ಕನ್ನಡದಲ್ಲಿ ‘ಕಿಚ್ಚ’ ತೆಲಗುವಿನಲ್ಲಿ ‘ಪವರ್​’! ಇಬ್ಬರಲ್ಲಿರೋ ವ್ಯತ್ಯಾಸವೇನು..?

ಕನ್ನಡದಲ್ಲಿ ‘ಕಿಚ್ಚ’ ತೆಲಗುವಿನಲ್ಲಿ ‘ಪವರ್​’! ಇಬ್ಬರಲ್ಲಿರೋ ವ್ಯತ್ಯಾಸವೇನು..?

ಅಭಿಯನ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಇಬ್ಬರಿಗೂ ಬರ್ತ್​ಡೇ ಸಂಭ್ರಮ.. ಹತ್ತಲ್ಲ ಇಪ್ಪತಲ್ಲ 50ನೇ ವರ್ಷದ ಬರ್ತ್​ಡೇ ಸಂಭ್ರಮ. ಕಿಚ್ಚನಿಗೂ 50. ಪವನ್​​​​ಗೂ 50. ಈ ಫಿಫ್ಟಿ ಫಿಫ್ಟಿ ಹೀರೋಸ್​​ಗಳಲ್ಲಿರೋ ಸಾಮ್ಯಾತೆಯ ವೈಶಿಷ್ಠವೇನು?  

ಕರುನಾಡಲ್ಲಿ ಕಿಚ್ಚನ ಅಭಿಮಾನಿಗಳಿಗೆ ಸಂಭ್ರಮ.. ಪಕ್ಕದ ಆಂಧ್ರ ಸೀಮೆಯಲ್ಲಿ ಪವರ್ ಸ್ಟಾರ್ ಅಭಿಮಾನಿಗಳ ಸಂಭ್ರಮ.. ಇಬ್ಬರು ದಿಗ್ಗಜ ನಟರ ಜನ್ಮದಿನ ಒಂದೇ ದಿನ ಆಗಿದೆ ಸಮಗಮ.. ಕಿಚ್ಚ ಸುದೀಪ್ ಹಾಗೂ ಪವನ್ ಕಲ್ಯಾಣ್ ಈ ಇಬ್ಬರು ಗತ್ತಲ್ಲಿರೋ ಗಮತ್ತಿನ ಸ್ಟಾರ್ಸ್​​​​.. ಇದ್ದಿದ್ದನ್ನ ಇದಂಗೆ ಹೇಳುತ್ತ, ಸತ್ಯ, ನಿಷ್ಠೆ , ಅಭಿಮಾನ ಸಿನಿಮಾ ಭಕ್ತಿಯಿಂದ ಬೆಳೆದವರು.. ಈ ಇಬ್ಬರಿಗೆ ಒಂದೇ ವಯಸ್ಸು, ಆಲ್ ಮೊಸ್ಟ್ ಆಲ್ ಒಂದೇ ಮನಸು ಪ್ಲಸ್​​​​​​​​ ಕನಸು..

ಕಿಚ್ಚ ಮತ್ತು ಪವನ್​​ರಲ್ಲಿ ಇರೋ ವ್ಯತ್ಯಾಸವೇನು..?
ಸವಾಲುಗಳನ್ನ ಮೆಟ್ಟಿ ಬೆಳೆದು ನಿಂತಿರೋ ಸ್ಟಾರ್ಸ್
ಕಿಚ್ಚನಲ್ಲಿದೆ ಕಿಚ್ಚು.. ಪವನ್​ ಅವ​ರಲ್ಲಿದೆ ಪವರ್​
ಈ ಇಬ್ಬರಿಗೂ ಒಂದೇ ಮನಸು ಒಂದೇ ಕನಸು

