ಈ ಗ್ರಾಪಂ ಅಧಿಕಾರಿಗಳನ್ನ ಹೆಸರಿನಿಂದಲೇ ಕರೆಯಬೇಕು.. ‘ಸರ್’, ‘ಮೇಡಂ’ ಅನ್ನಂಗಿಲ್ಲ

ಈ ಗ್ರಾಪಂ ಅಧಿಕಾರಿಗಳನ್ನ ಹೆಸರಿನಿಂದಲೇ ಕರೆಯಬೇಕು.. ‘ಸರ್’, ‘ಮೇಡಂ’ ಅನ್ನಂಗಿಲ್ಲ

ಕೇರಳ: ಪಾಲಕ್ಕಾಡ್ ಜಿಲ್ಲೆಯ ಮಥುರ್ ಗ್ರಾಮ ಪಂಚಾಯಿತಿಯಲ್ಲಿ ಹೊಸದೊಂದು ನಿಯಮವನ್ನ ಜಾರಿಗೊಳಿಸಲಾಗಿದೆ. ಈ ಗ್ರಾಮಪಂಚಾಯಿತಿಯಲ್ಲಿ ತಮ್ಮ ಕೆಲಸಕ್ಕಾಗಿ ಬರುವ ಯಾವುದೇ ಸಾರ್ವಜನಿಕರು ಅಲ್ಲಿನ ಅಧಿಕಾರಿಗಳನ್ನು ಸರ್, ಅಥವಾ ಮೇಡಮ್ ಎಂದು ಕರೆಯುವಂತಿಲ್ಲ.

ಇದನ್ನೂ ಓದಿ: ಕೇರಳಕ್ಕೆ ಹತ್ತರ ಕುತ್ತು.. ಸೋಂಕಿತರಿಗೂ ಸೋಂಕು; ಕರ್ನಾಟಕಕ್ಕೂ ಆತಂಕ ತಂದಿರೋ ದೇವರ ನಾಡು

ಮಂಗಳವಾರ ಇಲ್ಲಿನ ಗ್ರಾಮ ಪಂಚಾಯಿತಿ ಸಭೆಯೊಂದನ್ನ ಕರೆದಿತ್ತು. ಈ ಸಭೆಯಲ್ಲಿ ಜನರು ಅಧಿಕಾರಿಗಳನ್ನು ಸರ್ ಅಥವಾ ಮೇಡಮ್ ಎಂದು ಸಂಭೋದಿಸುವುದನ್ನು ಬ್ಯಾನ್ ಮಾಡಲಾಗಿದೆ. ದೇಶದಲ್ಲೇ ಇಂಥ ನಿಯಮ ಜಾರಿಗೆ ತಂದ ಮೊದಲ ಗ್ರಾಮ ಪಂಚಾಯಿತಿ ಅನ್ನೋ ಹೆಗ್ಗಳಿಕೆಗೆ ಈ ಗ್ರಾಮ ಪಂಚಾಯಿತಿ ಪಾತ್ರವಾಗಿದೆ.

ಇದನ್ನೂ ಓದಿ: ಶೇ.100 ವ್ಯಾಕ್ಸಿನ್‌ ಪಡೆದ ಮೊದಲ ಪ್ರವಾಸಿ ಸ್ಥಳ ಕೇರಳದ ವೈತಿರಿ; ಇಲ್ಲಿಯ ಸ್ಪೆಷಲ್ ಏನು..?

ಜನರು ಅಧಿಕಾರಿಗಳನ್ನು ಇನ್ನು ಮುಂದೆ ಸರ್ ಅಥವಾ ಮೇಡಮ್ ಎಂದು ಕರೆಯಬೇಕಿಲ್ಲ. ಬದಲಿಗೆ ಅಧಿಕಾರಿಯ ಹೆಸರು ಅಥವಾ ಅವರ ಹುದ್ದೆಯನ್ನ ಸಂಭೋದಿಸಿ ಕರೆಯಬಹುದು. ಎಲ್ಲಾ ಪಂಚಾಯತ್ ಅಧಿಕಾರಿಗಳ ಹೆಸರುಗಳನ್ನು ಅವರ ಟೇಬಲ್ ಮೇಲೆ ಪ್ರದರ್ಶಿಸಲಾಗುವುದು. ಒಂದು ವೇಳೆ ವಯಸ್ಸಾದವರನ್ನು ಅವರ ಹೆಸರಿನಿಂದ ಕರೆಯಲು ಮುಜುಗರವಾದರೆ ಅಂಥವರು ಚೇಟಾ(ಅಣ್ಣ) ಅಥವಾ ಚೇಚಿ(ಅಕ್ಕ) ಎಂದು ಕರೆಯಬೇಕು ಅಂತಾ ಈ ಪಂಚಾಯತ್ ನಿರ್ಧರಿಸಿದೆ.

ಅಷ್ಟೇ ಅಲ್ಲದೆ ಅಧಿಕಾರಿಗಳ ಬಳಿ ಜನರು ಮನವಿ ರೀತಯ ಪದಗಳನ್ನು ಬಳಸುವಂತಿಲ್ಲ.. ಬದಲಿಗೆ ಒತ್ತಾಯಿಸುತ್ತೇನೆ.. ಅಥವಾ ಬಯಸುತ್ತೇನೆ ರೀತಿಯ ಪದಗಳನ್ನು ಬಳಸಬೇಕು ಎಂದು ಹೇಳಿದೆ.

Source: newsfirstlive.com Source link