2023ರ ರಾಜ್ಯ ಚುನಾವಣೆಗೆ ಶಾ ಮಾಸ್ಟರ್​​ ಪ್ಲಾನ್.. ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ‘ಫ್ರೀ ಹ್ಯಾಂಡ್​​’!

2023ರ ರಾಜ್ಯ ಚುನಾವಣೆಗೆ ಶಾ ಮಾಸ್ಟರ್​​ ಪ್ಲಾನ್.. ಸಿಎಂ ಬೊಮ್ಮಾಯಿ ನಾಯಕತ್ವಕ್ಕೆ ‘ಫ್ರೀ ಹ್ಯಾಂಡ್​​’!

2023ರ ಚುನಾವಣೆಗೆ ಬಿಜೆಪಿಯ ಚಾಣಾಕ್ಯ ಅಮಿತ್​​ ಶಾ ಈಗಿನಿಂದಲೇ ಸಿದ್ಧತೆ ಶುರು ಮಾಡಿದಂತಿದೆ. ಮುಂದಿನ ಎಲೆಕ್ಷನ್​​ನಲ್ಲಿ ಬಿಜೆಪಿ ಎಲೆಕ್ಷನ್​​​ ರಥಕ್ಕೆ ಬೊಮ್ಮಾಯಿ ಸಾರಥಿ ಆಗಲಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಛಲ ತೊಟ್ಟ ಛಲದಂಕ ಮಲ್ಲ, ಸಿಎಂಗೂ ಬಲ ತುಂಬಿದ್ದಾರೆ. ಪಕ್ಷದೊಳಗಿನ ಎಲ್ಲಾ ಗೊಂದಲಗಳಿಗೆ ಇತಿಶ್ರೀ ಹಾಡಿದ್ದಾರೆ.

blank

2023ರ ಚುನಾವಣೆಗೆ ಬೊಮ್ಮಾಯಿಯೇ ಬಿಜೆಪಿ ಸಾರಥಿ!
ಬಿಜೆಪಿಯ ಭವಿಷ್ಯದ ಗೊಂದಲಕ್ಕೆ ತೆರೆ ಎಳೆದ ಚಾಣಾಕ್ಯ
ಮಾಜಿ ಸಿಎಂ ಬಿಎಸ್​ವೈರಿಂದ ನಾಯಕತ್ವವನ್ನ ಹೆಗಲಿಗೇರಿಸಿಕೊಂಡು ರಾಜ್ಯದಲ್ಲಿ ಬಿಜೆಪಿ ರಥ ಎಳೆಯುತ್ತಿರೋ ಸಿಎಂ ಬಸವರಾಜ ಬೊಮ್ಮಾಯಿಗೆ ಆನೆಬಲ ಬಂದಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಬಿಜೆಪಿ ಚಾಣಾಕ್ಯ ಅಮಿತ್ ಶಾ, ಬೊಮ್ಮಾಯಿಗೆ ಬಹುಪರಾಕ್ ಎಂದಿದ್ದಾರೆ.

ಅಮಿತ್ ಶಾ ಅವರ ಮಾತುಗಳು ಸಿಎಂ ಬಸವರಾಜ ಬೊಮ್ಮಾಯಿಗೆ ಆನೆ ಬಲ ಕೊಟ್ಟಿದೆ. 2023ರ ಚುನಾವಣೆಗೆ ಬೊಮ್ಮಾಯಿಯೇ ಬಿಜೆಪಿ ಸಾರಥಿ ಅನ್ನೋ ಮೂಲಕ ಬೊಮ್ಮಾಯಿ ಹೆಗಲಿಗೆ ಚುನಾವಣೆಯ ನಾಯಕತ್ವದ ಹೊರೆಯನ್ನು ಅಮಿತ್ ಶಾ ಹೊರಿಸಿದ್ದಾರೆ.

blank

ಬೊಮ್ಮಾಯಿಗೆ ಬಹುಪರಾಕ್​​!
ಬೊಮ್ಮಾಯಿ ಮತ್ತೆ ಸಿಎಂ ಆಗಲಿದ್ದಾರೆ ಎಂದಿರುವ ಅಮಿತ್​​​ ಶಾ, ದಾವಣಗೆರೆಯಲ್ಲಿ ಸಿಎಂ ಸ್ಥಾನದ ವಿಚಾರ ಪ್ರಸ್ತಾಪಿಸಿದ್ದಾರೆ. 2023ರಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೆ ಸರ್ಕಾರ ರಚನೆ ಆಗುತ್ತದೆ ಅನ್ನೋ ಮೂಲಕ ಬೊಮ್ಮಾಯಿ ಆಡಳಿತ ಚತುರತೆಯನ್ನು ಅಮಿತ್​ ಶಾ ಹೊಗಳಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿಯ ಭವಿಷ್ಯದ ಗೊಂದಲಕ್ಕೆ ಅಮಿತ್​​ ಶಾ ತೆರೆ ಎಳೆದಿದ್ದಾರೆ.

