ಸುದೀಪ್​ ಮೇಲೆ ಕಣ್ಣಿಟ್ಟಿದ್ಯಾ ರಾಜಸ್ಥಾನ್ ರಾಯಲ್ಸ್..? RR ಟೀಮ್​ನಿಂದ ಸ್ಪೆಷಲ್ ಬರ್ತ್​ಡೇ ಗಿಫ್ಟ್..!

ಸುದೀಪ್​ ಮೇಲೆ ಕಣ್ಣಿಟ್ಟಿದ್ಯಾ ರಾಜಸ್ಥಾನ್ ರಾಯಲ್ಸ್..? RR ಟೀಮ್​ನಿಂದ ಸ್ಪೆಷಲ್ ಬರ್ತ್​ಡೇ ಗಿಫ್ಟ್..!

ಕಿಚ್ಚ ಸುದೀಪ್ ಅವರ ಸಿನಿಮಾ ಕರಿಯರ್​ಗೆ 25 ವರ್ಷ.. ಸುದೀಪ್ ಸಂಜೀವ ಜೀವಕ್ಕೆ 50 ವರ್ಷ.. 25 ವರ್ಷದಲ್ಲಿ ಕಿಚ್ಚ ಸುದೀಪ್ ದೇಶ ಮೆಚ್ಚುವ ನಟರಲ್ಲೊಬ್ಬರಾಗಿ ಬೆಳೆದಿದ್ದಾರೆ. ಹಾಫ್ ಸೆಂಚುರಿ ಬಾರಿಸಿರೋ ಕಿಚ್ಚನಿಗೆ ಒಂದು ಸ್ಪೆಷಲ್ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ​

ಕಳೆದ ಎರಡು ವರ್ಷದಿಂದ ಕಿಚ್ಚ ಸುದೀಪ್ ಅಭಿಮಾನಿಗಳು ಒಟ್ಟಿಗೆ ಬರ್ತ್​ಡೇ ಸೆಲಿಬ್ರೇಟ್ ಮಾಡಿಕೊಳ್ಳಲಿಲ್ಲ.. ಕೊರೊನಾ ಕಾಟದಿಂದ ಎಲ್ಲಾ ನಟರು ಯೋಚಿಸಿದಂತೆ ಅಭಿಮಾನಿಗಳ ಆರೋಗ್ಯವನ್ನ ಗಮನದಲ್ಲಿ ಇಟ್ಕೊಂಡು ಅಭಿಮಾನಿಗಳಿಂದ ದೂರವೇ ಉಳಿದ್ರು. ಆದ್ರೆ ಅವರ ರಂಜನೆಗೆ ಯಾವುದೇ ಕೊರತೆ ಆಗ್ಲೇ ಇಲ್ಲ.. ಹಿರಿತೆರೆಯಲ್ಲಿ ಆಗದೇ ಇದ್ದರೂ ಕಿರುತೆರೆಯಲ್ಲಾದ್ರು ಸೋಶಿಯಲ್ ಮೀಡಿಯಾದಲ್ಲಾದ್ರು ಅಭಿಮಾನಿಗಳನ್ನ ರಂಜನೆಯ ಕಡಲಿನಲ್ಲಿ ತೇಲಿಸುತ್ತಿದ್ದಾರೆ.

ನಾನು ಈ ಬಾರಿ ನಿಮ್ಮನ ಭೇಟಿಯಾಗಲ್ಲ, ದಯವಿಟ್ಟು ನನ್ನನ್ನ ಹುಡುಕಿಕೊಂಡು ಮನೆಗೆ ಬರಬೇಡಿ ಎಂದು ಸುದೀಪ್ ಮನವಿ ಮಾಡಿಕೊಂಡಿದ್ದರೂ ಅವರ ಅಭಿಮಾನಿಗಳು ನಡುರಾತ್ರಿಯೇ ಸುದೀಪ್ ಅವರ ಮನೆಯ ಮುಂದೆ ಜಮಾಯಿಸಿದ್ರು.. ತನ್ನ ನೆಚ್ಚಿನ ನಟನ ಪರವಾಗಿ ಜೈಕಾರವನ್ನ ಅಭಿಮಾನದಿಂದ ಶುಭಾಶಯಗಳನ್ನ ಕೂಗಿದ್ರು.. ಆದ್ರೆ ಸುದೀಪ್ ಹೇಳಿದಂತೆ ಸುದೀಪ್ ಅವರ ದರ್ಶನ ಅಭಿಮಾನಿಗಳಿಗೆ ಆಗ್ಲಿಲ್ಲ.

blank

ಇನ್ನೂ ರಾಜ್ಯಾದ್ಯಂತ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ವತಿಯಿಂದ ಒಂದು ಹನಿ ರಕ್ತ ಮತ್ತೊಂದು ಜೀವಕ್ಕೆ ಉಸಿರು ಅನ್ನೋ ಟ್ಯಾಗ್​​ಲೈನ್​​​ನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.. ಬೆಂಗಳೂರಿನಲ್ಲಿ ರೋಟಿರಿ ಕ್ಲಬ್ ಬೆಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.. ಈ ಸಂದರ್ಭದಲ್ಲಿ ಚಕ್ರವರ್ತಿ ಚಂದ್ರಚೂಡ್ ಮುಖ್ಯ ಅತಿಥಿ ಭಾಗವಹಿಸಿದ್ದರು.

