50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ.. ಸುದೀಪ್​ಗೆ ಮರೆಯಲಾಗದ 50 ವಿಶೇಷ ಸಂಗತಿಗಳು..!

50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ.. ಸುದೀಪ್​ಗೆ ಮರೆಯಲಾಗದ 50 ವಿಶೇಷ ಸಂಗತಿಗಳು..!

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್​ ಇಂದು ತನ್ನ 50ನೇ ವಸಂತಕ್ಕೆ ಕಾಲಿಟ್ಟಿದ್ದು, ಕೊರೊನಾ ಕಾರಣದಿಂದ ಸಂಭ್ರಮಾಚರಣೆಗಳಿಂದ ದೂರ ಉಳಿದಿದ್ದಾರೆ. ಆದರೆ 50 ವರ್ಷಗಳಲ್ಲಿ ಕಿಚ್ಚ ಸುದೀಪ್​ ಅವರಿಗೆ ಮರೆಯಲಾಗದ 50 ವಿಶೇಷತೆಗಳು ಇಲ್ಲಿವೆ.

 1. ಕಿಚ್ಚ ಸುದೀಪ್​ ಹುಟ್ಟಿದು 1971 ಸೆಪ್ಟೆಂಬರ್​ 2 ಹುಟ್ಟೂರು ಶಿವಮೊಗ್ಗ .. ತಂದೆ ಸಂಜೀವ್ ಮಂಜಪ್ಪ- ತಾಯಿ ಸರೋಜ blank
 2. ವಿದ್ಯಾಭ್ಯಾಸ -ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ blank
 3. ಸಿನಿಮಾದಲ್ಲಿ ಬ್ಯುಸಿ ಇದ್ರು ಸಹ ಕ್ರಿಕೆಟ್​ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಕಿಚ್ಚ ಸುದೀಪ್​
 4. ಉದಯ ಟಿ.ವಿಯಲ್ಲಿ ಮೂಡಿಬರುತ್ತಿದ ‘ಪ್ರೇಮದ ಕಾದಂಬರಿ’ ಧಾರವಹಿಯಲ್ಲಿ ನಟನೆ. blank
 5. 1997 ರಲ್ಲಿ ತೆರೆಕಂಡ ‘ತಾಯವ್ವ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಕಿಚ್ಚ ಸುದೀಪ್ blank
 6. ‘ಪ್ರತ್ಯರ್ಥ’ ಚಿತ್ರದಲ್ಲಿ ಪೋಷಕ ಪಾತ್ರ ನಿಭಾಯಿಸಿ 2000 ಇಸವಿಯಲ್ಲಿ ‘ಸ್ಪರ್ಶ’ ಚಿತ್ರದಲ್ಲಿ ನಾಯಕನಾಗಿ ನಟನೆ blank
 7. ಕಿಚ್ಚ ಸುದೀಪ್​ ಸಿನಿ ಜರ್ನಿಗೆ 2001 ತಿರುವು ಕೊಟ್ಟ ಓಂ ಪ್ರಕಾಶ್ ರಾವ್​ ನಿರ್ದೆಶನದ ‘ಹುಚ್ಚ’ ಸಿನಿಮಾ blank
 8. ಹುಚ್ಚ ಚಿತ್ರಕ್ಕೂ ಮುಂಚೆ ಸುದೀಪ್​ ಆಗಿದ್ದವರು ‘ಹುಚ್ಚ’ ಸಿನಿಮಾ ರಿಲೀಸ್​ ಬಳಿಕ ಕಿಚ್ಚ ಸುದೀಪ್​ ಎಂದೇ ಖ್ಯಾತಿ ಪಡೆದ್ರುblank