ಇನ್ನು ಬೊಮ್ಮಾಯಿ ಮತ್ತೆ ಸಿಎಂ ಆಗ್ತಾರೆ ಎಂದಿದ್ಯಾಕೆ ಅಮಿತ್ ಶಾ? ಅಮಿತ್​​​​ ಶಾಗೆ ಬೊಮ್ಮಾಯಿ ಮೇಲೆ ಯಾಕಿಷ್ಟು ಒಲವು? ಆ ಒಲವಿನ ಹಿಂದಿರೋ ಚಾಣಾಕ್ಯನ ತಂತ್ರ ಏನು ಅಂತ ನೋಡೋದಾದ್ರೆ.

blank

ಭವಿಷ್ಯದ ಲೆಕ್ಕ.. ಚಾಣಾಕ್ಯ ತಂತ್ರ!
2023ರ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿ ಅನ್ನೋ ಸಂದೇಶವೇ ನೀಡುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಗೊಂದಲಗಳಿಗೆ ತೆರೆ ಎಳೆಯುವುದು ಅಮಿತ್ ಶಾ ಉದ್ದೇಶವಾಗಿದೆ. ಅಲ್ಲದೆ ಬಾಕಿ ಅವಧಿ ಆಡಳಿತಕ್ಕಾಗಿ ಸ್ವಪಕ್ಷೀಯರು ಬೆಂಬಲಿಸಿ ಎಂದು ಸಲಹೆಯನ್ನೂ ನೀಡಿರುವ ಬಿಜೆಪಿ ಚಾಣಾಕ್ಯ, ಬೊಮ್ಮಾಯಿ ಅದೃಷ್ಟದ ಸಿಎಂ ಅಲ್ಲ, ಹೈಕಮಾಂಡ್​​​ ಆಯ್ಕೆಯ ಸಿಎಂ ಅನ್ನೋ ಸ್ಪಷ್ಟ ಸಂದೇಶವನ್ನೂ ರವಾನಿಸಿದ್ದಾರೆ. ಇನ್ನು 2023ರ ವಿಧಾನಸಭಾ ಚುನಾವಣೆಗೂ ಸಿಎಂ ಬೊಮ್ಮಾಯಿ ನೇತೃತ್ವ ವಹಿಸಿಕೊಂಡರೆ, ಲಿಂಗಾಯತ ಮತಗಳು ಚದುರದಂತೆ ಬೊಮ್ಮಾಯಿ ನೋಡಕೊಳ್ಳಬಹುದು ಅನ್ನೋ ಲೆಕ್ಕಾಚಾರ ಹೈಕಮಾಂಡ್​​​​​​ನದ್ದಾಗಿದೆ.

ಒಟ್ಟಿನಲ್ಲಿ ಭವಿಷ್ಯದ ಚುನಾವಣೆಗೆ ಈಗಿನಿಂದಲೇ ಕಾರ್ಯಪ್ರವೃತ್ತವಾಗುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಚಾಣಾಕ್ಯ ಸಂದೇಶ ನೀಡಿದ್ದಾರೆ. ಅಲ್ಲದೆ ಮುಂದಿನ ನಾಯಕತ್ವದ ಬಗ್ಗೆಯೂ ಸ್ಪಷ್ಟವಾಗಿ ಹೇಳುವ ಮೂಲಕ 2023ರ ರಾಜ್ಯ ಚುನಾವಣೆಗೆ ಅಮಿತ್ ಶಾ ಈಗಿನಿಂದಲೇ ಸಿದ್ಧತೆ ಶುರು ಮಾಡಿದಂತಿದೆ.

ವಿಶೇಷ ಬರಹ: ಶಿವಪ್ರಸಾದ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್

Source: newsfirstlive.com Source link