ಸಿದ್ಧಾರ್ಥ್​ ಶುಕ್ಲಾರಿಗೆ ಏನಾಯ್ತು..? ಪೊಲೀಸ್ರ ಪ್ರಥಮ ತನಿಖೆಯಿಂದ ಹೊರಬಂದ ವಿಚಾರವೇನು?

ಸಿದ್ಧಾರ್ಥ್​ ಶುಕ್ಲಾರಿಗೆ ಏನಾಯ್ತು..? ಪೊಲೀಸ್ರ ಪ್ರಥಮ ತನಿಖೆಯಿಂದ ಹೊರಬಂದ ವಿಚಾರವೇನು?

ಹಿಂದಿ ಕಿರುತೆರೆಯ ಜನಪ್ರಿಯ ನಟ, ಬಾಲಿವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದ ಬಿಗ್​ ಬಾಸ್​ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಸಿದ್ಧಾರ್ಥ್​ ಶುಕ್ಲಾ ನಿಧನ ಹೊಂದಿದ್ದಾರೆ ಅಂತ ಆಸ್ಪತ್ರೆವರು ತಿಇಸಿದ್ದಾರೆ. 40 ವರ್ಷದ, ಸಿದ್ಧಾರ್ಥ್​ಗೆ ಏನಾಯ್ತು ಅನ್ನೋದನ್ನ ಪೊಲೀಸ್ರ ಪ್ರಥಮ ವಿಚಾರಣೆಯಲ್ಲಿ ಒಂದಷ್ಟು ಮಾಹಿತಿ ಸಿಕ್ಕಿದೆ.

ಬೆಳಗ್ಗೆ, ಶುಕ್ಲಾ ಸಾವನ್ನಪ್ಪಿದಾಗ, ಸಿದ್ಧಾರ್ಥ್​ರ ಬಾಡಿಯನ್ನ ಕೂಪರ್​ ಹಾಸ್ಪಿಟಲ್​ಗೆ ಕರೆದುಕೊಂಡು ಹೋಗಿದ್ದು, ಸಿದ್ಧಾರ್ಥ್​ ಅಕ್ಕ ಹಾಗೂ ಅವರ ಪತಿ. ಆಸ್ಪತ್ರೆಯಲ್ಲಿ ಪೊಲೀಸ್ರಿಗೆ ಇಬ್ಬರೂ ಒಂದಷ್ಟು ಮಾಹಿತಿಯನ್ನ ನೀಡಿದ್ದಾರೆ.

ನಸುಕಿನ ಜಾವ 3 ಗಂಟೆ ಸುಮಾರು: ನಸುಕಿನ ಜಾವ ಮೂರು ಗಂಟೆ ಸುಮಾರಿಗೆ, ಸಿದ್ಧಾರ್ಥ್​ಗೆ ಸ್ವಲ್ಪ ಇರಿಸು ಮುರಿಸು ಆಗಿತ್ತು. ಈ ವೇಳೆ, ಸಿದ್ಧಾರ್ಥ್​ ಹೋಗಿ, ತನ್ನ ಅಮ್ಮನ ಬಳಿ ಹೇಳಿದ್ದಾರೆ.  ಆಗ, ಅವ್ರ ಅಮ್ಮ, ಸ್ವಲ್ಪ ತಣ್ಣೀರು, ಕುಡಿದು ರೆಸ್ಟ್​ ಮಾಡೋದಕ್ಕೆ ಹೇಳಿದ್ದಾರೆ. 

ಗುರುವಾರ ಬೆಳಗ್ಗೆ: ಬೆಳಗ್ಗೆ, ಸಿದ್ಧಾರ್ಥ್​ ಎದ್ದ ತಕ್ಷಣ ಶುಕ್ಲಾರನ್ನ ಎಬ್ಬಿಸೋದಕ್ಕೆ ಹೋಗಿದ್ದಾರೆ.ಎಬ್ಬಿಸಿದಾಗ, ಸಿದ್ಧಾರ್ಥ್​ ಎದ್ದಿಲ್ಲ, ಅನ್​ಕಾನ್ಶಿಯಸ್​ ಆಗಿದ್ದಾರೆ ಅಂದುಕೊಂಡು, ತಾಯಿ ವೈದ್ಯರಿಗೆ ಕರೆ ಮಾಡಿದ್ದಾರೆ. ವೈದ್ಯರು, ಬಂದು ನೋಡುವಷ್ಟರಲ್ಲಿ ಸಿದ್ಧಾರ್ಥ್​ ಸಾವನ್ನಪ್ಪಿದ್ರು.  