 9. ‘ಹುಚ್ಚ’ ಸಿನಿಮಾದ ಬಳಿಕ ‘ವಾಲಿ, ಚಂದು, ಧಮ್​ ಚಿತ್ರಗಳ ಮೂಲಕ ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ಕಿಚ್ಚ ಸುದೀಪ್blank
 10. 2003ರಲ್ಲಿ ತೆರೆ ಕಂಡ ‘ ಸ್ವಾತಿ ಮುತ್ತು’ ಚಿತ್ರ ಸುದೀಪ್​ ಸಿನಿ ಕರಿಯರ್​ಗೆ ಮತ್ತೊಂದು ದೊಡ್ಡ ಸಕ್ಸಸ್ ತಂದುಕೊಟ್ಟತ್ತು. ಈ ಚಿತ್ರದ ನಟನೆಗಾಗಿ ಮೂರು ಪ್ರತಿಷ್ಟಿತ ಆರ್ವಾಡ್​ಗಳು ಸುದೀಪ್​ ಪಾಲಿಗೆ ಒಲಿದು ಬರುತ್ತದೆblank
 11. ತಮ್ಮ ಬಹುದಿನಗಳ ಗೆಳತಿಯಾಗಿದ್ದ ಪ್ರಿಯಾ ರಾಧಾಕೃಷ್ಣ ಅವರನ್ನು 2001ರಲ್ಲಿ ಸುದೀಪ್​ ವಿವಾಹವಾಗುತ್ತಾರೆ.blank
 12. 2004 ಮೇ 20 ನೇ ತಾರೀಖು ಸುದೀಪ್​ ಪ್ರಿಯಾ ದಂಪತಿಗೆ ಸಾನ್ವಿ ಎಂಬು ಹೆಣ್ಣು ಮಗು ಜನಿಸುತ್ತಾಳೆ. blank
 13. 2006ರಲ್ಲಿ ‘ಮೈ ಆಟೋಗ್ರಾಫ್​ ‘ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಹೊಸ ಹೆಜ್ಜೆ ಇಟ್ಟ ಸುದೀಪ್​ blank
 14. ನಂತರ ನಂ. 73, ಶಾಂತಿನಿವಾಸ, ವೀರ ಮದಕರಿ. ಜಸ್ಟ್​ ಮಾತ್​ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಸಿನಿಮಾಗಳಿಗೆ ಆಕ್ಷನ್​ ಕಟ್​ ಹೇಳಿರೋ ಕಿಚ್ಚ ಸುದೀಪ್ blank
 15. ‘ಮೈ ಆಟೋಗ್ರಾಫ್​ ‘, ನಂ. 73, ಶಾಂತಿನಿವಾಸ, ಜಿಗರ್​ತಂಡ, ಅಂಬಿ ನಿಂಗ್​ ವಾಯಸ್ಸಾಯ್ತೋ ಚಿತ್ರಗಳನ್ನು ನಿರ್ಮಾಣ ಮಾಡಿರುವ ಸುದೀಪ್. blank
 16. ಚಂದು, ಕೆಂಪೇಗೌಡ, ಬಚ್ಚನ್​, ರಾಟೆ, ಕೋಟಿಗೊಬ್ಬ-2 ಚಿತ್ರ ಸೇರಿದಂತೆ ಕಿಚ್ಚ ಸುದೀಪ್​ ಹಲವು ಸಿನಿಮಾಗಳಲ್ಲಿ ಗಾಯಕನಾಗಿಯೂ ಮೋಡಿ. blank
 17. 25 ವರ್ಷದ ತಮ್ಮ ಸಿನಿ ಕರಿಯರ್​ನಲ್ಲಿ 55 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುದೀಪ್​ ನಟಿಸಿದ್ದಾರೆ.
