ಬೊಮ್ಮಾಯಿ ನೇತೃತ್ವದಲ್ಲೇ ಬಿಜೆಪಿಯ ಮುಂದಿನ ಚುನಾವಣೆ: ಗೊಂದಲಕ್ಕೆ ತೆರೆ ಎಳೆದ ಅಮಿತ್​ ಶಾ

ಬೊಮ್ಮಾಯಿ ನೇತೃತ್ವದಲ್ಲೇ ಬಿಜೆಪಿಯ ಮುಂದಿನ ಚುನಾವಣೆ: ಗೊಂದಲಕ್ಕೆ ತೆರೆ ಎಳೆದ ಅಮಿತ್​ ಶಾ

ದಾವಣಗೆರೆ: ಬಿಜೆಪಿಯ ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯುತ್ತೆ ಅನ್ನೋ ಗೊಂದಲಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ.

ಮುಂದಿನ ದಿನಗಳ ಚುನಾವಣೆ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲೆ ನಡೆಯುತ್ತೆ, ನನಗೆ ತುಂಬಾ ವಿಶ್ವಾಸವಿದೆ. ಮುಂದಿನ ಚುನಾವಣೆ ಪೂರ್ಣ ಬಹುಮತದೊಂದಿಗೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನಾನು ಬೊಮ್ಮಾಯಿ ಅವರ ಸರ್ಕಾರಕ್ಕೆ ಶುಭ ಹಾರೈಸುತ್ತೇನೆ ಅಂತ ದಾವಣಗೆರೆಯಲ್ಲಿ ಮಾತನಾಡಿದ್ದಾರೆ.

blank

ಬೊಮ್ಮಾಯಿ ಸರ್ಕಾರ ನಾಲ್ಕು ಹೆಜ್ಜೆ ಮುಂದಿರಲಿದೆ

ಮುಂದಿನ ದಿನಗಳಲ್ಲಿ ಬೊಮ್ಮಾಯಿ ಸರ್ಕಾರ, ಅಭಿವೃದ್ಧಿ ವಿಚಾರದಲ್ಲಿ ನಾಲ್ಕು ಹೆಜ್ಜೆ ಮುಂದಿರಲಿದೆ. ಯಡಿಯೂರಪ್ಪ ಬದಲಾವಣೆ ನಂತರ ರಾಜ್ಯಕ್ಕೆ ಮೊದಲ ಬಾರಿ ಅಮಿತ್​ ಶಾ ಆಗಮಿಸಿದ್ದಾರೆ. ಈ ವೇಳೆ, ನಾಯಕತ್ವ ಬದಲಾವಣೆಯ ಗೊಂದಲಗಳಿಗೆ ಶಾ ತೆರೆ ಎಳೆದಿದ್ದಾರೆ. ಬರುವ ದಿನಗಳಲ್ಲಿ ಕೊರೊನಾ ಭೀತಿ ಇದೆ, ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡಿದೆ. ಯಡಿಯೂರಪ್ಪ ಅವರು ನಿರ್ಧರಿಸಿದ್ದರು, ಯಾರಾದ್ರೂ ಹೊಸ ವ್ಯಕ್ತಿ ಸಿಎಂ ಅಗಲಿ ಎಂದು.. ಹಾಗಾಗಿ, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ.

ಯಡಿಯೂರಪ್ಪನವರು ನಾಡಿಗಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಬಸವರಾಜ್ ಬೊಮ್ಮಾಯಿ ಉತ್ತಮ ಕೆಲ್ಸ ಮಾಡ್ತಿದ್ದಾರೆ. ಬಿಜೆಪಿ ಪಕ್ಷ, ಬೊಮ್ಮಯಿ ಅವರನ್ನ ಸಿಎಂ ಮಾಡಿ ಉತ್ತಮ ನಿರ್ಧಾರ ಕೈಗೊಂಡಿದೆ ಅನ್ನೋ ನಂಬಿಕೆಯಿದೆ. ಬರುವ ದಿನಗಳಲ್ಲಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಸ್ಪಷ್ಟ ಬಹುಮತ ಗಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದಾರೆ.

 

ಪ್ರತಿಯೊಬ್ಬರಿಗೂ ಲಸಿಕೆ ಸಿಗಬೇಕು

ಇನ್ನೂ, ಕೊರೊನಾ ಲಸಿಕೆ ನೀಡುವ ಬಗ್ಗೆ ಮಾತ್ನಾಡಿದ ಅವ್ರು, ಲಸಿಕೆ ನೀಡುವ ವಿಚಾರದಲ್ಲಿ ತೊಂದರೆ ಆಗಬಾರದು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ಎಲ್ಲರಿಗೂ ಲಸಿಕೆ ಸಿಗುವಂತೆ ಆಗಬೇಕು‌ ಅಂತ ಹೇಳಿ ತಮ್ಮ ಮಾತನ್ನ ಮುಗಿಸಿದ್ರು.

blank

Source: newsfirstlive.com Source link