ಪವನ್ ಕಲ್ಯಾಣ್ ಹಾಗೂ ಕಿಚ್ಚ ಸುದೀಪ್ ಇಬ್ಬರ ನಡುವೆ ಅನೇಕ ಸಾಮ್ಯಾತೆಗಳಿವೆ.. ಕಿಚ್ಚ ಸುದೀಪ್ ಆಗ್ಲಿ ಪವನ್ ಕಲ್ಯಾಣ್ ಆಗ್ಲಿ ಇಬ್ಬರು ಸಿರಿವಂತ ಮನೆತನದಿಂದಲೇ ಬಂದವರು.. ಆದ್ರೆ ಮೊದ ಮೊದಲು ಸೋಲನ್ನ ನುಂಗಿಯೇ ಗೆಲುವಿನ ಅಮೃತ ಕುಡಿದವರು. ಪವನ್ ಕಲ್ಯಾಣ್ ಮತ್ತು ಕಿಚ್ಚ ಸುದೀಪ್​​ ಮಾತು ಕಡಿಮೆ ಕೆಲಸ ಜಾಸ್ತಿ ಅನ್ನೊ ಜಾಯಮಾನದವರು. ಈ ಇಬ್ಬರು ಎಲ್ಲರೊಟ್ಟಿಗೆ ಅಷ್ಟು ಸುಲಭವಾಗಿ ಬೆರೆಯೋರಲ್ಲ , ಸ್ನೇಹ ಪ್ರೀತಿ ವಿಶ್ವಾಸವನ್ನ ಎಂದಿಗೂ ಮರೆಯೋರಲ್ಲ.

blank

ಎಲ್ಲೆಲ್ಲೂ ‘ಸೊಂಟಾಕುನಕನ್​’
ತೆಲುಗಿನಲ್ಲಿ ಖುಷಿ ಸಿನಿಮಾದೊಳಗೆ ಸೋಂಟ ಹಾಡನ್ನ ಹಾಡಿ ಪವನ್ ನರ್ತಿಸಿ ನಲಿದ್ರೆ ನಮ್ಮಲ್ಲಿ ಚಂದು ಸಿನಿಮಾದ ಮೂಲಕ ಸೊಂಟಾಕುನಕುನ್​​ ಅಂತ ನಮ್ಮ ಕಿಚ್ಚ ಕುಣಿದು ಗೆದ್ದಿದ್ರು.. ಪವನ್​ ಅತ್ತಾರಿಂಟಿಕಿ ದಾರೇದಿ ಅಂತ ತೆಲುಗು ಸಿನಿಮಾದಲ್ಲಿ ನಟಿಸಿ ಗೆದ್ರೆ ಕನ್ನಡದಲ್ಲಿ ರನ್ನನಾಗಿ ಕಿಚ್ಚ ಅಭಿಮಾನಿಗಳ ಪಾಲಿಗೆ ಚಿನ್ನನಾದ್ರು.. ಮೊದಲನೇದಾಗಿ ಪವನ್ ಕಲ್ಯಾಣ್ ನಡೆದು ಬಂದ ದಾರಿಯನ್ನ ಮೆಲುಕು ಹಾಕಿಬಿಡೋಣ.. ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ಕುಟುಂಬದಿಂದ ಬಂದವರು.. ಕಾಲೇಜು ದಿನಗಳಲ್ಲಿ ಅಣ್ಣ ಚಿರಂಜೀವಿ ಸ್ಟಾರ್ ಆದಾಗ ಪವನ್ ಕಲ್ಯಾಣ್ ಅವರಿಗೆ ಇವ್ರ ಅಣ್ಣ ಸ್ಟಾರು ಸ್ಟಾರು ಅನ್ನೋ ಮಾತುಗಳು ಹಾಗೂ ವಿಶೇಷ ಗೌರವಗಳು ಮುಜುಗರವನ್ನ ಉಂಟು ಮಾಡುತ್ತಂತೆ.. ಎಸ್​​.ಎಸ್​​.ಎಲ್​​​.ಸಿ ಫೇಲ್ ಆಗಿದ್ರಂತೆ ಪವನ್.. ವಿದ್ಯಾ ತಲೆಗೆ ಹತ್ತುತಿರಲಿಲ್ಲ.. ಪಿಯುಸಿ ಫೇಲ್ ಆಗಿದ್ದಾಗೆ ಪವನ್ ಫಿಲ್ ಆಗಿ ಸೂಸೈಡ್ ಮಾಡಿಕೊಳ್ಳಲು ಟ್ರೈ ಮಾಡಿದ್ರಂತೆ.. ಇದರಿಂದ ಪವನ್ ಆರೋಗ್ಯವು ಆಗಾಗ ಕೈ ಕೊಡುತ್ತಿತಂತೆ.

