ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರಕ್ಕೆ ತತ್ತರಿಸಿದ ಜನತೆ

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರಕ್ಕೆ ತತ್ತರಿಸಿದ ಜನತೆ

ಬೆಂಗಳೂರು: ರಾತ್ರಿ ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಅಂತ ಸುರಿದ ಭಾರೀ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ರೆ, ಓಕುಳಿಪುರಂ ಪ್ಲೈ ಓವರ್ ಅಂಡರ್ ಪಾಸ್ ಹೊಳೆಯಂತಾಗಿತ್ತು. ಅಲ್ಲಲ್ಲಿ ರಸ್ತೆಗಳ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದ್ರು.

ಹೊಳೆಯಂತಾದ ಓಕುಳಿ ಪುರಂ ಪ್ಲೈ ಓವರ್ ನ ಅಂಡರ್ ಬ್ರಿಡ್ಜ್‌‌‌..!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ. ಸತತ ನಾಲ್ಕು ಗಂಟೆ ಸುರಿದ ಮಳೆಗೆ ಐಟಿ ಸಿಟಿಯ ಕೆಲ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ಶಾಂತಿನಗರ ಕಾರ್ಪೋರೇಷನ್, ಕೆ ಅರ್ ಸರ್ಕಲ್, ಸದಾಶಿವನಗರ, ಸ್ಯಾಂಕಿ ರಸ್ತೆ, ಮೆಜೆಸ್ಟಿಕ್, ಯಶವಂತಪುರ, ರೇಸ್ ಕೋರ್ಸ್ ರಸ್ತೆ, ಎಂಜಿ ರೋಡ್ ನಲ್ಲಿ ಭಾರಿ ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ರು.

blank

ಇನ್ನೂ ಮಳೆಯಿಂದಾಗಿ ಓಕುಳಿಪುರಂ ಪ್ಲೈ ಓವರ್​​​ನ ಅಂಡರ್ ಪಾಸ್ ಹೊಳೆಯಂತಾಗಿತ್ತು. ವಾಹನ ಸವಾರರು ವಾಹನ ಚಲಾಯಿಸಲಾಗದೆ ಬದಲಿ ಮಾರ್ಗದಲ್ಲಿ ಸಂಚರಿಸಿದ್ರೂ.‌ ಕೆಲವರು ಧೈರ್ಯಮಾಡಿ ಬೈಕ್ ಮತ್ತು ಆಟೋವನ್ನ ಅಷ್ಟು ನೀರಿನೊಳಗೆ ಇಳಿಸಿ ದಾಟಿಸಿದ್ರು. ಇನ್ನೂ ಕೆಲ ಬೈಕ್, ಆಟೋ, ಮತ್ತು ಕಾರಿನ ಸೈಲೆನ್ಸರ್ ಒಳಗೆ ನೀರು ಹೋದ ಪರಿಣಾಮ ನಿಂತು ಹೋದ ವಾಹನಗಳನ್ನು ನೀರಿನಿಂದ ತಳ್ಳಿ ಹೊರತರುವ ದೃಷ್ಯ ನಗರದ ವಿವಿಧೆಡೆ ಸಾಮಾನ್ಯವಾಗಿತ್ತು.

blank

ಇನ್ನೂ ಸ್ಮಾರ್ಟ್ ಕಾಮಾಗಾರಿಯಿಂದಾಗಿ ವಾಹನ ಸವಾರರು ಪರದಾಡುವಂತಾಯ್ತೂ. ಶಿವಾನಂದ ಸರ್ಕಲ್ ನಲ್ಲಿ ಸ್ಟೀಲ್ ಬ್ರೀಡ್ಜ್ ಕಾಮಾಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಮಲ್ಲೇಶ್ವರಂನ ಮಂತ್ರಿ ಮಾಲ್ ಮುಂಭಾಗ ರಸ್ತೆ ಮೇಲೆ ನೀರು ನಿಂತು ಕೆರೆಯಂತಾಗಿತ್ತು. ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ವಾಹನನ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಿದ್ರು. ಸ್ಮಾರ್ಟ್ ಸಿಟಿ ಕಾಮಾಗಾರಿ ನಡೆಯುತ್ತಿರುವ ನಗರದ ಬಹುತೇಕ ಕಡೆಗಳಲ್ಲಿ ಇದೆ ಸಮಸ್ಯೆ ಉಂಟಾಗಿತ್ತು.

ಒಟ್ಟಿನಲ್ಲಿ ದಿಢೀರ್ ಅಂತ ರಾತ್ರಿ ಸಮಯದಲ್ಲಿ ಸುರಿದ ಭಾರೀ ಮಳೆಗೆ ಕೆಲಕಾಲ ವಾಹನ ಸವಾರರು ಪರದಾಡಿದ್ರು. ನೈಟ್ ಕರ್ಫ್ಯೂ ಇದ್ದಿದ್ರಿಂದ ವಾಹನ ಸಂಚಾರ ವಿರಳವಾಗಿತ್ತು. ಹೀಗಾಗಿ ಅಷ್ಟಾಗಿ ವರುಣ ಸಮಸ್ಯೆಗಳನ್ನ ತಂದೊಡ್ಡದಿದ್ರೂ, ಸಿಲಿಕಾನ್ ಸಿಟಿಯ ಮಂದಿ ದಿಢೀರ್ ಮಳೆಗೆ ಹೈರಾಣಾಗಿದ್ದಂತೂ ಸತ್ಯ.

blank

Source: newsfirstlive.com Source link