ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿತ- ಸಂಕಷ್ಟದಲ್ಲಿ ಕಲಾಕಾರರು

ಕಾರವಾರ: ಗಣೇಶ ಹಬ್ಬ ಹತ್ತಿರ ಬರುತ್ತಿದ್ದು, ಕೊರೊನಾ ಕಾರಣದಿಂದ ಗಣೇಶನ ಮೂರ್ತಿಯನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಮೂರ್ತಿಯನ್ನು ತಯಾರು ಮಾಡುವವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಎಲ್ಲಾ ಉದ್ಯಮಗಳ ಮೇಲೆ ಆರ್ಥಿಕ ಬಿಕ್ಕಟ್ಟನ್ನು ತಂದೊಡ್ಡಿದೆ. ಇದೀಗ ವಿಘ್ನ ನಿವಾರಕ ಗಣಪತಿ ಮೂರ್ತಿ ಕೆಲಸಗಾರರಿಗೂ ಸಂಕಷ್ಟ ಎದುರಾಗಿದ್ದು, ಈ ಬಾರಿ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ. ಇದನ್ನೂ ಓದಿ:ತಂದೆ ಸಮಾಧಿ ಬಳಿ ಬಾಲಕಿ ಹುಟ್ಟುಹಬ್ಬ ಆಚರಣೆ

ಕೊರೊನಾ ಮೂರನೇ ಅಲೆಯಿಂದಾಗಿ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಯಾವ ರೀತಿ ಅನುಮತಿ ನೀಡಬೇಕು ಎಂಬ ಗೊಂದಲದಲ್ಲಿದೆ. ಸೆ.5ರಂದು ಈ ಕುರಿತು ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ತೀರ್ಮಾನ ಸಹ ಕೈಗೊಳ್ಳಲಿದೆ. ಆದರೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಾಗಿದ್ದು, ಸಾರ್ವಜನಿಕ ಉತ್ಸವ ನಡೆಸಲು ಅನುಮತಿ ನಿರಾಕರಿಸಲಾಗುತ್ತಿದೆ.

ಮಣ್ಣಿನಿಂದ ಗಣಪತಿ ಮೂರ್ತಿ ತಯಾರಿಕೆಯ ಬೇಡಿಕೆ ಇಳಿಯುತ್ತಿದ್ದು, ಇದರ ಪರಿಣಾಮ ಮೂರ್ತಿ ತಯಾರಕರ ಮೇಲೆ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಚತುರ್ಥಿಗೆ ಇರುತಿದ್ದ ಮೂರ್ತಿಗಳ ಬೇಡಿಕೆ ದೊಡ್ಡ ಮಟ್ಟದಲ್ಲಿ ಇಳಿದಿದೆ. ಕಾರವಾರ ತಾಲೂಕಿನಲ್ಲೇ 50ಕ್ಕೂ ಹೆಚ್ಚು ಗಣಪತಿ ಮೂರ್ತಿ ತಯಾರಕರಿದ್ದಾರೆ. ಜಿಲ್ಲೆಯಲ್ಲಿ ಇದರ ಸಂಖ್ಯೆ ಸಾವಿರ ದಾಟುತ್ತದೆ. ಇದನ್ನೂ ಓದಿ:ತಂದಿಟ್ಟು ತಮಾಷೆ ನೋಡೋದಕ್ಕೆ ಹೇಳಿರ್ತಾರೆ – ಉಮಾಪತಿ ಬಳಿ ಕ್ಷಮೆ ಕೇಳಿದ್ದ ಭೂಗತ ಪಾತಕಿ ರವಿ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮೂರು ತಲೆಮಾರಿನಿಂದ ಗಣಪತಿ ತಯಾರಿಸುತ್ತಿರುವ ವಿನಾಯಕ್ ಬಾಂದೇಕರ್, ಈ ಬಾರಿಯ ಕೊರೊನಾದಿಂದ ಸಂಘ ಸಂಸ್ಥೆಗಳು ಮೂರ್ತಿ ತಯಾರು ಮಾಡಲು ಆರ್ಡರ್ ನೀಡುತ್ತಿದ್ದರು. ಇನ್ನೂ ಅಂಗಡಿಯಲ್ಲಿ ಮಾರಾಟ ಮಾಡುವವರು ಸಹ ಮೂರ್ತಿ ತಯಾರಿಕೆಗೆ ಈ ಬಾರಿ ಕಡಿಮೆ ಸಂಖ್ಯೆಯ ಆರ್ಡರ್ ನೀಡಿದ್ದಾರೆ. ಜನರಿಂದಲೂ ಕೂಡ ಆರ್ಡರ್ ಬರುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

