ಸೆ.6 ಅಥವಾ 7ರಂದು ಭಾರತ ತಂಡ ಪ್ರಕಟ -ಟಿ20 ವಿಶ್ವಕಪ್​​​ಗೆ ಆರ್​​​.ಅಶ್ವಿನ್​ ಆಯ್ಕೆ.?

ಸೆ.6 ಅಥವಾ 7ರಂದು ಭಾರತ ತಂಡ ಪ್ರಕಟ -ಟಿ20 ವಿಶ್ವಕಪ್​​​ಗೆ ಆರ್​​​.ಅಶ್ವಿನ್​ ಆಯ್ಕೆ.?

ಮುಂದಿನ ವಾರ ಬಿಸಿಸಿಐ, ಟೀಮ್​ ಇಂಡಿಯಾ ಟಿ-ಟ್ವೆಂಟಿ ವಿಶ್ವಕಪ್​​​ಗೆ, 15 ಸದಸ್ಯರ ತಂಡವನ್ನ ಅನೌನ್ಸ್​ ಮಾಡುತ್ತೆ. ಈ ಪ್ರತಿಷ್ಠಿತ ಟೂರ್ನಿಗಾಗಿ ದಿನಕ್ಕೊಂದು ಹೆಸರು ಮುನ್ನಲೆಗೆ ಬರ್ತಿದೆ. ಆದರೀಗ ಆಟಗಾರರ ಆಯ್ಕೆಯ ವಿಚಾರದಲ್ಲಿ, ಇದೀಗ ಅಚ್ಚರಿ ಹೆಸರೊಂದು ಕೇಳಿ ಬಂದಿದೆ.

ಭಾರತೀಯ ಕ್ರಿಕೆಟ್​ ಅಭಿಮಾನಿಗಳ ನೋಟ, ಟಿ20 ವಿಶ್ವಕಪ್​​ಗೆ ಬಿಸಿಸಿಐ ಪ್ರಕಟಿಸುವ​​ ತಂಡದತ್ತ ಚಿತ್ತ ನೆಟ್ಟಿದೆ. ಮುಂದಿನ ವಾರ ಘೋಷಿಸುವ ತಂಡದಲ್ಲಿ ಯಾವೆಲ್ಲಾ ಆಟಗಾರರು ಅವಕಾಶ ಪಡೆಯುತ್ತಾರೆ ಅನ್ನೋ ಕುತೂಹಲ ಹೆಚ್ಚಿಸಿದೆ. ಆದರೆ ಆಯ್ಕೆ ಸಮಿತಿಗೆ ಹೆಚ್ಚು ತಲೆನೋವು ತರಿಸಿರೋದು, ಸ್ಪಿನ್ನರ್​​ಗಳ ಆಯ್ಕೆ. ತಂಡದಲ್ಲಿ ಸಾಕಷ್ಟು ಮಂದಿ ಸ್ಪಿನ್ನರ್​​ಗಳೇ ಇದ್ದಾರೆ. ಆದ್ರೆ ಕಳೆದ 4 ವರ್ಷಗಳಿಂದ ವೈಟ್​​ಬಾಲ್​ ಕ್ರಿಕೆಟ್​​ನಿಂದ ದೂರವಿದ್ದ ಅನುಭವಿ ಆಫ್​​ಸ್ಪಿನ್ನರ್​​ ರವಿಚಂದ್ರನ್​ ಅಶ್ವಿನ್​, ಪೈಪೋಟಿಗೆ ಇಳಿದಿರೋದು ಅಚ್ಚರಿ ಮೂಡಿಸಿದೆ.

