ಕಾಂಗ್ರೆಸ್ ಎಂದಿಗೂ ಬೋನಿನಲ್ಲಿರುವ ಸಿಂಹವಲ್ಲ.. ಹೆದರಿ ಬಿಲ ಸೇರಿದ್ದು ಬಿಜೆಪಿಯವರು- ಡಿ.ಕೆ. ಸುರೇಶ್

ಕಾಂಗ್ರೆಸ್ ಎಂದಿಗೂ ಬೋನಿನಲ್ಲಿರುವ ಸಿಂಹವಲ್ಲ.. ಹೆದರಿ ಬಿಲ ಸೇರಿದ್ದು ಬಿಜೆಪಿಯವರು- ಡಿ.ಕೆ. ಸುರೇಶ್

ರಾಮನಗರ: ಅಗತ್ಯ ವಸ್ತುಗಳು ಸೇರಿದಂತೆ ಇಂಧನ ಬೆಲೆ ಏರಿಕೆಗೆ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಡವರ ಬದುಕಿನ ಬಗ್ಗೆ ಕಾಳಜಿ ಇಲ್ಲ.. ಪ್ರಧಾನಿ ಮೋದಿ ಅವರು ಸಾರ್ವಜನಿಕ ಬದುಕನ್ನು ಬಿಟ್ಟು ಇಪ್ಪತೈದು ವರ್ಷಗಳು ಕಳೆದಿವೆ.. ಜನ ಸಾಮಾನ್ಯರ ಬಗ್ಗೆ ಮೋದಿ ಅವರಿಗೆ ಅರ್ಥ ಆಗುತ್ತಿಲ್ಲ.. ಮೋದಿ ಅವರು ಸಾರ್ವಜನಿಕ ಜೀವನದಿಂದಲೇ ದೂರ ಇದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿಯೇ CD ಕೇಸ್​ನಲ್ಲಿ ಬೆನ್ನೆಲುಬಾಗಿ ನಿಂತಂತೆ ಕಾಣ್ತಿದೆ- ಡಿ.ಕೆ. ಸುರೇಶ್

ಯುಪಿಎ ಸರ್ಕಾರದಲ್ಲಿ ಹದಿನೈದರಿಂದ ಇಪ್ಪತ್ತು ಪೈಸೆ ಬೆಲೆ ಏರಿಸಿದಾಗ ಶೋಭಾ ಕರಂದ್ಲಾಜೆ ಖಂಡಿಸಿದ್ದರು. ಪ್ರಸ್ತುತ ಇಷ್ಟೊಂದು ಬೆಲೆ ಏರಿಕೆ ಆಗುತ್ತಿದ್ದರೂ ಅವರು ಬಾಯಿ ಮುಚ್ಕೊಂಡು ಏಕೆ ಇದ್ದಾರೆ ಎಂದು ರಾಜ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಸಂಸದ ಡಿ.ಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ನಾಯಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡುತ್ತಿದ್ದಾರೆ- ಡಿ.ಕೆ. ಸುರೇಶ್

ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಬೇಕಾದ್ದು ಅವರ ಕರ್ತವ್ಯ. ಪ್ರತಿ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ನಿಯಂತ್ರಿಸಬೇಕು . ಬಡವರ ಪರ ನಿಲ್ಲಬೇಕಾದ ಮೋದಿ ಅವರು ಮನ್‌ ಕೀ ಬಾತ್ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಬಿಜೆಪಿ ಜನಾಶೀರ್ವದ ಯಾತ್ರೆಯನ್ನು ಮಾಡುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಬೋನಿನಲ್ಲಿರುವ ಸಿಂಹ ಎಂದು ಕೆಲವರು ಹೇಳುತ್ತಾರೆ.. ಬೋನಿನಲ್ಲಿ‌ ಇರುವವರು ಕಾಂಗ್ರೆಸ್‌ನವರಲ್ಲ ಸಿಂಹಕ್ಕೆ ಹೆದರಿ ಬಿಲ ಸೇರಿರುವವರು ನಾವಲ್ಲ ಬಿಜೆಪಿಯವರು ಎಂದು ಚನ್ನಪಟ್ಟಣದಲ್ಲಿ ಸಂಸದ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

Source: newsfirstlive.com Source link