ಬಾಹ್ಯಾಕಾಶದಲ್ಲಿ ತಲೆ ಸ್ನಾನ ಮಾಡೋದು ಹೇಗೆ ಗೊತ್ತಾ? -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಬಾಹ್ಯಾಕಾಶದಲ್ಲಿ ತಲೆ ಸ್ನಾನ ಮಾಡೋದು ಹೇಗೆ ಗೊತ್ತಾ? -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

01. 3 ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭ

blank
ರಾಜ್ಯದಲ್ಲಿ ಮೂರು ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಆರಂಭವಾಗಿದೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ನಗರಗಳಲ್ಲಿ ಶಾಂತಿಯುತ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ಮತದಾನ ಸಂಜೆ 5 ಗಂಟೆವರೆಗೆ ನಡೆಯಲಿದೆ. ಮತದಾನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಕೊರೊನಾ ನಿಯಮ ಪಾಲಿಸಿ ಮತದಾನ ನಡೆಯುತ್ತಿದೆ.

02. ಎಲ್.ಪಿ.ಜಿ ಸಿಲಿಂಡರ್​ಗೆ ಎಳ್ಳು-ನೀರು ಬಿಟ್ಟು ಪ್ರತಿಭಟನೆ

blank
ಎಲ್.ಪಿ.ಜಿ ಸಿಲಿಂಡರ್ ದರ ಏರಿಕೆ ಖಂಡಿಸಿ ಮೈಸೂರಿನಲ್ಲಿ ಸಿಲಿಂಡರ್​ಗೆ ಎಳ್ಳು-ನೀರು ಬಿಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಲಾಗಿದೆ. ಅರಸು ಪ್ರತಿಮೆ ಪ್ರತಿಷ್ಠಾನ ಹಾಗೂ ವಿವಿಧ ಸಂಘಸಂಸ್ಥೆಗಳು, ನಗರದ ಕೋರ್ಟ್ ಮುಂಭಾಗದಲ್ಲಿ ಈ ರೀತಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಮೋದಿ ಸರ್ಕಾರ ಮಧ್ಯಮವರ್ಗದ ಜನರನ್ನು ಬೀದಿ ಪಾಲು ಮಾಡಿದೆ. ಕೂಡಲೇ ನರೇಂದ್ರ ಮೋದಿ ಅಧಿಕಾರ ಬಿಟ್ಟು ತೊಲಗಲಿ ಅಂತಾ ಕಿಡಿಕಾರಿದ್ದಾರೆ.

03. ಉಡುಪಿಯಲ್ಲಿ ನೈಟ್ ಕರ್ಪ್ಯೂ ಜೊತೆ ವೀಕೆಂಡ್ ಕರ್ಪ್ಯೂ ಜಾರಿ
ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ನೈಟ್ ಕರ್ಪ್ಯೂ ಜೊತೆಗೆ ವೀಕೆಂಡ್ ಕರ್ಪ್ಯೂ ಕೂಡ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ಇನ್ನು ಶನಿವಾರ, ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮದುವೆ ಇನ್ನಿತರ ಶುಭ ಕಾರ್ಯಗಳಿಗೆ 400 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.

04. ಇವತ್ತೆ ರಚನೆಯಾಗುತ್ತಾ ತಾಲಿಬಾನಿ ಸರ್ಕಾರ..?

blank

ಇರಾನಿನ ನಾಯಕತ್ವದ ರೀತಿಯಲ್ಲಿಯೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ತಾಲಿಬಾನ್‌ ಸಜ್ಜಾಗಿದೆ. ಇನ್ನು ತಮ್ಮ ಧಾರ್ಮಿಕ ಮುಖಂಡ ಮುಲ್ಲಾ ಹೈಬದುಲ್ಲಾ ಅಖುಂಡಜಾದರನ್ನ ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನನ್ನಾಗಿ ಮಾಡಲು ತಾಲಿಬಾನಿ ತಯಾರಿ ನಡೆಸುತ್ತಿದೆ. ಸದ್ಯ ಹೊಸ ಸರ್ಕಾರ ರಚನೆ ಬಗ್ಗೆ ಎಲ್ಲ ಚರ್ಚೆಗಳು ಮುಗಿದಿದ್ದು, ಶೀಘ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ ಅಂತ ತಾಲಿಬಾನಿ ವಕ್ತಾರ ಮುಫ್ತಿ ಇನಾಮುಲ್ಲಾ ತಿಳಿಸಿದ್ದಾರೆ.

