ಮೂರು ಪಾಲಿಕೆ ಚುನಾವಣೆಗೆ ಮತದಾನ ಆರಂಭ.. ಕೊರೊನಾ ನಿಯಮ ಪಾಲಿಸಿಲು ಕಟ್ಟುನಿಟ್ಟಿನ ಕ್ರಮ

ಮೂರು ಪಾಲಿಕೆ ಚುನಾವಣೆಗೆ ಮತದಾನ ಆರಂಭ.. ಕೊರೊನಾ ನಿಯಮ ಪಾಲಿಸಿಲು ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಪಾಲಿಕೆ ಫೈಟ್​​ಗೆ ವೇದಿಕೆ ಸಜ್ಜಾಗಿದ್ದು, ಮೂರು ಮಹಾನಗರ ಪಾಲಿಕೆ ಚುನಾವಣೆ ಮತದಾನ ಆರಂಭವಾಗಿದೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಕೊರೊನಾ ನಿಯಮ ಪಾಲಿಸಿ ಮತದಾನ ನಡೆಸಲು ಅವಕಾಶ ಕಲ್ಪಿಸಲಾಗಿದೆ.

blank

ರಾಜ್ಯದಲ್ಲಿ ಬೆಂಗಳೂರಿನ ಬಿಬಿಎಂಪಿ ಹೊರತು ಪಡಿಸಿದರೆ ರಾಜ್ಯದ ಅತೀ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆ 420 ಅಭ್ಯರ್ಥಿ ಸ್ಪರ್ಧೆ ಮಾಡಿದ್ದು, 842 ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ. ಹು-ಧಾ ಮಹಾನಗರ ಪಾಲಿಕೆ ಉತ್ತರ ಕರ್ನಾಟಕ ಭಾಗದ ಮೊದಲ ಕಾರ್ಪೊರೇಷನ್ (1965) ಆಗಿದ್ದು, ಸತತ ಮೂತನೇ ಬಾರಿಗೆ ಪಾಲಿಕೆಯಲ್ಲಿ ಬಿಜೆಪಿ ತನ್ನ ಬಾವುಟ ಹಾರಿಸಲು ಕಸರತ್ತು ನಡೆಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪುರುಷರು- 4,03,657 ಮತ್ತು ಮಹಿಳೆರು 4,07,891 ಮತದಾರರಿದ್ದು, ಒಟ್ಟು 8,11,632 ಮತದಾರರಿದ್ದಾರೆ. ಇನ್ನು ಬಿಜೆಪಿಯಿಂದ 82, ಕಾಂಗ್ರೆಸ್ ನಿಂದ 82, ಜೆಡಿಎಸ್​ನಿಂದ 49, AAPಯಿಂದ 41 ಅಭ್ಯರ್ಥಿಗಲು ಕಣಕ್ಕೆ ಇಳಿದಿದ್ದು, ಪಕ್ಷೇತರ ಅಭ್ಯರ್ಥಿಗಳಾಗಿ 122 ಹಾಗೂ AIMIM ಪಕ್ಷದಿಂದ 11 ಮಂದಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

blank

Source: newsfirstlive.com Source link