ಅತೀವೇಗದ 23,000 ರನ್; ಸಚಿನ್​​ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಅತೀವೇಗದ 23,000 ರನ್; ಸಚಿನ್​​ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ 23,000 ರನ್​ಗಳನ್ನ ಅತೀ ವೇಗವಾಗಿ ಕಲೆಹಾಕಿದ ಖ್ಯಾತಿ ಈಗ ವಿರಾಟ್ ಕೊಹ್ಲಿ ಹೆಸರಿಗೆ ಸೇರಿಕೊಂಡಿದೆ. ಕೊಹ್ಲಿ ಕೇವಲ 490 ಇನ್ನಿಂಗ್ಸ್​ಗಳಲ್ಲಿ 23,000 ರನ್​ಗಳನ್ನ ಕಲೆಹಾಕಿದ್ದಾರೆ. ಸಚಿನ್ 23,000 ರನ್​ಗಳನ್ನ ಕಲೆಹಾಕಲು ಬರೋಬ್ಬರಿ 522 ಇನ್ನಿಂಗ್ಸ್​ಗಳನ್ನ ಆಡಿದ್ದರು.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಹಿಂದಿಕ್ಕಿದ ರೋಹಿತ್ ಶರ್ಮಾ​..!

ಅತೀ ವೇಗವಾಗಿ ರನ್​ ಕಲೆಹಾಕಿದ ಲಿಸ್ಟ್​ನಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್ 544 ಇನ್ನಿಂಗ್ಸ್​ ಆಡಿ 23,000 ರನ್ ಕೆಲ ಹಾಕಿದ್ರು. ಇನ್ನು ಮಾಜಿ ಸೌತ್ ಆಫ್ರಿಕನ್ ಆಲ್​ರೌಂಡರ್​ ಜಾಕ್ಸ್ ಕಾಲಿಸ್ 551 ಇನ್ನಿಂಗ್ಸ್​ಗಳಲ್ಲಿ 23,000 ರನ್ ಕಲೆ ಹಾಕಿದ್ರು.

blank

ಇನ್ನು 23,000 ಕ್ಕಿಂತ ಹೆಚ್ಚು ರನ್ ಗಳಿಸಿದವರಲ್ಲಿ ರಾಹುಲ್ ದ್ರಾವಿಡ್ ಕೂಡ ಇದ್ದಾರೆ. ರಾಹುಲ್ ದ್ರಾವಿಡ್ 576 ಇನ್ನಿಂಗ್ಸ್​ಗಳಲ್ಲಿ 23,000 ರನ್ ಗಳಿಸಿದ್ದರು. ಸದ್ಯ ಅತೀ ವೇಗವಾಗಿ ಅತೀ ಹೆಚ್ಚು ರನ್​ಗಳನ್ನ ಕಲೆಹಾಕಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 7 ನೇ ಸ್ಥಾನದಲ್ಲಿದ್ದಾರೆ.

ಆಲ್ ಫಾರ್ಮಾಟ್ಸ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಮತ್ತು ರಾಹುಲ್ ದ್ರಾವಿಡ್ ನಂತರದ ಸ್ಥಾನದಲ್ಲಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ 34,357 ರನ್ ಗಳಿಸಿದ್ರೆ ರಾಹುಲ್ ದ್ರಾವಿಡ್ 24,208 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 23,003 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಭಾರತ ಟೆಸ್ಟ್ ತಂಡಕ್ಕೆ ಕರ್ನಾಟಕ ವೇಗಿ ಪ್ರಸಿದ್ಧ್‌ ಕೃಷ್ಣ ಆಯ್ಕೆ

Source: newsfirstlive.com Source link