ಅಪರೂಪಕ್ಕೆ ಬಲೆಗೆ ಬಿತ್ತು ಬೃಹತ್ ಗಾತ್ರದ ಮೀನು; ಕೃಷ್ಣ ನದಿಯಲ್ಲಿ ಹೆಚ್ಚಾಯ್ತು ಮೀನುಗಳ ಬೇಟೆ

ಅಪರೂಪಕ್ಕೆ ಬಲೆಗೆ ಬಿತ್ತು ಬೃಹತ್ ಗಾತ್ರದ ಮೀನು; ಕೃಷ್ಣ ನದಿಯಲ್ಲಿ ಹೆಚ್ಚಾಯ್ತು ಮೀನುಗಳ ಬೇಟೆ

ಚಿಕ್ಕೋಡಿ: ಕೃಷ್ಣ ನದಿಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಸ್ಥಳೀಯರು ಮೀನುಗಾರಿಕೆ ಶುರುಮಾಡಿದ್ದಾರೆ.

ಅದರಂತೆ ಬರೋಬ್ಬರಿ 12 ಕೆಜಿ ತೂಕದ ಮೀನೊಂದು ಬಲೆಗೆ ಸಿಕ್ಕಿಬಿದ್ದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು-ಕಲ್ಲೋಳ ಸೇತುವೆ ಬಳಿ ಮೀನು ಸಿಕ್ಕಿಬಿದ್ದಿದೆ. ಬೋರಗಾಂವ ಪಟ್ಟಣದ ಹೈದರ ಎಂಬುವರಿಗೆ ಈ‌ ಮೀನು ಸಿಕ್ಕಿದ್ದು, ಇಷ್ಟೊಂದು ದೊಡ್ಡ ಗಾತ್ರದ ಮೀನು ಸಿಕ್ಕಿರುವುದಕ್ಕೆ ಹವ್ಯಾಸಿ ಮೀನಗಾರ ಹೈದರ ಸಂತಸ ವ್ಯಕ್ತಪಡಿಸಿದ್ದಾರೆ.

blank

ಕೃಷ್ಣಾ ನದಿ ಸದ್ಯ ಮೀನುಗಾರರ ತಾಣವಾಗಿದೆ. ಕೃಷ್ಣಾ‌ ನದಿಯಲ್ಲಿ ಸದ್ಯ ಬೃಹದಾಕಾರದ ಮೀನುಗಳು ಸಿಗುತ್ತಿರುವ ಕಾರಣ ನದಿ ತೀರದಲ್ಲಿ ಜನ ಮೀನು ಹಿಡಿಯಲು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ.

Source: newsfirstlive.com Source link