ಅಮಿತ್ ಶಾ ಭೇಟಿಯಾದ ‘ಆನಂದ’ದಲ್ಲಿ ಸಿಂಗ್; ಖಾತೆ ನೋವು ಶಮನ..?

ಅಮಿತ್ ಶಾ ಭೇಟಿಯಾದ ‘ಆನಂದ’ದಲ್ಲಿ ಸಿಂಗ್; ಖಾತೆ ನೋವು ಶಮನ..?

ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರನ್ನ ಇಂದು ಸಚಿವ ಆನಂದ್ ಸಿಂಗ್​ ಅವರು ಭೇಟಿಯಾಗಿದ್ದಾರೆ. ಆನಂದ್​ ಸಿಂಗ್, ಅಮಿತ್​ ಶಾರನ್ನ ಭೇಟಿ ಮಾಡಿರೋದು ಹಲವು ಚರ್ಚೆಗೆ ಕಾರಣವಾಗಿದೆ.

blank

ದಾವಣಗೆರೆಯಲ್ಲಿ ಜಿಎಂ ಐಟಿ ಸೆಂಟ್ರಲ್ ಲೈಬ್ರರಿ, ಪೊಲೀಸ್ ಪಬ್ಲಿಕ್ ಸ್ಕೂಲ್, ಗಾಂಧಿ ಭವನ ಉದ್ಘಾಟಿಸಲು ಕೇಂದ್ರ ಸಚಿವರು ಬಂದಿದ್ದರು. ಈ ಕಾರ್ಯಕ್ರಮದ ವೇಳೆ ಅಮಿತ್​ ಶಾ ಅವರನ್ನ ಆನಂದ್ ಸಿಂಗ್ ಭೇಟಿಯಾಗಿದ್ದಾರೆ. ಮಾತ್ರವಲ್ಲ ಕಾರ್ಯಕ್ರಮದ ಉದ್ದಕ್ಕೂ ಅಮಿತ್ ಶಾ ಜೊತೆ ಆನಂದ್ ಸಿಂಗ್ ಓಡಾಡಿದ್ದಾರೆ.

blank

ಆನಂದ್​ ಸಿಂಗ್ ಖಾತೆ ವಿಚಾರಕ್ಕೆ ಅಸಮಾಧಾನಗೊಂಡಿದ್ದಾರೆ. ತಮಗೆ ಪ್ರಬಲ ಖಾತೆಯನ್ನ ನೀಡಿಲ್ಲ ಅಂತಾ ಆನಂದ್​​ ಸಿಂಗ್​​ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಗಾಗಲೇ ಹಲವು ಬಾರಿ ರಾಜೀನಾಮೆ ನೀಡುತ್ತೇನೆ ಅಂತಾ ಪರೋಕ್ಷವಾಗಿ ಸಿಎಂ ಬೊಮ್ಮಾಯಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಮಾತ್ರವಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಖಾತೆ ಸಂಬಂಧ ಹಲವು ಸುತ್ತಿನ ಮಾತುಕತೆ ಕೂಡ ನಡೆದಿದೆ.

blank

ಹೀಗಿದ್ದೂ ಆನಂದ್​ ಸಿಂಗ್ ಖಾತೆ ವಿಚಾರದಲ್ಲಿ ಮುನಿಸಿಕೊಂಡಿದ್ದಾರೆ ಅಂತಾ ಹೇಳಲಾಗಿದೆ. ಇದರ ಮಧ್ಯೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಸಮ್ಮುಖದಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದಾರೆ. ಇನ್ನಾದರೂ ಆನಂದ್​ ಸಿಂಗ್​ರ ಮುನಿಸು ಶಮನವಾಗುತ್ತಾ ಅನ್ನೋ ಪ್ರಶ್ನೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

Source: newsfirstlive.com Source link