ಬೆಳಗ್ಗೆ 9.40ರ ಸುಮಾರು: ಸಿದ್ಧಾರ್ಥ್​ ಶುಕ್ಲಾರ ಬಾಡಿಯನ್ನ, ಅವರ ಅಕ್ಕ, ಬಾವ, ಕಸಿನ್​ ಅಣ್ಣ ಹಾಗೂ ಮೂರು ಸ್ನೇಹಿತರು ಌಂಬುಲೆನ್ಸ್​ ಮೂಲಕ ಕೂಪರ್​ ಆಸ್ಪತ್ರೆಗೆ ಕರೆದುಕೊಂಡು ಬಂದ್ರು.

ಬೆಳಗ್ಗೆ 10.30:  ಕೂಪರ್​ ಆಸ್ಪತ್ರೆ ಕೂಡ ಸಿದ್ಧಾರ್ಥ್​ ಸಾವನ್ನಪ್ಪಿದ್ದಾರೆ ಅನ್ನೋದನ್ನ ಕನಫರ್ಮ್​ ಮಾಡಿತ್ತು. ನಂತರ, ಎಲ್ಲಾ ಟೆಸ್ಟ್​ಗಳನ್ನ ಮಾಡಿದಾಗ, ಮೈ ಮೇಲೆ ಎಲ್ಲೂ ಗಾಯಗಳು ಕಂಡಿರದ ಕಾರಣ ಹಾರ್ಟ್​ ಅಟ್ಯಾಕ್​ ಆಗಿದೆ ಅನ್ನೋದನ್ನ ಆಸ್ಪತ್ರೆಯರು ಮಾಹಿತಿ ನೀಡಿದ್ರು. 

ಮಧ್ಯಾಹ್ನ 3.45 ಸುಮಾರು : ಬಾಡಿಯನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. 7 ಗಂಟೆಯವರೆಗೂ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. 

7 ಗಂಟೆಯ ನಂತರ: ರಾಥ್ರಿ 7 ಗಂಟೆಯ ನಂತರ, ಸಿದ್ಧಾರ್ಥ್​ ಶುಕ್ಲಾರ ಬಾಡಿಯನ್ನ ಓಶಿವಾರದಲ್ಲಿರೋ ತಮ್ಮ ನಿವಾಸಕ್ಕೆ ಅಂತ್ಯಕ್ರಿಯಗೆ ಕರೆದುಕೊಂಡು ಹೋಗಲಾಗುವುದು ಅನ್ನೋ ಮಾಹಿತಿ ಲಭ್ಯವಾಗಿದೆ. 

ಸಿದ್ಧಾರ್ಥ್​ ಪಿಆರ್​ ಟೀಂನಿಂದ ಸ್ಟೇಟ್​ಮೆಂಟ್​ ರಿಲೀಸ್​ 

  ‘‘ನೀವೆಲ್ಲರೂ ಆಘಾತಕಾರಿ ಸುದ್ದಿಯನ್ನು ಕೇಳಿದ್ದೀರಿ, ನಿಮ್ಮೆಲ್ಲರಂತೆ ನಾವು ಆಘಾತಕ್ಕೊಳಗಾಗಿದ್ದೇವೆ. ನಮಗೆ ಒಂದು ವಿನಂತಿಯಿದೆ, ಈ ಕಷ್ಟದ ಸಮಯದಲ್ಲಿ ನೀವೆಲ್ಲರೂ ಎಲ್ಲವನ್ನ, ಗೌರವಿಸಿ ಮತ್ತು ನಮ್ಮೊಂದಿಗೆ ನೀವೆಲ್ಲರೂ ನಿಲ್ಲಬೇಕೆಂದು ನಾವು ನಿಜವಾಗಿಯೂ ಬಯಸುತ್ತೇವೆ. ಸಿದ್ಧಾರ್ಥ್ ಅವರ PR ತಂಡವಾಗಿ ನಾವು ವಿನಮ್ರವಾಗಿ ವಿನಂತಿಸುತ್ತೇವೆ.’’ ಅಂತ ಒಂದು ಸ್ಟೇಟ್​ಮೆಂಟ್​ನ್ನ ರಿಲೀಸ್​ ಮಾಡಿದೆ.

 

Source: newsfirstlive.com Source link