ಕೋಟಿಗೊಬ್ಬ-3 ರಿಲೀಸ್​ಗೆ ಪ್ಲಾನ್; ದಸರಾ ಹಬ್ಬದ ಮೇಲೆ ಕಣ್ಣಿಟ್ಟ ಚಿತ್ರತಂಡ

ಕೋಟಿಗೊಬ್ಬ-3 ರಿಲೀಸ್​ಗೆ ಪ್ಲಾನ್; ದಸರಾ ಹಬ್ಬದ ಮೇಲೆ ಕಣ್ಣಿಟ್ಟ ಚಿತ್ರತಂಡ

ಎಲ್ಲದಕ್ಕೂ ಟೈಮ್ ಬರಬೇಕು.. ಆದ್ರೆ ಕೋಟಿಗೊಬ್ಬ -3 ಸಿನಿಮಾ ರಿಲೀಸ್​ ಡೇಟ್​​ಗೆ ಮಾತ್ರ ಇನ್ನೂ ಟೈಮ್ ಬರ್ತಾನೆ ಇಲ್ಲ.. ಇವತ್ತು ಕಿಚ್ಚ ಸುದೀಪ್ ಅವ್ರ ಹ್ಯಾಪಿ ಹುಟ್ಟು ಹಬ್ಬ.. ಈ ಸವಿ ದಿನದಂದು ಅಭಿಮಾನಿಗಳಿಗೆ ಶುಭಸುದ್ದಿ ಕೊಟ್ಟಿದೆ ಕೋಟಿಗೊಬ್ಬ 3 ಸಿನಿಮಾ ತಂಡ.

2018 ಮಾರ್ಚ್ 2ನೇ ತಾರೀಖ್​​ನಿಂದ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಕುತೂಹಲದ ಕೋಟೆಯಲ್ಲಿ ಬೆಚ್ಚನೆ ಇರೋ ಸಿನಿಮಾ ಕೋಟಿಗೊಬ್ಬ 3.. ಜನರ ಮನ ಮುಟ್ಟಕ್ಕೆ ಏನ್ ಬೇಕೋ ಎಲ್ಲಾ ಕುತೂಹಲದ ಕಂಟೆಂಟ್​​ಗಳನ್ನ ಹೊರ ಬಿಟ್ಟು ಸದ್ದು ಮಾಡ್ತಿರೋ ಮೂರನೇ ಕೋಟಿಗೊಬ್ಬ ಯಾವಾಗ ರಿಲೀಸ್ ಅನ್ನೋದೆ ನಿರ್ಮಾಪಕರಿಗೂ ಗೊತ್ತಿರದ ಸಸ್ಪೆನ್ಸ್​​.

blank

ಇದನ್ನೂ ಓದಿ: ವಿಕ್ರಾಂತ್​ ರೋಣನ ಬಿರುಗಾಳಿಗೆ ಯೂಟ್ಯೂಬ್​ ಉಡೀಸ್; ಗಂಟೆಗೆ ಬರೀ 83 ವ್ಯೂ, 66 ಸಾವಿರ ಲೈಕ್

ಆ ಹಬ್ಬಕ್ಕೆ, ಈ ಹಬ್ಬಕ್ಕೆ , ಆ ದಿನಾಂಕಕ್ಕೆ ಮೂರನೇ ಕೋಟಿಗೊಬ್ಬ ರಿಲೀಸ್ ಆಗುತ್ತೆ ಅಂತ ಊಹಿಸಿದಿದ್ದೇ ಊಹಿಸಿದ್ದು.. ಆದ್ರೆ ಯಾವ ಊಹೆನೂ ಇವತ್ತಿಗೂ ನಿಜವಾಗಿಲ್ಲ.. ಓಟಿಟಿ ಮಾರುಕಟ್ಟೆಯಿಂದ ಕೋಟಿ ಕೋಟಿ ಆಫರ್ ಬಂದ್ರು ಕೋಟಿಗೊಬ್ಬ ಮಾತ್ರ ಜಗ್ಗಿಲ್ಲ ಬಗ್ಗಿಲ್ಲ.. ಏನೇ ಆಗ್ಲಿ ಥಿಯೇಟರ್​​​​ಗೆ ಬಂದು ಜನರನ್ನ ರಂಜಿಸಿ ಬೇಕು ಅನ್ನೋ ಗುರಿಯಲ್ಲಿರೋ ಕೆ-3 ತಂಡ ಈಗ ದಸರಾ ಹಬ್ಬದ ಮೇಲೆ ಕಣ್ಣಿಟ್ಟಿದೆ.

ಇದನ್ನೂ ಓದಿ: ಸುದೀಪ್​ ಮೇಲೆ ಕಣ್ಣಿಟ್ಟಿದ್ಯಾ ರಾಜಸ್ಥಾನ್ ರಾಯಲ್ಸ್..? RR ಟೀಮ್​ನಿಂದ ಸ್ಪೆಷಲ್ ಬರ್ತ್​ಡೇ ಗಿಫ್ಟ್..!

ಒಂದನೇ ಲಾಕ್ ಡೌನ್ , ಎರಡನೇ ಲಾಕ್ ಡೌನ್​ಗಳನೆಲ್ಲ ನೋಡಿರೋ ಸೂರಪ್ಪ ಬಾಬು ನಿರ್ಮಾಣದ ಕೆ-3 ಸಿನಿಮಾ ಈಗ 100 ಪರಸೆಂಟ್ ಸೀಟು ಬರ್ತಿಯ ಅವಕಾಶಕ್ಕೆ ಎದುರು ನೋಡ್ತಿದೆ.. ಲಕ್ಷ್ಮೀ ಪೂಜೆಗೂ 100 ಪರಸೆಂಟ್ ಆಗ್ಲಿಲ್ಲ, ಗಣಪತಿ ಹಬ್ಬಕ್ಕೂ 100 ಪರಸೆಂಟ್ ಸಿಗೋದಿಲ್ಲ.. ಇನ್ನೂ ಅಟ್​​ಲಿಸ್ಟ್ ದಸರಾ ಹಬ್ಬಕ್ಕಾದ್ರು ಸೀಟು ಪೂರ್ಣ ಭರ್ತಿಗೆ ಅವಕಾಶ ಸಿಗುತ್ತಾ ಅಂತ ಚಿತ್ರರಂಗ ಆಕಾಶ ನೋಡ್ತಿದೆ.. ಹಂಗೆ ಕೋಟಿಗೊಬ್ಬ 3 ಸಿನಿಮಾ ತಂಡ ಸಿನಿಮಾ ರಿಲೀಸ್​ಗೆ ಸೂಕ್ತ ಅವಕಾಶ ನೋಡ್ತಿದೆ.

ಒಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಚಿತ್ರರಂಗಕ್ಕೆ ಕಷ್ಟದ ದಿನ.. ಆದಷ್ಟು ಆ ವೈಭವದ ದಿನಗಳ ಬರ್ಲಿ ಅಂದಿನಂತೆ ಇಂದು ಕೂಡ ಥಿಯೇಟರ್​ ಗಳ ಮುಂದೆ ಸಿನಿಮಾಗಳ ಪ್ರೇಕ್ಷಕ ಜಾತ್ರೆ ಆಗಲಿ ಅನ್ನೋದು ಚಿತ್ರಪ್ರೇಮಿಗಳ ಆಶಯ.

ಇದನ್ನೂ ಓದಿ: 50ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ.. ಸುದೀಪ್​ಗೆ ಮರೆಯಲಾಗದ 50 ವಿಶೇಷ ಸಂಗತಿಗಳು..!

Source: newsfirstlive.com Source link