ತಾವೇ ಮಾಸ್ಕ್​ ಧರಿಸಿದಿದ್ದರೂ, ಮಾಸ್ಕ್​ ಧರಿಸಿಲ್ಲ ಅಂತ ವೀರ ಯೋಧನನ್ನೇ ಥಳಿಸಿದ ಪೊಲೀಸರು

ತಾವೇ ಮಾಸ್ಕ್​ ಧರಿಸಿದಿದ್ದರೂ, ಮಾಸ್ಕ್​ ಧರಿಸಿಲ್ಲ ಅಂತ ವೀರ ಯೋಧನನ್ನೇ ಥಳಿಸಿದ ಪೊಲೀಸರು

ಜಾರ್ಖಂಡ್: ಕೊರೊನಾ ಕೊರೊನಾ ಕೊರೊನಾ…ಈ ಒಂದು ಪದ, ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಎಲ್ಲಾದ್ರು ಹೊರಗಡೆ ಹೋಗ್ತಾಯಿದಿವೀ ಅಂದ್ರೆ ಮಾಸ್ಕ್​ ಹಾಕಿಕೊಂಡು ಹೋಗೋದು ಈಗ ಅಭ್ಯಾಸ ಆಗೋಗಿದೆ.ಈಗ, ದೇಶದ ಸೈನಿಕರೊಬ್ಬರು ಮಾಸ್ಕ್​ ಧರಿಸಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಪೊಲೀಸ್ರು ಥಳಿಸಿದ್ದಾರೆ.

ಜಾರ್ಖಂಡ್​ನ ಛತ್ರಾ ಜಿಲ್ಲೆಯಲ್ಲಿ, ಮೂರು ಜನ ಪೊಲೀಸ್ರು ಮಾಸ್ಕ್​ ಯಾರ್​ ಯಾರ್​ ಹಾಕಿದ್ದಾರೆ ಅನ್ನೋದನ್ನ ಚೆಕ್​ ಮಾಡ್ತಾಯಿದ್ರು. ಈ ವೇಳೆ,ದೇಶದ ಜವಾನ್​ ಯಾದವ್​, ಮಾಸ್ಕ್​ ಹಾಕದೇಯಿದ್ದಿದ್ದು ಕಾಣಿಸಿದಾಗ, ಪೊಲೀಸ್ರು ಯಾಕೆ ಹಾಕಿಲ್ಲ ಅಂತ ಕೇಳಿದ್ದಾರೆ. ಅಲ್ಲದೇ, ಗಾಡಿ ಕೀಯನ್ನ ಕಿತ್ತಿಕೊಂಡು ವಾದಕ್ಕಿಳಿದಿದ್ದಾರೆ.ಈ ವೇಳೆ, ಮೂವರು ಪೊಲೀಸ್ರು ಯಾದವ್​ಗೆ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವೈರಲ್​ ಆಗ್ತಿದ್ದ ಹಾಗೆ, ಥಳಿಸಿದ್ದ ಮೂವರು ಪೊಲೀಸ್ರನ್ನ ಅಮಾನತ್ತು ಮಾಡಿದ್ದಾರೆ.

 

Source: newsfirstlive.com Source link