blank

ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗೆ ನಿರ್ಬಂಧವಾಗಿದ್ದು, ಈ ಮಳೆಯ ಹಾನಿಯಿಂದ ಕುಂಬಾರಮಣ್ಣಿನ ಬೇಡಿಕೆ ಇದ್ದರೂ ತಯಾರಿಕೆಗೆ ಬೇಕಾದ ಮಣ್ಣು ಸಿಗುತ್ತಿಲ್ಲ. ಹೀಗಾಗಿ ದುಪ್ಪಟ್ಟು ಹಣ ನೀಡಿ ಮಣ್ಣನ್ನು ಖರೀದಿಸಬೇಕಿದ್ದು, ನಾವು ಮಾಡಿದ ಕೆಲಸಕ್ಕೆ ಸೂಕ್ತ ಹಣ ದೊರಕದೇ ಇತ್ತ ಕೆಲಸವನ್ನು ಸಹ ಬಿಡಲಾಗದ ಸ್ಥಿತಿಗೆ ಕಲಾವಿದರು ಸಿಲುಕಿದ್ದಾರೆ.ಇದನ್ನೂ ಓದಿ:ಬೆಳಗಾವಿ ಮೂವರು ನಾಯಕರನ್ನ ಪಕ್ಷದಿಂದ ಉಚ್ಛಾಟಿಸಿದ ಬಿಜೆಪಿ

ಈ ಹಿಂದೆ ಒಂದು ಚಿಕ್ಕ ಗಣಪತಿಗೆ ಮೂರ್ತಿಗೆ 1,000 ರೂ. ದಿಂದ ಆಕೃತಿಗೆ ಅನುಸಾರವಾಗಿ 5,000 ರೂ ಇರುತಿತ್ತು. ಇನ್ನು ದೊಡ್ಡ ಗಣಪತಿಗೆ ಐವತ್ತು ಸಾವಿರದಿಂದ ಎರಡು ಲಕ್ಷ ರೂ. ವರೆಗೆ ಆಕಾರದ ಮೇಲೆ ದರ ನಿಗದಿಯಾಗುತಿತ್ತು. ಆದರೇ ಇದೀಗ ದರವು ಅರ್ಧದಷ್ಟು ಇಳಿದಿದೆ. ಜೊತೆಗೆ ಬೇಡಿಕೆಯು ಸಹ ಇಳಿದಿದೆ.

ಜಿಲ್ಲೆಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಟಾಪನೆ ಅಭಿಯಾನ ಸಹ ನಡೆಯುತ್ತಿದೆ. ಹೀಗಾಗಿ ಜನರು ಖರ್ಚು ರಹಿತ ಹಾಗೂ ಪರಿಸರ ಸ್ನೇಹಿ ಗಣಪತಿಯತ್ತ ಮುಖ ಮಾಡಿದ್ದಾರೆ. ಕೇವಲ ಮೂರು ತಿಂಗಳುಗಳ ವ್ಯವಹಾರ ನಡೆಸುವ ಕಲಾವಿದರಿಗೆ ಇದೇ ಆರ್ಥಿಕ ಮೂಲ ಕೂಡ. ಹೀಗಾಗಿ ಕಾರ್ಮಿಕರಿಗೆ ನೀಡಿದಂತೆ ರಾಜ್ಯ ಸರ್ಕಾರ ಈ ವೃತ್ತಿಯವರಿಗೆ ಆರ್ಥಿಕ ಬೆಂಬಲ ನೀಡಬೇಕು ಎಂಬುದು ಕಲಾಕಾರರ ಬೇಡಿಕೆಯಾಗಿದೆ. ಇದನ್ನೂ ಓದಿ:ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

ಕೊರೊನಾ ಮೂರನೇ ಅಲೆಯಿಂದಾಗಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸುವ ಕುರಿತು ಸೂಕ್ತ ನಿರ್ಧಾರಕ್ಕೆ ಬಾರದೇ ವಿಘ್ನ ನಿವಾರಕ ಗಣಪತಿಗೂ ವಿಘ್ನ ತಂದೊಡ್ಡಿದೆ. ಇದರ ಜೊತೆಗೆ ಕುಂಬಾರು ಮಣ್ಣಿನ ಗಣಪತಿ ತಯಾರಿಕೆಯನ್ನು ನಂಬಿದ ಕಲಾವಿದರಿಗೂ ಸಹ ಆರ್ಥಿಕವಾಗಿ ತೊಂದರೆಗೆ ಸಿಲುಕಿದ್ದಾರೆ.

Source: publictv.in Source link