‘ಜೋಗಿ ಸಿನಿಮಾ ನೋಡಿ ಅಣ್ಣವ್ರು ನನಗೆ ಒಂದು ಮಾತ್ ಹೇಳಿದ್ರು’

‘ಜೋಗಿ ಸಿನಿಮಾ ನೋಡಿ ಅಣ್ಣವ್ರು ನನಗೆ ಒಂದು ಮಾತ್ ಹೇಳಿದ್ರು’

ಡಾ.ರಾಜ್​ಕುಮಾರ್ ಹಾಗೂ ರಜನಿಕಾಂತ್ ಜೋಗಿ ಸಿನಿಮಾವನ್ನ ಪಿವಿಆರ್​ನಲ್ಲಿ ಒಟ್ಟಿಗೆ ಕೂತು ನೋಡಿದ್ದಾರೆ. ಈ ವಿಚಾರ ಕೇಳಿ ನನಗೆ ತುಂಬಾ ಖುಷಿ ಆಯ್ತು ಅಂತಾ ಖ್ಯಾತ ಸಂಭಾಷಣೆಕಾರ ಹಾಗೂ ಜೋಗಿ ಸಿನಿಮಾದ ಡೈಲಾಗ್ ರೈಟರ್​ ಮಲವಳ್ಳಿ ಶ್ರೀಕೃಷ್ಣ ಆ ದಿನಗಳನ್ನ ನ್ಯೂಸ್​ಫಸ್ಟ್ ಜೊತೆ ನೆನಪಿಸಿಕೊಂಡಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಜೋಗಿ ಸಿನಿಮಾ ಬಗ್ಗೆ ಮಾತನಾಡಿದ ಅವರು.. ಜೋಗಿ ಸಿನಿಮಾ ಸ್ಕ್ರಿಪ್ಟ್​ ಮಾಡುವಾಗ ನನಗೆ ಭಯ ಆಯಿತು. ಆದರೆ ಶಿವಣ್ಣ ಅವರೇ ನನಗೆ ತುಂಬಾ ಧೈರ್ಯ ತುಂಬಿದರು ಅಂತಾ ಹೇಳಿದರು. ಬಳಿಕ ಜೋಗಿ ಸಿನಿಮಾ ಸಕ್ಸಸ್​ ಬೆನ್ನಲ್ಲೇ ವರನಟ ರಾಜ್​ಕುಮಾರ್​ ಮನೆಗೆ ಭೇಟಿ ನೀಡಿರುವ ದಿನವನ್ನ ನೆನಪಿಸಿಕೊಂಡ ಅವರು, ಸಂಜೆ ಚಂದ್ರು ಅನ್ನೋರು ಕಾಲ್ ಮಾಡಿದರು. ಸೀದಾ ನೀವು ರಾಜ್​ಕುಮಾರ್ ಮನೆಗೆ ಬರಬೇಕು. ರಜನಿಕಾಂತ್, ಅಣ್ಣವ್ರು ಸಿಗಲಿದ್ದಾರೆ ಅಂತಾ ಹೇಳಿದ್ರು.

ಆದರೆ ನಾನು ಹೋಗುವಷ್ಟರಲ್ಲಿ ಲೇಟ್​ ಆಗಿತ್ತು. ನಾನು ಭೇಟಿ ನೀಡುತ್ತಿದ್ದಂತೆ ರಜನಿಕಾಂತ್ ಅವರ ಮನೆಯಿಂದ ಹೊರಟು ಹೋದರು. ಕೊನೆಗೆ ನಾನು ಅಣ್ಣಾವ್ರನ್ನ ನೋಡಲು ಹೋದೆ. ಈ ವೇಳೆ ಅಣ್ಣಾವ್ರನ್ನ ಪಾರ್ವತಮ್ಮ ನನ್ನ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದಂತೆ ನಾನು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡೆ..

ಈ ವೇಳೆ ಅಣ್ಣವ್ರು ನನಗೆ ಒಂದು ಮಾತು ಹೇಳಿದರು.. ನೋಡಯ್ಯ ಸಕ್ಸಸ್​ ಆಗಲಿ, ಫ್ಲಾಪ್ ಆಗಲಿ ಎರಡನ್ನೂ ತಲೆಗೆ ಹತ್ತಿಸಿಕೊಳ್ಳಬಾರದು, ಕಾಲ ಕೆಳಗಡೆನೇ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಅವರು ಅಂದು ನನಗೆ ಯಾಕೆ ಹಂಗೆ ಹೇಳಿದರು ಅಂತ ಅರ್ಥ ಆಗಲಿಲ್ಲ. ಇಂದು ಅವರು ಹೇಳಿರುವ ಮಾತಿನ ಅರ್ಥ ಗೊತ್ತಾಗುತ್ತಿದೆ. ಅವರ ಈ ಮಾತು ನನಗೆ ಮಹಾಭಾರತ ಮತ್ತು ರಾಮಾಯಣದ ವಾಕ್ಯಗಳಿಗಿಂತ ದೊಡ್ಡದಾಗಿ ಇವತ್ತಿಗೂ ಕಾಣಿಸುತ್ತಿದೆ ಅಂತಾ ಹೇಳಿದರು.

Source: newsfirstlive.com Source link