ಲೆಜೆಂಡ್​ಗಳು ಹೇಳದೇ ಹೋಗಿಬಿಡ್ತಾರೆ: ಸಿದ್ದಾರ್ಥ್​ -ಸುಶಾಂತ್ ಸಾವಿನ ಬಗ್ಗೆ ಫ್ಯಾನ್ಸ್ ಹೇಳಿದ್ದಿದು..

ಲೆಜೆಂಡ್​ಗಳು ಹೇಳದೇ ಹೋಗಿಬಿಡ್ತಾರೆ: ಸಿದ್ದಾರ್ಥ್​ -ಸುಶಾಂತ್ ಸಾವಿನ ಬಗ್ಗೆ ಫ್ಯಾನ್ಸ್ ಹೇಳಿದ್ದಿದು..

ಬಾಲಿವುಡ್ ರಿಯಾಲಿಟಿ ಟಿವಿ ಸ್ಟಾರ್ ಸಿದ್ಧಾರ್ಥ್ ಶುಕ್ಲಾ(40) ಇಂದು ಸಾವನ್ನಪ್ಪಿದ್ದಾರೆ. ಶುಕ್ಲಾ ದಿಢೀರ್ ಸಾವಿಗೆ ಬಿ ಟೌನ್, ಟೆಲಿವಿಷನ್ ಇಂಡಸ್ಟ್ರಿ ಸಂತಾಪ ಸೂಚಿಸಿದೆ. ಈ ಮಧ್ಯೆ ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೂ ಸಿದ್ಧಾರ್ಥ್ ಶುಕ್ಲಾ ಸಾವಿಗೂ ಹೋಲಿಕೆ ಮಾಡಲಾಗ್ತಿದೆ.

ಸುಶಾಂತ್ ಸಿಂಗ್ ಸಾವಿನ ಸುದ್ದಿ ಕೂಡ ಬರಸಿಡಿಲಿನಂತೆ ಬಾಲಿವುಡ್​ಗೆ ಬಂದೆರಗಿತ್ತು. ಇಡೀ ಬಾಲಿವುಡ್ ಸುಶಾಂತ್ ಸಾವನ್ನು ನಂಬಲಾಗದೇ ಶಾಕ್​ಗೆ ಒಳಗಾಗಿತ್ತು. ಇದೀಗ ಸುಶಾಂತ್ ಸಿಂಗ್ ಜೊತೆಗೆ ಸಿದ್ಧಾರ್ಥ್ ಶುಕ್ಲಾ ತೆಗೆಸಿಕೊಂಡಿದ್ದ ಪೋಟೋ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳೂ ಈ ಇಬ್ಬರೂ ಸ್ಟಾರ್​ಗಳ ಸಾವನ್ನು ಹೋಲಿಕೆ ಮಾಡಿದ್ದಾರೆ.

ಸಿದ್ಧಾರ್ಥ್ ಸಿಂಗ್ ಅವರ ದಿಢೀರ್ ಸಾವು ಸುಶಾಂತ್ ಸಿಂಗ್ ಅವರ ಸಾವನ್ನು ನೆನಪು ಮಾಡುತ್ತಿದೆ. ಇಬ್ಬರೂ ಟ್ಯಾಲೆಂಟೆಡ್​ ನಟರು ಹದಿಹರೆಯದಲ್ಲೇ ಸಾವನ್ನಪ್ಪಿದರು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ತಿದ್ದಾರೆ. ಶುಭಾಂಕ್ ಮಿಶ್ರಾ ಎಂಬುವವರು ಇಬ್ಬರೂ ನಟರು ಜೊತೆಗಿರುವ ಫೋಟೋವನ್ನ ಹಂಚಿಕೊಂಡು ಲೆಜೆಂಡ್​ಗಳು ಹೇಳದೆಯೇ ಹೊರಟು ಹೋಗ್ತಾರೆ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link