ಗೋವಿಂದಪುರ ಡ್ರಗ್ಸ್ ಕೇಸ್​: ವಾಟ್ಸಪ್​ನಲ್ಲಿ ಸ್ಮೈಲಿ ಸಿಂಬಲ್ ಕಳ್ಸಿದ್ರೆ ಬರ್ತಿತಂತೆ ಗಾಂಜಾ..!

ಗೋವಿಂದಪುರ ಡ್ರಗ್ಸ್ ಕೇಸ್​: ವಾಟ್ಸಪ್​ನಲ್ಲಿ ಸ್ಮೈಲಿ ಸಿಂಬಲ್ ಕಳ್ಸಿದ್ರೆ ಬರ್ತಿತಂತೆ ಗಾಂಜಾ..!

ಬೆಂಗಳೂರು : ಗೋವಿಂದಪುರ ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸ್ಫೋಟಕ ಮಾಹಿತಿಗಳು ದಿನ ಕಳೆದಂತೆ ಹೋರ ಬೀಳುತ್ತಿವೆ. ಸದ್ಯ ಪ್ರಕರಣದ ಆರೋಪಿ, ಕಾಸ್ಪ್ಮೆಟಿಕ್ ರಾಣಿ ಸೋನಿಯಾ ಅಗರ್​ವಾಲ್​ ಭಯಾನಕ ಸತ್ಯವೊಂದನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ ಎನ್ನಲಾಗಿದೆ.

ಫುಡ್ ಡೆಲಿವರಿ ಌಪ್​ ಡೆನ್ಸೋ ಮೂಲಕ ಪೆಡ್ಲರ್ ಒಬ್ಬನಿಂದ ಮಾದಕ ವಸ್ತು ತರಿಸ್ತಿದ್ದ ಸೋನಿಯಾ ಌಂಡ್​ ಟೀಂ. ವಾಟ್ಸಪ್​ನಲ್ಲಿ ಸ್ಮೈಲಿ ಸಿಂಬಲ್ ಕಳ್ಸಿದ್ರೆ ನೇರವಾಗಿ ಎಕ್ಸ್ಟಾಸಿ ಟ್ಯಾಬ್ಲೆಟ್ಸ್‌ ಹಾಗೂ ಗಾಂಜಾ ಡೆಲಿವರಿ ಆಗ್ತಿತ್ತಂತೆ. ಕೇರಳ ಮೂಲದ ಪೆಡ್ಲರ್ ಖಾದರ್ ಎಂಬಾತ ಮಾದಕ ವಸ್ತುಗಳನ್ನು ಡೆಲಿವರಿ ಮಾಡ್ತಿದ್ದನಂತೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಪೊಲೀಸರಿಂದ ದಾಳಿಗೊಳಗಾದವರ ಹಿಸ್ಟರಿ ಹೇಗಿದೆ..?

ಡೆನ್ಸೋ ಫುಡ್ ಡೆಲಿವರಿ ಬ್ಯಾಗಲ್ಲಿ ಶರ್ಟ್, ಪ್ಯಾಂಟ್​ಗಳನ್ನಿಟ್ಟು ಡ್ರಗ್ಸ್ ಸಪ್ಲೈ ಮಾಡ್ತಿದ್ದ ಖಾದರ್​, ಶರ್ಟ್ ನ ತೋಳಿನ ಭಾಗ, ಪ್ಯಾಂಟ್ ನ ಕಾಲಿನ ಭಾಗದಲ್ಲಿ ಡ್ರಗ್ಸ್ ಇಟ್ಟು ಕಳಿಸ್ತಿದ್ದ. ಒಂದು ಶರ್ಟ್ ನಲ್ಲಿರೋ ಡ್ರಗ್ಸ್ ಗೆ ಸಾವಿರಾರು ರೂಪಾಯಿ ಪಡೆದು ಡ್ರಗ್ಸ್ ನೀಡ್ತಿದ್ನಂತೆ ಆರೋಪಿ ಖಾದರ್. ಇನ್ನು ಖಾದರ್​ ಸಿರಾಜ್ ಎಂಬಾತನ ಮೂಲಕ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡ್ತಿದ್ನಂತೆ. ಸೋನಿಯಾ ಬಾಯ್ಬಿಟ್ಟ ಸತ್ಯದಿಂದ ಇದೀಗ ಪ್ರಮುಖ ಆರೋಪಿ ಅಬ್ದುಲ್ ಖಾದರ್ ನನ್ನು ಮೈಕೋಲೇಔಟ್ ವ್ಯಾಪ್ತಿಯಲ್ಲಿ ಗೋವಿಂದಪುರ ಪೊಲೀಸರು ಬಂಧಿಸಿದಿದ್ದು, ಇದೀಗ ಖಾದರ್ ಜೊತೆ ಲಿಂಕ್ ಇರೋ ಸೆಲೆಬ್ರಿಟಿಗಳ ಬೇಟೆಯಾಡೋಕೆ ಖಾಕಿ ಪಡೆ ಸಿದ್ದತೆ ನಡೆಸಿದೆ.

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್; ಪೆಡ್ಲರ್​ ಥಾಮಸ್​ ಜೊತೆ ಸಂಪರ್ಕದಲ್ಲಿದ್ದ ಆ 30 ಜನ ಯಾರು?

 

ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್​ ಕೇಸ್: ಬೆಳ್ಳಂಬೆಳಗ್ಗೆ ಸೆಲಿಬ್ರಿಟಿಗಳ ಮನೆ ಮೇಲೆ ಪೊಲೀಸ್ ದಾಳಿ

Source: newsfirstlive.com Source link