ITBP ದಂಗು ಬಡಿಸೋ ರಕ್ಷಣಾ ಕಾರ್ಯಾಚರಣೆ: 12,000 ಫೀಟ್​ ಎತ್ತರದಲ್ಲಿ ಸಿಲುಕಿದ್ದವರು ಸೇಫ್

ITBP ದಂಗು ಬಡಿಸೋ ರಕ್ಷಣಾ ಕಾರ್ಯಾಚರಣೆ: 12,000 ಫೀಟ್​ ಎತ್ತರದಲ್ಲಿ ಸಿಲುಕಿದ್ದವರು ಸೇಫ್

ಉತ್ತಾರಖಾಂಡ್​ನ ಮಿಲಾಮ್​ನಲ್ಲಿ ಹಿಮನದಿಯಲ್ಲಿ ಹರಿವು ಹೆಚ್ಚಾದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಸ್ಥಳೀಯರನ್ನ ಇಂಡೋ ಟಿಬೇಟಿಯನ್ ಬಾರ್ಡರ್​ ಪೊಲೀಸರು ಹರಸಾಹಸಪಟ್ಟು ರಕ್ಷಿಸಿದ್ದಾರೆ. ಸುಮಾರು 12,000 ಫೀಟ್ ಎತ್ತರದಲ್ಲಿ ಸಿಲುಕಿದ್ದ ನಾಲ್ವರನ್ನ ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಿಮನದಿಯ ಪ್ರವಾಹಕ್ಕೆ ಒಂದು ಮಹಿಳೆ ಸೇರಿ ನಾಲ್ಕು ಮಂದಿ  ಸಂಕಷ್ಟಕ್ಕೆ ಸಿಲುಕಿದ್ದರು. ಸತತ 7 ಗಂಟೆಗಳ ಕಾಲ ರಕ್ಷಣೆಗಾಗಿ ಕಾದು ಕೂತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ 14ನೇ ಬೆಟಾಲಿಯನ್​ನ ಐಟಿಬಿಪಿ ಸಿಬ್ಬಂದಿ, ಹಗ್ಗದ ಸಹಾಯದಿಂದ ರಕ್ಷಿಸಿದ್ದಾರೆ.

ಹಗ್ಗವನ್ನ ಬಲವಾಗಿ ಎರಡೂ ಬದಿಗೆ ಕಟ್ಟಿ, ಹಗ್ಗದಿಂದ ಒಬ್ಬೊಬ್ಬರನ್ನೇ ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

Source: newsfirstlive.com Source link