ಇನ್ಮುಂದೆ ಕಿರಿಕ್ ಮಾಡಿದ್ರೆ ಹುಷಾರ್​ ಅಂತಿದ್ದಾರೆ ಬಿಎಂಟಿಸಿ ಮಹಿಳಾ ಸಿಬ್ಬಂದಿ

ಇನ್ಮುಂದೆ ಕಿರಿಕ್ ಮಾಡಿದ್ರೆ ಹುಷಾರ್​ ಅಂತಿದ್ದಾರೆ ಬಿಎಂಟಿಸಿ ಮಹಿಳಾ ಸಿಬ್ಬಂದಿ

ಬೆಂಗಳೂರು: ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಕರಾಟೆ ಟ್ರೈನಿಂಗ್ ನೀಡಲಾಗ್ತಾಯಿದ್ದು, ಎಲ್ಲಾ ಮಹಿಳಾ ಸಿಬ್ಬಂದಿ ಫುಲ್ ಜೋಶ್​​ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

blank

ಸಿಬ್ಬಂದಿಗೆ ಟ್ರೈನರ್ಸ್​ಗಳಿಂದ ಲೆಗ್ ಕಿಕ್, ಫೇಸ್ ಕಿಕ್ ಹೀಗೆ ನಾನಾ ಬಗೆಯ ಟ್ರೈನಿಂಗ್​ನಲ್ಲಿ ಭಾಗವಹಿಸಿದ್ದಾರೆ. ನಿರ್ಭಯ ಯೋಜನೆ ಅಡಿಯಲ್ಲಿ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಟ್ರೈನಿಂಗ್ ನೀಡಲಾಗ್ತಾಯಿದ್ದು, ತಮ್ಮ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಸೆಲ್ಫ್ ಡಿಫೆನ್ಸ್ ಟ್ರೈನಿಂಗ್​ ನೀಡ್ತಿದ್ದಾರೆ.

 

blank

ಮಹಿಳಾ ಸಿಬ್ಬಂದಿ ಬಸ್ಸುಗಳಲ್ಲಿ ಕೆಲಸ ನಿರ್ವಹಿಸುವ ವೇಳೆ, ಕೆಲ ಪ್ರಯಾಣಿಕರು ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆ, ಮಹಿಳೆಯರಿಗೆ ಸೆಲ್ಫ್ ಡಿಫೆನ್ಸ್ ಟ್ರೈನಿಂಗ್ ನೀಡಲು ನಿರ್ಧರಿಸಿದ್ದು, ಬಿಎಂಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ಮಹಿಳೆಯರಿಗೆ ಅಭ್ಯಾಸ ನಡೆಯುತ್ತಿದ್ದು, ಇಲ್ಲಿ ಮಹಿಳೆಯರು ತರಬೇತಿ ತೆಗೆದುಕೊಳ್ತಿದ್ದಾರೆ.

blank

Source: newsfirstlive.com Source link