ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

ಮುಂಬೈ: ಬಾಲಿವುಡ್, ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಷ್ಟು ಫಿಟ್, ವರ್ಕೌಟ್ ಮಾಡಿಕೊಂಡಿದ್ದ ಸಿದ್ಧಾರ್ಥ್ ಶುಕ್ಲಾಗೆ ಹೃದಯಾಘಾತ ಆಗಿದ್ದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಸಿದ್ಧಾರ್ಥ್ ಸಾವಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯದ ವರದಿಗಳ ಪ್ರಕಾರ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಹೃದಯಾಘಾತಕ್ಕೆ ಕಾರಣವೇನು?:
ಸೆಲೆಬ್ರಿಟಿಗಳು ಫಿಟ್ ಆಗಿ ಕಾಣಲು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹೆಚ್ಚು ವರ್ಕೌಟ್ ಮಾಡೋದರಿಂದ ವ್ಯಕ್ತಿಯ ಎನರ್ಜಿ ನಿರಂತರವಾಗಿ ನಷ್ಟವಾಗಿರುತ್ತದೆ. ಯಾವುದೇ ವರ್ಕೌಟ್ ಗಳು ನಿಯಮಿತವಾಗಿರಬೇಕು ಅನ್ನೋದನ್ನು ಮರೆಯುತ್ತಾರೆ. ಇನ್ನು ಶುಕ್ಲಾ ಆಪ್ತರ ಪ್ರಕಾರ, ನಟ ಕಡಿಮೆ ನಿದ್ದೆ ಮಾಡುತ್ತಿದ್ದರು ಎಂದು ಹೇಳುತ್ತಾರೆ. ಇದು ತುಂಬಾನೇ ಅಪಾಯಕಾರಿ ಎಂಬುವುದು ಕೆಲ ವೈದ್ಯರ ಅಭಿಪ್ರಾಯ.

ಬ್ಯುಸಿ ಲೈಫ್ ನಲ್ಲಿ ಕೆಲವರು ಮಾದಕ ವಸ್ತುಗಳಿಗೆ ದಾಸರಾಗುತ್ತಾರೆ. ಕೆಲ ಕ್ಷಣದ ನೆಮ್ಮದಿ ಅಥವಾ ನಿದ್ದೆಗಾಗಿ ಡ್ರಗ್ಸ್ ನಂತಹ ಉತ್ಪನ್ನಗಳ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ವರ್ಕೌಟ್ ಮಾಡುತ್ತಿದ್ರೂ ಇಂತಹ ಅಭ್ಯಾಸಗಳು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಹಲವು ಪ್ರಕರಣಗಳಲ್ಲಿ ಕಂಡು ಬಂದಿದೆ. 30 ವರ್ಷದ ಆಸುಪಾಸಿನ ಯುವ ಜನತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಕೆಲವೊಮ್ಮೆ ಅನುವಂಶಿಕ ರೋಗ ಲಕ್ಷಣಗಳು ಕಂಡು ಬಂದ್ರೆ ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಲು ಸಹಾಯವಾಗುತ್ತದೆ. ಆದ್ರೆ ಶುಕ್ಲಾ ನಿಧನ ನಿಖರವಾಗಿ ಇದೇ ಕಾರಣಕ್ಕೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಮರಣೋತ್ತರ ಶವ ಪರೀಕ್ಷೆ ವರದಿ ಪ್ರಕಾರ ಸಾವಿನ ಕಾರಣಗಳನ್ನು ಅಂದಾಜಿಸಬಹುದು ಎಂದು ಏಮ್ಸ್ ಹಿರಿಯ ವೈದ್ಯ ನರೇಶ್ ರೋಹನ್ ಹೇಳುತ್ತಾರೆ. ಇದನ್ನೂ ಓದಿ: ಬೇಗ ಪಯಣ ಮುಗಿಸಿದೆ – ಸಿದ್ಧಾರ್ಥ್ ನಿಧನಕ್ಕೆ ಸಲ್ಮಾನ್ ಕಂಬನಿ

Source: publictv.in Source link