 18. 2010ರಲ್ಲಿ ಸುರ್ವಣ ವಾಹಿನಿಯಲ್ಲಿ ಬರುತ್ತಿದ ಪ್ಯಾಟೆ ಹುಡುಗಿರ್​ ಹಳ್ಳಿ ಲೈಫು ರಿಯಾಲಿಟಿ ಶೋನಲ್ಲಿ ಸುದೀಪ್​ ಮುಖ್ಯ ಮೆಂಟರ್​ ಆಗಿ ಕಾರ್ಯನಿರ್ವಹಿಸಿದ್ರು.. ಈ ಶೋ ಆಂದಿನ ಕಾಲಕ್ಕೆ ಕನ್ನಡದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. blank
 19. 2013 ರಿಂದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ ಬಾಸ್​ ಕಾರ್ಯಕ್ರಮವನ್ನು ಸುದೀಪ್​ ಅವರು ನಿರೂಪಣೆ ಮಾಡಲು ಆರಂಭಿಸಿದ್ದರು. ಅಂದಿನಿಂದ ಇಂದಿನ ವರೆಗೂ ಒಟ್ಟು 8 ಕನ್ನಡ ಬಿಗ್​ ಬಾಸ್​ ಸೀಸನ್​ನನ್ನು ಸುದೀಪ್​ ಅವರು ನಿರೂಪಣೆ ಮಾಡಿದ್ದಾರೆ. blank
 20. 2008 ರಲ್ಲಿ ಫೂಂಕ್​ ಚಿತ್ರದ ಮೂಲಕ ಮೊದಲ ಬಾರಿಗೆ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್..
 21. ಫೂಂಕ್​ ನಂತ್ರ ,ರನ್, ರಕ್ತ ಚರಿತ್ರ-1, ರಕ್ತ ಚರಿತ್ರ-2, ಫೂಂಕ್2,​ ದಬಾಂಗ್​ – 3 ಮುಂತಾದ ಬಾಲಿವುಡ್​ ಸಿನಿಮಾಗಳಲ್ಲಿ ಸುದೀಪ್​ ಆಭಿನಯಿಸಿದ್ದಾರೆ. blank
 22. ರನ್​ ಚಿತ್ರದಲ್ಲಿ ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮಗನ ಪಾತ್ರದಲ್ಲಿ ಸುದೀಪ್​ ನಟನೆ blank
 23. 2019 ರಲ್ಲಿ ತೆರೆಕಂಡ ದಬಾಂಗ್​ ಚಿತ್ರದಲ್ಲಿ ಬಾಲಿವುಡ್​ ಬಾಕ್ಸ್​ಆಫಿಸ್​ ಸುಲ್ತಾನ ಸಲ್ಮಾನ್​ ಖಾನ್​ ಎದರು ವಿಲನ್​ ಆಗಿ ಸುದೀಪ್​ ಅಭಿನಯಿಸಿದ್ದಾರೆ. blank
 24. 2012ರಲ್ಲಿ ನಿರ್ದೇಶಕ ರಾಜಮೌಳಿ ನಿರ್ದೇಶನಲ್ಲಿ ಮೂಡಿ ಬಂದ ‘ಈಗ’ ಸಿನಿಮಾ ಮೂಲಕ ಸುದೀಪ್​ ಟಾಲಿವುಡ್​ಗೆ ಎಂಟ್ರಿ ಕೊಟ್ರು. blank
 25. ‘ಈಗ’ ಸಿನಿಮಾದಲ್ಲಿ ಸುದೀಪ್​ ಮೊದಲ ಬಾರಿಗೆ ವಿಲನ್​ ಆಗಿ ಆಭಿನಯಿಸಿದ್ರು. ನಂತರ ಈ ಸಿನಿಮಾ ಸೂಪರ್​ ಹಿಟ್​ ಆಗಿ ಸುದೀಪ್​ ಸಿನಿ ಕರಿಯರ್​ನ ದಿಕ್ಕನೇ ಬದಲಾಯಿಸಿಬಿಡ್ತು.
