ನಟಿ ಇಶಿತಾಗೆ ಗಂಡ ಮುರುಗ ಕೊಟ್ಟ ಸರ್​ಪ್ರೈಸ್ ನೋಡಿ ಕಣ್ತುಂಬಿ ಬಂತು..! ಏನದು ಸರ್​ಪ್ರೈಸ್?

ನಟಿ ಇಶಿತಾಗೆ ಗಂಡ ಮುರುಗ ಕೊಟ್ಟ ಸರ್​ಪ್ರೈಸ್ ನೋಡಿ ಕಣ್ತುಂಬಿ ಬಂತು..! ಏನದು ಸರ್​ಪ್ರೈಸ್?

ರಾಜಾ ರಾಣಿ ಶೋನ ಪ್ರತಿ ಎಪಿಸೋಡ್​ ಕೂಡ ಹೊಸತನದಿಂದ ಕೂಡಿರತ್ತೆ. ಬರಿ ಟಾಸ್ಕ್​ ಮಾತ್ರವಲ್ಲದೆ ಗಂಡ ಹೆಂಡತಿ ನಡುವಿನ ಪ್ರೀತಿ ಕೇರಿಂಗ್​ ಮನಸ್ತಾಪ ಹೀಗೇ ಪ್ರತಿಯೊಂದು ಭಾವನೆಯನ್ನು ತೋರಿಸುವಂತಹ ರಿಯಾಲಿಟಿ ಶೋವಾಗಿ ಹೊರಹೊಮ್ಮಿದೆ.

blank

ಇಶಿತಾಗೆ ಮುರುಗ ಕೊಟ್ಟ ಗಿಫ್ಟ್​ ಏನು..?

ಕಳೆದ ವಾರ ರಾಜಾ ರಾಣಿ ಶೋನಲ್ಲಿ ಜೋಡಿಗಳ ಮದುವೆ ಸಂಭ್ರಮವನ್ನು ರೀ-ಕ್ರಿಯೇಟ್​ ಮಾಡಲಾಗಿತ್ತು. ಆ ಸುತ್ತನ್ನು ಪ್ರತಿ ಜೋಡಿ ಸಖತ್​ ಆಗಿ ಸೆಲೆಬ್ರೇಟ್​ ಮಾಡಿ ಖುಷಿ ಪಟ್ಟರು. ಮುಂದಿನ ವಾರ ಯಾವ ರೀತಿಯ ಟಾಸ್ಕ್​ ಇರಬಹುದು ಎಂದು ಪ್ರೇಕ್ಷಕರು ಕಾಯ್ತಾಯಿದ್ರು. ಆದ್ರೆ, ಈ ವಾರದ ಸುತ್ತು ತುಂಬಾನೆ ವಿಭಿನ್ನವಾಗಿದೆ. ರಾಜ-ರಾಣಿ ಶೋನಲ್ಲಿ ಈ ವಾರ ಸರ್‌ಪ್ರೈಸಿಂಗ್​ ರೌಂಡ್​ ಇದೆ. ಇಲ್ಲಿ ಪ್ರತಿ ಜೋಡಿಯ ಗಂಡಂದಿರು ತಮ್ಮ ಪತ್ನಿಯರಿಗೆ ಒಂದು ಸರ್‌ಪ್ರೈಸ್‌ ಕೊಡ್ಬೇಕು. ಅದೂ ಕೂಡಾ ಗಿಫ್ಟ್​ ಮೂಲಕ. ಎಲ್ಲಾ ಗಂಡಂದಿರು ತಮ್ಮ ರಾಣಿಯರಿಗೆ ವಿಭಿನ್ನಾ ಉಡುಗರೆಯನ್ನು ಕೊಟ್ರು. ಈ ಸುತ್ತು ಹೆಂಡತಿಯಾರಿಗೆ ಅಚ್ಚರಿ ಮಾತ್ರವಲ್ಲದೆ ತುಂಬಾನೆ ಎಮೋಷನಲ್​ ಕೂಡಾ ಆಗಿತ್ತು. ಇಶಿತಾ-ಮುರುಗ ಜೋಡಿ ನೋಡಿದ್ರೆ, ಪ್ರೀತಿ, ಪ್ರೇಮ, ತುಂಟತನ ಕೋಳಿ ಜಗಳ ಎಲ್ಲವು ಕಾಣತ್ತೆ. ಯಾವಾಗ್ಲೂ ನಗ್ತಾಯಿರುವ ಇಶಿತಾ ತನ್ನ ಗಂಡ ನೀಡಿದ ಸರ್​ಪ್ರೈಸ್​ ನೋಡಿ ಕಣ್ಣೀರಿಟ್ರು.

blank

ಇಷ್ಟವಾದ ಕಾರ್​ ನೋಡಿ ಇಶಿತಾ ಕಣ್ಣೀರು 

ಇಶಿತಾ ತಾನು ಸಂಪಾದನೆ ಮಾಡಿದ ಹಣದಿಂದ ಕಾರ್ ಖರೀದಿಸಿದ್ರು. ತನ್ನ ತಾಯಿಯ ಹಾಗೂ ತನ್ನ ಬರ್ತ್​ಡೆ ಡೇಟ್​ನ ನಂಬರ್​ಪ್ಲೇಟ್​ ಹಾಕಿಸಿದ್ರು. ಅರ್ಥ ಅವ್ರಿಗೆ ಆ ಕಾರ್​ ಎಲ್ಲವು ಆಗಿತ್ತು. ಆದ್ರೆ ಒಂದು ಸಂದರ್ಭದಲ್ಲಿ ಆ ಕಾರ್​ನ ಮಾರುವ ಪರಿಸ್ಥತಿ ಎದುರಾಗಿ ಮಾರಿಬಿಟ್ಟಿದ್ದರು. ವಿಶೇಷ ಅಂದ್ರೆ ಮುರುಗ ಆದೆ ಕಾರ್​ನ ಹುಡುಕಿ ಮತ್ತೆ ಖರೀದಿ ಮಾಡಿ ಇಶಿತಾಗೆ ಗಿಫ್ಟ್‌​ ಮಾಡಿದ್ದಾರೆ. ಆ ಕ್ಷಣ ಎಂಥವರ ಕಣ್ಣಲ್ಲಿಯೂ ನೀರು ತರಿಸುವಂತಿತ್ತು.

blank

Source: newsfirstlive.com Source link