ಸುದೀಪ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ನಮ್ಮವರ ಜೊತೆಗೆ ಬೇರೆ ಬೇರೆ ಭಾಷೆಯ ನಟ ನಟಿಯರು ನಿರ್ದೇಶಕ ನಿರ್ಮಾಪಕರು ಬರ್ತ್​ಡೇ ವಿಶ್ ಮಾಡಿದ್ದಾರೆ.. ಆದ್ರೆ ಕ್ರಿಕೆಟ್ ತಂಡವೊಂದು ಸುದೀಪ್ ಅವರಿಗೆ ವಿಶೇಷ ಗಿಫ್ಟ್ ಕೊಟ್ಟು ದಿಲ್ ಖುಷ್ ಮಾಡಿದೆ.

blank

ಸುದೀಪ್ ಮೇಲೆ ಕಣ್ಣಿಟ್ಟಿದ್ಯಾ ರಾಜಸ್ಥಾನ ರಾಯಲ್ಸ್..?
RR ಟೀಮ್​ನಿಂದ ಕರುನಾಡ ಕಿಚ್ಚನಿಗೆ ಸಿಕ್ತು ಉಡುಗೊರೆ

ಸಿನಿಮಾದ ಜೊತೆಗೆ ಕ್ರಿಕೆಟ್​​ನಲ್ಲೂ ಬಾರಿ ಆಸಕ್ತಿಯನ್ನ ಹೊಂದಿದ್ದಾರೆ ಕಿಚ್ಚ ಸುದೀಪ್​.. ಆಗಾಗ ಬ್ಯಾಟ್ ಹಿಡಿದು ಫೀಲ್ಡ್​ಗಿಳಿಯತ್ತಾರೆ ಕನ್ನಡ ಚಿತ್ರರಂಗವನ್ನ ಸೇರಿಸ್ಕೊಂಡು ಕ್ರಿಕೆಟ್ ಆಡ್ತಾರೆ.. ಸುದೀಪ್ ಅವರನ್ನ ಕಂಡ್ರೆ ಕ್ರಿಕೆಟ್ ಮಂದಿ ಬಲು ಇಷ್ಟಾನೂ ಪಡ್ತಾರೆ.. ಸಿಚ್ಯುವೇಷನ್ ಹಿಂಗ್ ಇರುವಾಗ ರಾಜಸ್ಥಾನ ರಾಯಲ್ಸ್ ನಿಂದ ಕಿಚ್ಚನಿಗೆ ಒಂದು ಉಡುಗೊರೆ ಸಿಕ್ಕಿದೆ.

ಆ್ಯಕ್ಚುಲಿ ನಮ್ಮ ಆರ್​​ಸಿಬಿ ಯಿಂದ ಕಿಚ್ಚನಿಗೆ ಗಿಫ್ಟ್ ಬರಬೇಕಿತ್ತು.. ಆದ್ರೆ ಸುದೀಪ್ ಅವರಿಗೆ ನಮ್ಮೂರಿನಂತೆ ಅಕ್ಕಪಕ್ಕದೂರಿನವರು ಹೆಚ್ಚು ಇಷ್ಟ ಪಡ್ತಾರೆ.. ಹಿಂಗಾಗಿ ರಾಜಸ್ಥಾನ ರಾಯಲ್ಸ್ ತಂಡದಿಂದ ವಿಶೇಷ ಟೀ ಶರ್ಟ್ ಒಂದು ಕಿಚ್ಚನ ಶಾಂತಿ ನಿವಾಸಕ್ಕೆ ಅಡ್ರೆಸ್ ಹುಡ್ಕೊಂಡು ಬಂದಿದೆ.. ಆರ್ ಆರ್ ತಂಡ ಕೊಟ್ಟ ಗಿಫ್ಟ್​​ಗೆ ಕಿಚ್ಚ ಪ್ಲಸ್ ಕಿಚ್ಚನ ಅಭಿಮಾನಿ ಲೋಕ ದಿಲ್​ ಖುಷ್ ಆಗಿದೆ.

Source: newsfirstlive.com Source link