 26. ‘ಈಗ’ ಸಿನಿಮಾದ ಬಳಿಕ ಸುದೀಪ್​ ರಾಜಮೌಳಿ ನಿರ್ದೇಶನದ ಸೂಪರ್​ ಹಿಟ್​ ಸಿನಿಮಾ ‘ಬಾಹುಬಲಿ’ ಚಿತ್ರದಲ್ಲೂ ಕಿಚ್ಚನ ಕಮಾಲ್
 27. ಕಿಚ್ಚ ಸುದೀಪ್​ ಅವರಿಗೆ ಕಾಲೇಜು ದಿನಗಳಿಂದಲೂ ಕ್ರಿಕೆಟ್​ ಮೇಲೆ ಸ್ವಲ್ಪ ಒಲವು ಹೆಚ್ಚಿತು. ಹೀಗಾಗಿ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​ನಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಕರ್ನಾಟಕ ಬುಲ್ಡೋಜರ್ಸ್ ಟೀಮ್​ನ ಕ್ಯಾಪ್ಟನ್​ ಆಗಿ ಸುದೀಪ್​ ಕಾರ್ಯನಿರ್ವಹಿಸಿದ್ದಾರೆ. blank
 28. ಸುದೀಪ್​ ಅವರ ಅಲ್​ ಟೈಮ್​ ಫೇವ್​ರೇಟ್​ ಫುಡ್​ ರಾಗಿ ಮುದ್ದೆ ಅಂತಾ ಸಾಕಷ್ಟು ಬಾರಿ ಸುದೀಪ್​ ಹೇಳಿದ್ದಾರೆblank
 29. ಸುದೀಪ್​ ಅವರಿಗೆ ಕುಕಿಂಗ್​ ಅಂದ್ರೆ ಬಹಳ ಅಚ್ಚು ಮೆಚ್ಚು.. ಹಲವರು ಬಾರಿ ಸುದೀಪ್​ ಅವರು ಬಿಗ್​ ಬಾಸ್​ ಶೋನಲ್ಲಿ ಇರುವ ಸ್ಪರ್ಧಿಗಳಿಗೆ ಕಿಚ್ಚ ತಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿದ್ದಾರೆ
 30. 2012ರಲ್ಲಿ ಕರ್ನಾಟಕ ರಕ್ಷಣ ವೇದಿಕೆ ಕಿಚ್ಚ ಸುದೀಪ್​ ಅವರಿಗೆ “ಅಭಿನಯ ಚಕ್ರವರ್ತಿ” ಎಂಬ ಬಿರುದನ್ನು ನೀಡುತ್ತಾರೆ.
  1. ಬಾಲಿವುಡ್​ನ ಡೊಡ್ಡ ದೊಡ್ಡ ಸೆಲೆಬ್ರೇಟಿಗಳು ಟ್ವಿಟರ್​ನಲ್ಲಿ ಇಲ್ಲದ ಕಾಲದಲ್ಲಿ ನಮ್ಮ ಕಿಚ್ಚ ಸುದೀಪ್​ ಟ್ವಿಟ್ಟರ್​​ ಅಕೌಂಟ್​ಅನ್ನು ಹೊಂದಿದರು
 31. ಈಗ ಸುದೀಪ್​ ಅವರ ಟ್ವಿಟ್​​​​​​​ ಅಕೌಂಟ್​​ ಅನ್ನ 2.5 ಮಿಲಿಯನ್ ಅಂದ್ರೆ ಬರೋಬ್ಬರಿ 25 ಲಕ್ಷ ಜನ ಫಾಲೋ ಮಾಡ್ತಿದ್ದಾರೆ.. ಕನ್ನಡದಲ್ಲಿ ಟ್ವಿಟರ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಏಕೈಕ ನಟ ಅನ್ನೋ ಹೆಗ್ಗಳಕೆಗೆ ಸುದೀಪ್​ ಪಾತ್ರರಾಗಿದ್ದಾರೆ.
 32. ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಕಿಚ್ಚ ಸುದೀಪ್ ‘ಅವುಕು ರಾಜು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಧ್ವನಿಯೆತ್ತಿದ್ದ ನರಸಿಂಹ ರೆಡ್ಡಿಯ ಜೀವನ ಕತೆಯನ್ನು ಚಿತ್ರ ಒಳಗೊಂಡಿತ್ತು. ಈ ಚಿತ್ರಕ್ಕೆ ಸಿನಿ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. blank
 33. ಕಾಲಿವುಡ್​ ಥಳಪತಿ ವಿಜಯ್​ ನಟನೆಯ ‘ಪುಳಿ’ ಚಿತ್ರದಲ್ಲೂ ಸುದೀಪ್​ ವಿಲನ್​ ಆಗಿ ಅಭಿನಯಿಸಿದ್ದಾರೆ
 34. ಕಿಚ್ಚ ಸುದೀಪ್​ ಅವರಿಗೆ ಅಲ್​ಟೈಮ್​ ಫೇವರೆಟ್​ ಹಿರೋಯಿನ್​ ಅಂದ್ರೆ ಭಾರತಿ ವಿಷ್ಣು ವರ್ಧನ್​.. ಮತ್ತು ಕಾಶಿನಾಥ್​ ಅವರ ‘ಶ್’ ಚಿತ್ರದ ಢವ, ಢವ ಹಾಡು ಸುದೀಪ್​ ಅವರ ಅಲ್​ಟೈಮ್​ ಫೇವರೆಟ್​ ಹಾಡು..
