನಲಾಗಿದೆ. ರೀಮೋಟ್​ನ ಸಹಾಯದಿಂದ 10% ನಿಂದ 30% ವರೆಗೂ ತೂಕದಲ್ಲಿ ಏರಿಳಿತವಾಗುವಂತೆ ಮಾಡಿ ಕೊಡ್ತಿದ್ದ ಈತ, ಗ್ರಾಹಕರಿಗೆ ವಂಚಿಸಿ ವ್ಯಾಪಾರಸ್ಥರಿಗೆ ಲಾಭ ಮಾಡಿ ಕೊಡ್ತಿದ್ದ. ವಿಷಯ ತಿಳಿದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದು ಬಂಧಿಸಿದ್ದಾರೆ. ಬಂಧಿತರಿಂದ 8 ತೂಕದ ಯಂತ್ರಗಳನ್ನು ವಶಪಡಿಕೊಂಡಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿನ್​ ಹಾಕಲು ಬಂದ ಸಿಬ್ಬಂದಿಗೆ ದೊಣ್ಣೆ ಹಿಡಿದು ಅಟ್ಟಾಡಿಸಿದ ಭೂಪ

Source: newsfirstlive.com Source link