ಅಮೆರಿಕದ ಶಸ್ತ್ರಾಸ್ತ್ರ, ವಾಹನಗಳ ಬೃಹತ್ ಪರೇಡ್ ನಡೆಸಿದ ತಾಲಿಬಾನ್.. ಜಗತ್ತಿಗೆ ಕೊಟ್ಟ ಸಂದೇಶವೇನು..?

ಅಮೆರಿಕದ ಶಸ್ತ್ರಾಸ್ತ್ರ, ವಾಹನಗಳ ಬೃಹತ್ ಪರೇಡ್ ನಡೆಸಿದ ತಾಲಿಬಾನ್.. ಜಗತ್ತಿಗೆ ಕೊಟ್ಟ ಸಂದೇಶವೇನು..?

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ತನ್ನ ದೇಶಕ್ಕೆ ವಾಪಸ್ಸಾಗಿದೆ. ಆದ್ರೆ ಹೀಗೆ ಮರಳುವ ಮಧ್ಯೆ ಕೋಟ್ಯಂತರ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ವಾಹನಗಳನ್ನು ಅಮೆರಿಕ ಅಫ್ಘಾನಿಸ್ತಾನದಲ್ಲೇ ಬಿಟ್ಟುಹೋಗಿದೆ. ಹೀಗೆ ಅಮೆರಿಕ ಬಿಟ್ಟುಹೋದ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗಳ ಪಾಲಾಗಿವೆ.

ಇದನ್ನೂ ಓದಿ: ಅಮೆರಿಕಾ ಎಡವಟ್ಟು; ಪಾಕಿಸ್ತಾನದ ಕೈ ಸೇರಿದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.. ಅಪಾಯದಲ್ಲಿ ಇಡೀ ಜಗತ್ತು

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ತಾಲಿಬಾನಿಗಳು ಮುಂದಾಗಿದ್ದಾರೆ. ಇದಕ್ಕೂ ಮುನ್ನ ತಾಲಿಬಾನಿಗಳು ಅಮೆರಿಕ ಬಿಟ್ಟುಹೋದ ಶಸ್ತ್ರಾಸ್ತ್ರಗಳನ್ನ ಪರೇಡ್ ಮಾಡುವ ಮೂಲಕ ಜಗತ್ತಿಗೆ ಪ್ರದರ್ಶಿಸಿದೆ. ಇನ್ನು ಮುಂದೆ ಈ ಶಸ್ತ್ರಾಸ್ತ್ರಗಳು ನಮ್ಮವು ಅಂತ ತಾಲಿಬಾನ್ ಜಗತ್ತಿಗೆ ಸಂದೇಶ ನೀಡಿದೆ. ಅಷ್ಟೇ ಅಲ್ಲ ಈ ಶಸ್ತ್ರಾಸ್ತ್ರಗಳ ಬಗ್ಗೆ ನಿನ್ನೆಯಷ್ಟೇ ಮಾತನಾಡಿದ್ದ ಅಮೆರಿಕಾದ ಸೇನಾ ವಕ್ತಾರರು, ಈ ಎಲ್ಲ ವಾಹನಗಳನ್ನ, ಏರ್​ಕ್ರಾಫ್ಟ್​​ಗಳನ್ನ ಡಿ-ಮಿಲಿಟರೈಸ್ ಮಾಡಿದ್ದೀವಿ.. ಅವು ಎಂದಿಗೂ ಚಲಿಸಲಾರುವು.. ಯಾವುದಕ್ಕೂ ಉಪಯೋಗಬಾರವು ಎಂದು ಹೇಳಿದ್ದಾರೆ. ಆದ್ರೆ ಅಮೆರಿಕಾ ಹೇಳಿದ್ದು ಸುಳ್ಳಾ? ಅನ್ನೋ ಪ್ರಶ್ನೆಯನ್ನೂ ಹುಟ್ಟುಹಾಕುವಂತೆ ತಾಲಿಬಾನಿಗಳು ಮೆರವಣಿಗೆ ನಡೆಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಯಡವಟ್ಟೇ ತಾಲಿಬಾನ್​​ಗೆ ವರದಾನ; USA ಸ್ನೇಹಿತರಿಗೆ ಶುರುವಾಗಿದೆ ‘ಯಮ’ಯಾತನೆ

ಸೋಷಿಯಲ್ ಮೀಡಿಯಾದಲ್ಲಿ ತಾಲಿಬಾನ್ ನಡೆಸಿದ ಪರೇಡ್​ನ ವಿಡಿಯೋಗಳು ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ. ಈ ಶಸ್ತ್ರಾಸ್ತ್ರಗಳನ್ನು ತಾಲಿಬಾನಿಗಳು ಹೇಗೆಲ್ಲ ಬಳಸಿಕೊಳ್ಳಬಹುದು ಎಂದು ಆತಂಕ ಹೊರಹಾಕಿದ್ದಾರೆ.

ಇದನ್ನೂ ಓದಿ: ಯಾರಿಗೂ ಸುಖವಲ್ಲ ತಾಲಿಬಾನ್ ಗೆಲುವು; ಭಾರತ-ಚೀನಾ-ಪಾಕ್​ ಎಲ್ಲರಿಗೂ ಇದು ಚಾಲೆಂಜ್ ಯಾಕೆ?

ಅಮೆರಿಕದ ಹಮ್ವೀಗಳು, ಶಸ್ತ್ರಾಸ್ತ್ರ ತುಂಬಿದ ಎಸ್​​ಯುವಿಗಳಿಗೆ ತಾಲಿಬಾನಿಗಳು ತಮ್ಮ ಬಾವುಟ ಕಟ್ಟಿ ಪರೇಡ್ ನಡೆಸಿದ್ದಾರೆ. ಇನ್ನು ಬ್ಲಾಕ್ ಹಾವ್ಕ್ ಹೆಲಿಕಾಪ್ಟರ್​ಗೂ ಬಾವುಟ ಕಟ್ಟಿ ಹಾರಾಡಿಸಿರುವ ದೃಶ್ಯಗಳು ವೈರಲ್ ಆಗಿವೆ. ಇನ್ನು ಪರೇಡ್​​ನಲ್ಲಿ ಪಾಲ್ಗೊಂಡ ಬಹುತೇಕ ವಾಹನಗಳು, ಶಸ್ತ್ರಾಸ್ತ್ರಗಳು ಪರ್ಫೆಕ್ಟ್ ಕಂಡೀಷನ್​ನಲ್ಲಿವೆ ಎನ್ನಲಾಗಿದೆ.

Source: newsfirstlive.com Source link