 35. ಸಮಾಜ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಕಿಚ್ಚ ಚಾರಿಟೇಬಲ್ ಸೊಸೈಟಿಯನ್ನು ಸುದೀಪ್​ ಪ್ರಾರಂಭಿಸಿದ್ದರು. ಈ ಚಾರಿಟೇಬಲ್ ಸೊಸೈಟಿ ವತಿಯಿಂದ ಸುದೀಪ್​ ಈಗಾಗಲೆ ಸಾಕಷ್ಟು ಅನನ್ಯ ಸೇವೆಗಳನ್ನು ನೀಡಿದ್ದಾರೆ
 36. ಸಿನಿಮಾ, ರಿಯಾಲಿಟಿ ಶೋ ಹೊರತು ಪಡಿಸಿ ಸುದೀಪ್​ ಸಾಕಷ್ಟು ಜಾಹಿರಾತುಗಳ ಬ್ರಾಂಡ್ ಅಂಬಾಸೆಡರ್ ಆಗಿಯೂ ಕಾರ್ಯನಿರ್ವಸಿಹಿದ್ದಾರೆ
 37. 2021 ಜನವರಿ 31 ನೇ ತಾರೀಖ್ ಸುದೀಪ್​ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಸಂಭ್ರಮದಲ್ಲಿ ದುಬೈನ ಬುರ್ಜ್​ ಖಲಿಫಾ ಬಿಲ್ಡಿಂಗ್​​ಗೆ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಟೀಸರ್​ ಲಾಂಚ್ ಮಾಡಿದ ಹೆಗ್ಗಳಿಕೆ ಕಿಚ್ಚನಿಗಿದೆ
 38. ಹಿಂದಿ ,ತೆಲುಗು ಭಾಷೆಗಳ ಶೋಗಳಿಗೆ ಆಥಿತಿಯಾಗಿ ಭೇಟಿ ನೀಡಿದ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಸುದೀಪ್​ ಪಾತ್ರರಾಗಿದ್ದಾರೆ
 39. ಸುದೀಪ್​ಗೆ ಕ್ರಿಕೆಟ್ ಮೇಲೆ ಹೆಚ್ಚು ಒಲವು ಇದ್ರು ಕೂಡ ಅವರ ತಂದೆಗೆ ಮಗ ಕ್ರಿಕೆಟರ್​ ಅಗೋದು ಅಷ್ಟೋಂದು ಇಷ್ಟವಿರಲಿಲ್ಲ.
 40. 2021 ಜೂನ್ 13 ನೇ ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆಯೋಜಿಸಿದ್ದ ಚೆಕ್‌ಮೆಟ್ ಕೋವಿಡ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್​ ವಿಶ್ವ ಮಟ್ಟದ ಚೆಸ್​ ಚಾಂಪಿಯನ್​ ವಿಶ್ವನಾಥ್ ಆನಂದ್ ಜೊತೆ ಅನ್​ಲೈನ್​ ಮೂಲಕ ಚೆಸ್​ ಆಟವಾಡಿದ್ರು. ಪಂದ್ರದಲ್ಲಿ ಸೋತರು ಕೂಡ ಸುದೀಪ್​ ಬಹಳ ಅದ್ಭುತವಾಗಿ ಆಟವಾಡಿದ್ರು.
