ತಾಲಿಬಾನಿ ಲೀಡರ್​ಗಳಿಗೆ ಆಶ್ರಯ ನೀಡಿದ್ದು ನಾವೇ- ಸತ್ಯ ಬಿಚ್ಚಿಟ್ಟ ಪಾಕ್ ಸಚಿವ

ತಾಲಿಬಾನಿ ಲೀಡರ್​ಗಳಿಗೆ ಆಶ್ರಯ ನೀಡಿದ್ದು ನಾವೇ- ಸತ್ಯ ಬಿಚ್ಚಿಟ್ಟ ಪಾಕ್ ಸಚಿವ

ಲಾಹೋರ್: ಅಫ್ಘಾನಿಸ್ತಾನವನ್ನ ಸದ್ಯ ವಶಪಡಿಸಿಕೊಂಡಿರುವ ತಾಲಿಬಾನಿಗಳಿಗೆ ಆಶ್ರಯ ನೀಡಿದ್ದು ನಾವೇ ಎಂದು ಪಾಕಿಸ್ತಾನ ಸಚಿವ ಶೇಖ್ ರಶೀದ್ ಹೇಳಿಕೆ ನೀಡಿದ್ದಾರೆ.

ಟಿ ವಿ ಶೋ ಒಂದರಲ್ಲಿ ಈ ಕುರಿತು ಹೇಳಿಕೆ ನೀಡಿರುವ ಶೇಖ್ ರಶೀದ್ ಇಮ್ರಾನ್​ ಖಾನ್ ನೇತೃತ್ವದ ಸರ್ಕಾರವೇ ತಾಲಿಬಾನಿ ನಾಯಕರಿಗೆ ಆಶ್ರಯ ನೀಡಿದೆ. ಇನ್ನು ತಾಲಿಬಾನಿಗಳು ಪಾಕಿಸ್ತಾನ ನಮ್ಮ ಎರಡನೇ ಮನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ತಾಲಿಬಾನ್ ಲೀಡರ್​ಗಳಿಗೆ ಆಶ್ರಯ ನೀಡಿದ್ದು ನಾವೇ.. ಸುದೀರ್ಘ ಕಾಲದವರೆಗೆ ನಾವು ಅವರಿಗೆ ಆಶ್ರಯ ನೀಡಿದ್ದೇವೆ. ಅವರಿಗೆ ಶೆಲ್ಟರ್, ವಿದ್ಯೆ, ಮನೆಯನ್ನೂ ಪಾಕಿಸ್ತಾನದಲ್ಲಿ ನೀಡಿದ್ದೇವೆ. ನಾವು ಅವರಿಗಾಗಿ ಎಲ್ಲವನ್ನೂ ಮಾಡಿದ್ದೇವೆ. ತಾಲಿಬಾನ್ ಲೀಡರ್​ಗಳು ಹುಟ್ಟಿದ್ದು ಪಾಕ್​ನಲ್ಲೇ.. ಅವರು ಟ್ರೈನಿಂಗ್ ಪಡೆದದ್ದೂ ಪಾಕ್​ನಲ್ಲೇ ಎಂದಿದ್ದಾರೆ.

ಅಮೆರಿಕನ್ ಸೇನೆ ವಾಪಸ್ಸಾಗುತ್ತಲೇ ತಾಲಿಬಾನಿಗಳು ಪ್ರತ್ಯಕ್ಷ

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್ಸಾಗುವವರೆಗೂ ಇಡೀ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು, ತಾಲಿಬಾನಿ ಲೀಡರ್​ಗಳ ಸುಳಿವೇ ಇರಲಿಲ್ಲ. ಅಮೆರಿಕ ಸೇನೆ ವಾಪಸ್ಸಾಗುತ್ತಿದ್ದಂತೆಯೇ ತಾಲಿಬಾನಿಗಳು ಯುದ್ಧೋಪಾದಿಯಲ್ಲಿ ಅಫ್ಘಾನಿಸ್ತಾನದ ಒಂದೊಂದೇ ಪ್ರಾಂತ್ಯವನ್ನ ವಶಪಡಿಸಿಕೊಳ್ಳುತ್ತಾ ಕೊನೆಗೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನ್ನು ವಶಪಡಿಸಿಕೊಂಡರು. ಈ ಮಧ್ಯೆ ಇಲ್ಲಿಯವರೆಗೆ ತಾಲಿಬಾನಿಗಳು ಎಲ್ಲಿ ಅಡಗಿದ್ದರೆಂಬ ಕುತೂಹಲ ಹಾಗೆಯೇ ಉಳಿದಿತ್ತು. ಕೆಲವರು ಪಾಕಿಸ್ತಾನ ತಾಲಿಬಾನಿಗಳಿಗೆ, ಅವರ ಲೀಡರ್​ಗಳಿಗೆ ಆಶ್ರಯ ನೀಡಿತ್ತು ಎಂದು ಹೇಳಿದ್ದರು. ಇದೀಗ ಪಾಕ್ ಸಚಿವ ತಮ್ಮ ಸರ್ಕಾರವೇ ತಾಲಿಬಾನಿಗಳಿಗೆ ಆಶ್ರಯ ನೀಡಿತ್ತು ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.

Source: newsfirstlive.com Source link