05. ಆತ್ಮಾಹುತಿ ಬಾಂಬ್​ ಪ್ರದರ್ಶಿಸಿ ತಾಲಿಬಾನ್​ ಪರೇಡ್​
ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಉಗ್ರರು ಮತ್ತೊಮ್ಮೆ ತಮ್ಮ ಭಯೋತ್ಪಾದಕ ಬುದ್ದಿಯನ್ನ ಇಡೀ ಜಗತ್ತಿಗೆ ಸಾರಿದ್ದಾರೆ. ಮಿಲಿಟರಿ ಪರೇಡ್ ​ನಡೆಸುವ ವೇಳೆ ಉಗ್ರರು ಆತ್ಮಾಹುತಿ ಬಾಂಬ್​ಗಳನ್ನ ಪ್ರದರ್ಶಿಸಿದ್ದಾರೆ. ಕೇವಲ ಆತ್ಮಾಹುತಿ ಬಾಂಬರ್​ಗಳಲ್ಲದೆ, ಕಾರ್​ ಬಾಂಬ್​, ಬ್ಯಾರೆಲ್​ ಬಾಂಬ್​ ಹಾಗೂ ಇನ್ನಿತರ ಸ್ಪೋಟಕ ಸಾಮಾಗ್ರಿಗಳನ್ನು ಉಗ್ರರು ಪ್ರದರ್ಶಿಸಿದ್ದಾರೆ.

06. ‘ಭಾರತೀಯರನ್ನು ವಾಪಸ್ ಕರೆತರುವುದೇ ನಮ್ಮ ಧ್ಯೇಯ’
ಅಫ್ಘಾನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆತರುವುದೇ ನಮ್ಮ ಧ್ಯೇಯ ಅಂತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಅಫ್ಘಾನಿಸ್ತಾನವನ್ನು ತೊರೆಯಲು ಬಯಸಿರುವ ಭಾರತೀಯರನ್ನು ಶೀಘ್ರದಲ್ಲಿಯೇ ಭಾರತಕ್ಕೆ ಕರೆತರಲಾಗುವುದು ಎಂದಿದ್ದಾರೆ. ಕಾಬೂಲ್ ನಗರ ತಾಲಿಬಾನಿಗಳ ನಿಯಂತ್ರಣದಲ್ಲಿದ್ದು, ವಿಮಾನಗಳ ಸಂಚಾರ ಪುನರಾರಂಭಗೊಂಡಾಗ ಭಾರತೀಯರನ್ನು ಕರೆತರುತ್ತೇವೆ ಅಂತ ಬಾಗ್ಚಿ ತಿಳಿಸಿದ್ದಾರೆ.

07. ಇಂದು ನಟ ಸಿದ್ದಾರ್ಥ್ ಅಂತಿಮ ಸಂಸ್ಕಾರ

blank
ಬಿಗ್​ಬಾಸ್ 13ರ ವಿನ್ನರ್, ಕತ್ರೋಂಕಿ ಕಿಲಾಡಿ ರಿಯಾಲಿಟಿ ಶೋನಲ್ಲೂ ಕಪ್ ಮುಡಿಗೇರಿಸಿಕೊಂಡಿದ್ದ ಪಾಪ್ಯುಲರ್ ನಟ ಸಿದ್ದಾರ್ಥ್ ಶುಕ್ಲಾ ಹಠಾತ್ ನಿಧನರಾಗಿದ್ದಾರೆ. ಇನ್ನೂ, ಸಿದ್ಧಾರ್ಥ್ ಶುಕ್ಲಾ ಅವರ ಮರಣೋತ್ತರ ಪರೀಕ್ಷೆ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಇಂದು ಸಿದ್ದಾರ್ಥ್​ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಆಸ್ಪತ್ರೆ ಸಿಬ್ಬಂದಿ ಹಸ್ತಾಂತರಿಸಲಿದ್ದಾರೆ. ಮೂಲಗಳ ಪ್ರಕಾರ ಇವತ್ತು ಸಿದ್ದಾರ್ಥ್ ಅಂತಿಮ ಸಂಸ್ಕಾರ ನಡೆಯಲಿದೆ.