 41. ದಬಾಂಗ್ ಚಿತ್ರದ ನಂತರ ಸಲ್ಲು ಸುದೀಪ್​ ಇಬ್ರು ಬೆಸ್ಟ್​ ಫ್ರಂಡ್ಸ್​ ಆದ್ರು.. ಇದಕ್ಕೆ ಸಾಕ್ಷಿ ಎಂಬಂತೆ. ಸಲ್ಲು ಭಾಯ್​ ಸುದೀಪ್​ಗೆ ಐಷಾರಾಮಿ BMW ಕಾರ್​ಅನ್ನು ಗಿಫ್ಟ್ ಮಾಡಿದ್ದಾರೆ.
 42. ಸುದೀಪ್ ತಮ್ಮ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಕಡೆಯಿಂದ ಹತ್ತು ಸರ್ಕಾರಿ ಶಾಲೆಗಳನ್ನ ದತ್ತು ಸ್ವೀಕಾರ ಮಾಡಿ ಆ ಶಾಲೆಗಳನ್ನು ಡಿಟಿಜಿಲಿಕರಣ ಮಾಡಿಸುತ್ತಿದ್ದಾರೆ.
 43. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅವಿ ಗ್ರಾಮವನ್ನು ಸುದೀಪ್​ ದತ್ತು ಸ್ವೀಕಾರ ಮಾಡಿದ್ದಾರೆ. ಇನ್ನು ಇಂದು ಸುದೀಪ್​ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ತೇಜಸ್ವಿ ಸೂರ್ಯ ಚಾಲನೆ ನೀಡಲಿದ್ದಾರೆ.
 44. ಸುದೀಪ್​ ಬರ್ತ್​ಡೇ ಪ್ರಯುಕ್ತ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದು ರಾಜ್ಯದ 100 ಕಡೆ 10ಸಾವಿರಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಲಿದ್ದಾರೆ.
 45. ಸುದೀಪ್​ ನಟನೆಯ ಬಹುನಿರೀಕ್ಷಿತ ಚಿತ್ರ ‘ಕೋಟ್ಟಿಗೊಬ್ಬ -3 ‘ ಸಿನಿಮಾ ನಾಡ ಹಬ್ಬ ದಸರಾ ಹಬ್ಬದಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ
 46. ಖ್ಯಾತ ಕಾಲಿವುಡ್​ ಡೈರೆಕ್ಟರ್ ವೆಕಂಟ್​ ಪ್ರಭು ಕಿಚ್ಚ ಸುದೀಪ್​ರ ಮುಂದಿನ ಸಿನಿಮಾಗೆ ಆ್ಯಕ್ಷನ್​ಕಟ್ ಹೇಳಲಿದ್ದು. ಇಂದು ಸುದೀಪ್​ ಬರ್ತ್​ಡೇ ಪ್ರಯುಕ್ತ ಈ ಚಿತ್ರದ ಅಪ್​ಡೇಟ್ ಹೊರ ಬರೋ ಸಾಧ್ಯತೆಗಳಿವೆ
 47. ಸುದೀಪ್​ ರೋಬೊ ಶಂಕರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ RC15 ಚಿತ್ರದಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ
 48. ಸುದೀಪ್​ ಅಭಿನಯದ ಮತ್ತೊಂದು ಬಹುನಿರೀಕಿತ ಸಿನಿಮಾ ‘ವಿಕ್ರಾಂತ್​ ರೋಣ’ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಟೀಸರ್​ ನೋಡಿರವರು ಇದು ಕನ್ನಡ ಸಿನಿಮಾನ ಹಾಲಿವುಡ್​ ಸಿನಿಮಾನ ಅಂತಾ ಫುಲ್​ ಕನ್​ಫ್ಯೂಸ್​ ಆಗಿದ್ದಾರೆ.
 49. ಸುದೀಪ್​ ಬರ್ತ್​ಡೇ ಪ್ರಯುಕ್ತ ಅವರ ಮಗಳು ಸಾನ್ವಿ ಸುದೀಪ್​ ಅಪ್ಪನ 10 ವಿಶೇಷ ಗುಣಗಳನ್ನು ಅವರು ಪಟ್ಟಿಮಾಡಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

Source: newsfirstlive.com Source link