ಅಣ್ಣ ಕೊಟ್ಟ ಪುಸ್ತಕ ಲೈಫ್​ ಚೇಂಜ್​ ಮಾಡ್ತು
ಓದು ತೆಲೆಗೆ ಹತ್ತದ ಯಾವುದೇ ವ್ಯವಹಾರದ ಜ್ಞಾನವು ಬರದೆ ಕಂಗಾಲಾಗಿದ್ದಾಗ ಪವನ್ ಕಲ್ಯಾಣ್​​ರಿಗೆ ಅಣ್ಣ ಜೀರಂಜೀವಿ ಹೇಳಿದ ಮಾತು ಚಿಕ್ಕಣ್ಣ ಕೊಟ್ಟ ಪುಸ್ತಕ ಲೈಫ್​ ಅನ್ನೇ ಬದಲಾಯಿಸಿ ಬಿಡ್ತು.. ಮನೆಯವರ ಒತ್ತಾಯದ ಮೇರೆಗೆ ಸಿನಿಮಾದಲ್ಲಿ ನಟಿಸಲು ಮುಂದಾದ್ರು.. ಮೊದಲ ಬಾರಿಗೆ ‘ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ’ ಅನ್ನೋ ಸಿನಿಮಾವನ್ನ ಮಾಡಿದ್ರು.. ಆದ್ರೆ ಆ ಸಿನಿಮಾ ಫ್ಲಾಫ್ ಆಗಿ ಹೋಯ್ತು.. ಮತ್ತೆ ಅದೇ ಬೇಸರ.. ಆಮೇಲೆ ಎರಡನೇ ಸಿನಿಮಾದಿಂದ ಯಶಸ್ಸಿನ ಮೆಟ್ಟಿಲು ಪವನ್ ಬಾಳಲ್ಲಿ ಬರತೊಡಗಿತ್ತು.. ಇದ್ರಲ್ಲೊಂದು ವಿಶೇಷ ಅಡಗಿದೆ.. ಮೊದಲು ಪವನ್ ಕಲ್ಯಾಣ್ ಅವರ ಹೆಸರು ಕಲ್ಯಾಣ್ ಬಾಬು ಅಂತ ಇತ್ತು.. ಯಾವಾಗ ಮೊದಲ ಸಿನಿಮಾ ಸೋತ ನಂತರ ಹನುಮಂತನ ಭಕ್ತರಾಗಿದ್ದ ಚಿರು ಫ್ಯಾಮಿಲಿ ಪವನ್ ಕಲ್ಯಾಣ್ ಅಂತ ಹೆಸರಿಟ್ತೋ ಅಲ್ಲಿಂದ ಪವನ್ ಬಾಳಲ್ಲಿ ಕಲ್ಯಾಣವಾಗಲು ಶುರುವಾಯ್ತು.

blank

ಪವನ್​, 90 ಪರ್ಸೆಂಟ್​ ಹಣ ದಾನಕ್ಕಾಗಿ ಮುಡಿಪು
ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರೋ ಪವನ್​​ ಕಲ್ಯಾಣ್ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಒಂದು ಸಿನಿಮಾಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯೋ ಪವನ್ ಕಲ್ಯಾಣ್ ತನ್ನ ಅಕೌಂಟ್​​ನಲ್ಲಿ ಬರಿ ಲಕ್ಷ ಲಕ್ಷ ಮಾತ್ರ ಬ್ಯಾಲೆನ್ಸ್ ಮೇಂಟೈನ್ ಮಾಡ್ತಾರಂತೆ. ತನ್ನ ಸಿನಿಮಾದಿಂದ ಬರೋ ಶೇ.90 ಪರಸೆಂಟ್ ಹಣವನ್ನ ದಾನಕ್ಕಾಗಿಯೇ ಬಡವರ ಏಳಿಗೆಗಾಗಿಯೇ ಖರ್ಚು ಮಾಡ್ತಾರಂತೆ ಪವನ್.

ಇದನ್ನೂ ಓದಿ: ವಿಕ್ರಾಂತ್​ ರೋಣನ ಬಿರುಗಾಳಿಗೆ ಯೂಟ್ಯೂಬ್​ ಉಡೀಸ್; ಗಂಟೆಗೆ ಬರೀ 83 ವ್ಯೂ, 66 ಸಾವಿರ ಲೈಕ್

blank

ಇದನ್ನೂ ಓದಿ: ಸುದೀಪ್​ ಮೇಲೆ ಕಣ್ಣಿಟ್ಟಿದ್ಯಾ ರಾಜಸ್ಥಾನ್ ರಾಯಲ್ಸ್..? RR ಟೀಮ್​ನಿಂದ ಸ್ಪೆಷಲ್ ಬರ್ತ್​ಡೇ ಗಿಫ್ಟ್..!

