‘ನೋ ವ್ಯಾಕ್ಸಿನೇನ್, ನೋ ರೇಷನ್’ ಬೇಡ – ಜಿಲ್ಲಾಧಿಕಾರಿಗಳಿಗೆ ‘ಅಂತಹ ನಿರ್ಧಾರ ಕೈಬಿಡಿ’ ಎಂದ ಸರ್ಕಾರ

‘ನೋ ವ್ಯಾಕ್ಸಿನೇನ್, ನೋ ರೇಷನ್’ ಬೇಡ – ಜಿಲ್ಲಾಧಿಕಾರಿಗಳಿಗೆ ‘ಅಂತಹ ನಿರ್ಧಾರ ಕೈಬಿಡಿ’ ಎಂದ ಸರ್ಕಾರ

ಚಾಮರಾಜನಗರ: ಕೊರೊನಾ ವ್ಯಾಕ್ಸಿನೇಷನ್​ಗೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿತ್ತು. ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದ್ದರು. ಇದಕ್ಕೆ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು, ಇದೀಗ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

blank

ವ್ಯಾಕ್ಷಿನ್ ಪ್ರಮಾಣಪತ್ರ ಇದ್ದರೆ ಮಾತ್ರ ರೇಷನ್, ಮಾಶಾಸನ ಪಾವತಿ ಮಾಡುವಂತೆ ಎಲ್ಲ ಬ್ಯಾಂಕ್​ಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಮಾಧ್ಯಮಗಳ ವರದಿ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ: ನೋ ವ್ಯಾಕ್ಸಿನೇಷನ್‌ ನೋ ರೇಷನ್, ನೋ ಪೆನ್ಷನ್ ವಿರುದ್ಧ ಡಿ.ಕೆ.ಶಿವಕುಮಾರ್ ಗರಂ

ಸರ್ಕಾರದಿಂದ ಇಂತಹ ಯಾವುದೇ ಸೂಚನೆಗಳು ನಮಗೆ ಬಂದಿಲ್ಲ. ಲಸಿಕೆ ಪಡೆದವರಿಗೆ ಮಾತ್ರ ರೇಷನ್, ಪಿಂಚಣಿ ಅನ್ನೋದಿಲ್ಲ. ಅಂತಹ ಯಾವುದೇ ಸೂಚನೆಯನ್ನ ಸರ್ಕಾರದಿಂದ ಯಾರಿಗೂ‌ ಕೊಟ್ಟಿಲ್ಲ. ಆ ರೀತಿ ನಿರ್ಧಾರಗಳನ್ನ ಕೈಗೊಂಡಿದ್ದರೆ ಕೂಡಲೇ ಕೈಬಿಡಬೇಕು ಅಂತಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಚಾ. ನಗರದಲ್ಲಿ ಹೊಸ ರೂಲ್ಸ್ ತಂದ DC.. ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ ನೋ ರೇಷನ್.. ನೋ ಪೆನ್ಷನ್..

Source: newsfirstlive.com Source link