08. ‘ಐಡಾ ಚಂಡಮಾರುತ ಅಬ್ಬರ.. ಜನ ತತ್ತರ..!’

blank
ಈಶಾನ್ಯ ಅಮೆರಿಕಾದಲ್ಲಿ ಐಡಾ ಚಂಡಮಾರುತದಿಂದ ಹಲವೆಡೆ ವಿಮಾನಗಳ ಕಾರ್ಯಾಚರಣೆಯನ್ನ ರದ್ದುಗೊಳಿಸಲಾಗಿದೆ. ನ್ಯೂಯಾರ್ಕ್ ನಗರವೊಂದರಲ್ಲೇ ಚಂಡಮಾರುತದಿಂದ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 15ಕ್ಕೆ ಏರಿದೆ. ನ್ಯೂಯಾರ್ಕ್​ಗೆ ಅಪ್ಪಳಿಸಿರುವ ಚಂಡಮಾರುತ, ಬ್ರೂಕ್ಲಿನ್ ಮತ್ತು ಕ್ವೀನ್ಸ್ ಪ್ರಾಂತ್ಯದಲ್ಲಿ ಅಪಾರ ಪ್ರಮಾಣದ ಹಾನಿ ಉಂಟುಮಾಡಿದೆ. ಸದ್ಯ ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಹದಗೆಡುತ್ತಿದ್ದು, ಅಲ್ಲಿನ ಗವರ್ನರ್ ಕ್ಯಾಥಿ ಹೊಚುಲ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

09. ತನ್ನತ್ತ ಬಂದ ಡ್ರೋನನ್ನು ಜಗಿದು ಹಾಕಿದ ಮೊಸಳೆ..!

blank
ಮೊಸಳೆಯ ಪಕ್ಕದಲ್ಲಿ ಡ್ರೋಣ್ ಹಾರಿಸಿದಾಗ ಆ ಡ್ರೋಣ್​ ಅ​ನ್ನೇ ಮೊಸಳೆ ನುಂಗಿ ಹಾಕಿದೆ. ಅಮೇರಿಕಾದ ಫ್ಲೋರಿಡಾದಲ್ಲಿ ಮೊಸಳೆಯ ಕ್ಲೋಸ್ ಅಪ್​ ದೃಶ್ಯ ಸೆರೆ ಹಿಡಿಯಲು ಡ್ರೋಣ್ ಆಪರೇಟರ್ಸ್​​​ ಪ್ಲಾನ್ ಮಾಡಿದ್ರು. ಆದ್ರೆ ತನ್ನತ್ತ ಬಂದ ಡ್ರೋನ್‌ ಕ್ಯಾಮರಾವನ್ನೇ ಮೊಸಳೆ ಜಗಿದು ತಿಂದು ಹಾಕಿಬಿಟ್ಟಿದೆ. ಈ ವೇಳೆ ಮೊಸಳೆ ಬಾಯಿಂದ ಹೊಗೆ ಹೊರಗೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ದೃಶ್ಯವನ್ನು ಕಂಡ ಅನೇಕರು, ವನ್ಯ ಜೀವಿಗಳ ಬಳಿ ಡ್ರೋಣ್ ಬಳಸಿದ ಜನರ ವಿರುದ್ಧ ಕಿಡಿಕಾರಿದ್ದಾರೆ.

10. ‘ಬಾಹ್ಯಾಕಾಶದಲ್ಲಿ ಹೀಗೆ ಕೂದಲು ತೊಳೆಯುವುದು’

blank
ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ತಲೆಸ್ನಾನ ಮಾಡಿದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೇಗನ್ ಎನ್ನುವ ಗಗನಯಾತ್ರಿ ಈ ಸಂಬಂಧ ವಿಡಿಯೋವನ್ನು ಶೇರ್ ಮಾಡಿದ್ದು, ಗುರುತ್ವಾಕರ್ಷಣ ಬಲ ಕಡಿಮೆಯಿರುವ ಬಾಹ್ಯಾಕಾಶದಲ್ಲಿ ಸ್ನಾನ ಮಾಡುವ ಶೈಲಿಯನ್ನು ತೋರಿಸಿಕೊಟ್ಟಿದ್ದಾರೆ. ಮೊದಲಿಗೆ ಕೂದಲನ್ನು ಸ್ವಲ್ಪ ನೀರು ಮಾಡಿಕೊಂಡು, ನೊರೆ ರಹಿತ ಶಾಂಪು ಅಪ್ಲೈ ಮಾಡಿ ಕೂದಲನ್ನ ನಿಧಾನವಾಗಿ ಸ್ವಚ್ಚಗೊಳಿಸಬೇಕು ಅಂತ ಹೇಳಿದ್ದಾರೆ. ಬಾಹ್ಯಾಕಾಶದಲ್ಲಿ ನೀರನ್ನು ಬಳಸಲು ಸಾಧ್ಯವಾಗದ ಕಾರಣ ನಾವು ಈ ಮೆತೆಡ್ ಫಾಲೋ ಮಾಡ್ತೀವಿ ಅಂತ ಹೇಳಿದ್ದಾರೆ.

Source: newsfirstlive.com Source link