ಇನ್ನೂ ನಮ್ಮ ಕಿಚ್ಚ ಸುದೀಪ್ ಅವರ ಲೈಫ್ ಹೆಚ್ಚಾಗಿ ಪವನ್​​ಗಿಂತ ವ್ಯತ್ಯಾಸವಾಗಿಯೇ ಏನ್ ಇಲ್ಲ.. ಸಿನಿಮಾದಲ್ಲಿ ನಟಿಸಬೇಕು ಅನ್ನೋ ಮಾಹದಾಸೆಯಿಂದ ಬಂದವರು ಸುದೀಪ್​.. ಮೊದ ಮೊದಲು ಸುದೀಪ್ ಸಂಜೀವ ಅನ್ನೋ ಹೆಸರಿನಲ್ಲಿ ಪರಿಚಿತರಾದ ಸುದೀಪ್ ಮೊದಲ ಮೂರು ಸಿನಿಮಾಗಳು ಸೆಟ್ಟೇರಲಿಲ್ಲ ಸೆಟ್ಟೇರಿದ್ರು ಜನರ ಮನಸು ಗೆಲ್ಲಲೂ ಇಲ್ಲ.. ಅದ್ಯಾವಾಗ ಸ್ಪರ್ಶ ಸಿನಿಮಾವನ್ನ ಮುಗಿಸಿ ಹುಚ್ಚ ಸಿನಿಮಾದಲ್ಲಿ ಕಿಚ್ಚ ಅನ್ನೋ ಹೆಸರನ್ನ ಸುದೀಪ್ ಹೆಸರಿನೊಂದಿಗೆ ಸೇರಿಸಿಕೊಂಡ್ರೋ ಅವತ್ತಿದಂಲೆ ಕರ್ನಾಟಕದ ಮನೆಮಾತಾದ್ರು ಅಭಿನಯ ಚಕ್ರವರ್ತಿ.

blank

ಇದನ್ನೂ ಓದಿ: ವಿಕ್ರಾಂತ್​ ರೋಣನ ಬಿರುಗಾಳಿಗೆ ಯೂಟ್ಯೂಬ್​ ಉಡೀಸ್; ಗಂಟೆಗೆ ಬರೀ 83 ವ್ಯೂ, 66 ಸಾವಿರ ಲೈಕ್

ಶ್ರೀಮಂತ ಕುಟುಂಬದಿಂದ ಚಿತ್ರರಂಗದಿಂದ ಬಂದಿದ್ದರು ಕಲ್ಲುಮುಳ್ಳಿನ ದಾರಿಯನ್ನ ದಾಟಿಯೇ ಗೋಲ್ಡನ್ ಲೆಗ್ ಮ್ಯಾನ್ ಎನ್ನಿಸಿಕೊಂಡಿದ್ದಾರೆ.. ಪವನ್ ಕಲ್ಯಾಣ್ ರಂತೆ ಸುದೀಪ್ ಅವರಿಗೆ ಜನ ಸೇವೇ ಮಾಡಬೇಕು ಅನ್ನೊ ಮಹದಾಸೆ ಇದೆ.. ಆದ್ರೆ ಎಲೆಕ್ಷನ್ ಸೆಲೆಕ್ಷನ್​​ ಅನ್ನೋ ಗೋಜಿಗೆ ಹೋಗದೆ ಸರ್ಕಾರಗಳು ಮಾಡಲಾಗದ ಕೆಲಸಗಳನ್ನ ತನ್ನ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯಿಂದ ಮಾಡ್ತಿದ್ದಾರೆ.

ಇದನ್ನೂ ಓದಿ: ಕೋಟಿಗೊಬ್ಬ-3 ರಿಲೀಸ್​ಗೆ ಪ್ಲಾನ್; ದಸರಾ ಹಬ್ಬದ ಮೇಲೆ ಕಣ್ಣಿಟ್ಟ ಚಿತ್ರತಂಡ

Source: newsfirstlive.com Source link