ವೈದ್ಯರೇ PIL ಹಾಕಿರೋದು ಆಘಾತಕಾರಿ, ಲಸಿಕೆ ಇರೋದು ಮನುಕುಲದ ಉಳಿವಿಗಾಗಿ -ಹೈಕೋರ್ಟ್​

ವೈದ್ಯರೇ PIL ಹಾಕಿರೋದು ಆಘಾತಕಾರಿ, ಲಸಿಕೆ ಇರೋದು ಮನುಕುಲದ ಉಳಿವಿಗಾಗಿ -ಹೈಕೋರ್ಟ್​

ಬೆಂಗಳೂರು: ಆಯುರ್ವೇದ ಕಾಲೇಜಿನಲ್ಲಿ ಲಸಿಕೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿಯ ವಿಚಾರಣೆಯು ಹೈಕೋರ್ಟ್​ನಲ್ಲಿ ಇಂದು ನಡೆಯಿತು.

ಡಾ.ಶ್ರೀನಿವಾಸ ಕಕ್ಕಿಲಾಯ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್​, ‌ವೈದ್ಯರು ಇಂತಹ ಪಿಐಎಲ್ ಹಾಕಿರುವುದು ಆಘಾತಕಾರಿ.. ಪೋಲಿಯೋ ಲಸಿಕೆಗೂ ಹೀಗೆ ವಿರೋಧ ಮಾಡಲಾಗಿತ್ತು. ವಿರೋಧ ಮಾಡಿದ ದೇಶಗಳಲ್ಲೇ ಪೋಲಿಯೋ ಉಳಿದುಕೊಂಡಿದೆ. ಲಸಿಕೆ ಇರುವುದು ಮನುಕುಲದ ಉಳಿವಿಗಾಗಿ ಅಂತಾ ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ ಲಸಿಕೆ ಹಾಕಿಸಿಕೊಂಡು ತರಗತಿಗೆ ಹಾಜರಾಗಲು ಕೋರ್ಟ್​ ಸೂಚನೆ ನೀಡಿತು. ಅಲ್ಲದೇ ಕೋವಿಡ್ ಕೇಸ್​ಗಳಿಗಾಗಿ ಇರುವ ಪ್ರತ್ಯೇಕ ಪೀಠಕ್ಕೆ ಪ್ರಕರಣವನ್ನ ವರ್ಗಾಯಿಸಿತು.

Source: newsfirstlive.com Source link