ಯುವ ಕಾಂಗ್ರೆಸ್​ ಪ್ರತಿಭಟನೆ; ದಾರಿ ಸಿಗದೇ ಪರದಾಡಿದ ಆಂಬ್ಯುಲೆನ್ಸ್​

ಯುವ ಕಾಂಗ್ರೆಸ್​ ಪ್ರತಿಭಟನೆ; ದಾರಿ ಸಿಗದೇ ಪರದಾಡಿದ ಆಂಬ್ಯುಲೆನ್ಸ್​

ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಪ್ರತಿಭಟನೆಯ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ ರೋಗಿಯನ್ನು ಕರೆದೋಯ್ಯುತ್ತಿದ್ದ ಆಂಬ್ಯುಲೆನ್ಸ್​ ದಾರಿ ಸಿಗದೆ ಪರದಾಡಿದೆ.

ಯುವ ಕಾಂಗ್ರೆಸ್​ ಪ್ರತಿಭಟನೆ; ದಾರಿ ಸಿಗದೇ ಪರದಾಡಿದ ಆಂಬ್ಯುಲೆನ್ಸ್​

ಇಂದು ರಾಜ್ಯ ಯುವ ಕಾಂಗ್ರೆಸ್​ ಕೇಂದ್ರ ಸರ್ಕಾರ ತೈಲ, ಅಡುಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನೆ ವೇಳೆ 100 ಅಡಿ ಉದ್ದದ ಸಿಲಿಂಡರ್ ನ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದೆ. ಈ ವೇಳೆ ಆಂಬ್ಯುಲೆನ್ಸ್ ಪ್ರತಿಭಟನೆಯ ನಡುವೆ ಸಿಲುಕಿದ ಪರಿಣಾಮ ದಾರಿ ಸಿಗದೆ ಪರದಾಟ ನಡೆಸಿದೆ. ಜೊತೆಗೆ ಇತರ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತೆ ಮಾಡಿದೆ.

blank

ಇದನ್ನೂ ಓದಿ: ಗ್ಯಾಸ್ ಬೆಲೆ ಮತ್ತೆ ಏರಿಕೆ; ಸಿಲಿಂಡರ್​ಗೆ ಎಳ್ಳು-ನೀರು ಬಿಟ್ಟ ಪ್ರತಿಭಟನಾಕಾರರು

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇತೃತ್ವದ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷ ರಕ್ಷ ರಾಮಯ್ಯ, ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಭಾಗವಹಿಸಿ, ತಲೆ ಮೇಲೆ ಸಿಲಿಂಡರ್​ ಹೊತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಇದನ್ನೂ ಓದಿ:  MLA ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಕೇಸ್​; ತನಿಖೆ CCB ಹೆಗಲಿಗೆ ಕೊಟ್ಟ ಕಮಲ್ ಪಂತ್

Source: newsfirstlive.com Source link