blank

T20 ವಿಶ್ವಕಪ್​ಗೆ ಅನುಭವಿ ಆರ್​.ಅಶ್ವಿನ್​​ ಆಯ್ಕೆಯಾಗ್ತಾರಾ.?
2017 ಜುಲೈ 9ರಂದು ಅಶ್ವಿನ್, ಕೊನೆಯದಾಗಿ ಆಡಿದ ಟಿ20 ಪಂದ್ಯ. ಅದಾದ ಬಳಿಕ ಈವರೆಗೂ ವೈಟ್​​ಬಾಲ್​ ಕ್ರಿಕೆಟ್​​ಗೆ ಮರಳಲೇ ಇಲ್ಲ. ಇದೀಗ ಮತ್ತೆ ತಂಡಕ್ಕೆ ಮರಳುವ ಅವಕಾಶ ಒದಗಿ ಬಂದಿದೆ. ಸದ್ಯ ತಂಡದಲ್ಲಿ ಸ್ಪಿನ್ನರ್​ಗಳ ದಂಡೇ ಇದೆ. ಕುಲ್ದೀಪ್​ ಯಾದವ್​, ಯಜುವೇಂದ್ರ ಚಹಲ್​, ವರುಣ್​ ಚಕ್ರವರ್ತಿ, ವಾಷಿಂಗ್ಟನ್​ ಸುಂದರ್, ರಾಹುಲ್​ ಚಹರ್, ಕೃನಾಲ್​ ಪಾಂಡ್ಯ, ಚುಟುಕು ವಿಶ್ವಕಪ್​​ ತಂಡದಲ್ಲಿ ಸ್ಥಾನ ಪಡೆಯುವ ರೇಸ್​​ನಲ್ಲಿದ್ದಾರೆ.

ಜೊತೆಗೆ ಬ್ಯಾಟಿಂಗ್​ ಆಲ್​​ರೌಂಡರ್​ ರವೀಂದ್ರ ಜಡೇಜಾ ಆಡೋದು ಖಚಿತವಾದ್ರೂ, ಸ್ಪಿನ್​​ ಕೋಟಾಗೆ ಸೇರುತ್ತಾರೆ. ಈ ಸ್ಪಿನ್ನರ್​ಗಳು ಒಬ್ಬರು ಒಂದೊಂದು ರೀತಿ ಪರ್ಫಾಮೆನ್ಸ್​​ ನೀಡಿ, ವಿಶ್ವಕಪ್​​ಗೆ ಆಯ್ಕೆಯಾಗುವ ಭರವಸೆ ಮೂಡಿಸಿದ್ದಾರೆ. ಆದರೆ ತಂಡದಲ್ಲಿ ಸ್ಪಿನ್ನರ್​ಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರೋದು, ಸೆಲೆಕ್ಷನ್​ ಕಮಿಟಿಯನ್ನೂ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಹಾಗಾಗಿ ಸ್ಪಿನ್​ ಆಯ್ಕೆಗೆ ಅಶ್ವಿನ್​​ರತ್ತ ಬೊಟ್ಟು ಮಾಡಲಾಗ್ತಿದೆ.

blank

ಸಮಸ್ಯೆಗಳ ಸುಳಿಗೆ ಸಿಲಿಕಿದ್ದಾರಾ ಟೀಮ್​ ಇಂಡಿಯಾ ಸ್ಪಿನ್ನರ್​ಗಳು.?
ಕುಲ್ದೀಪ್​​-ಚಹಲ್​ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇನ್ನು ವರುಣ್​ ಚಕ್ರವರ್ತಿ ಅನ್​ಫಿಟ್​..! ವಾಷಿಂಗ್ಟನ್ ಸುಂದರ್​ ಇಂಜುರಿಯಿಂದ ಐಪಿಎಲ್​ನಿಂದಲೇ ಹೊರಗುಳಿದಿದ್ದಾರೆ. ಆಲ್​​ರೌಂಡರ್ ಕೋಟಾದಲ್ಲಿ ಹಾರ್ದಿಕ್​ ಜೊತೆಗೆ ಜಡೇಜಾ ಇರುವ ಕಾರಣ, ಕೃನಾಲ್​ ಆಯ್ಕೆ ಅಸಾಧ್ಯ.! ರಾಹುಲ್​ ಚಹರ್ ಮಾತ್ರ ಅದ್ಭುತ ಪರ್ಫಾಮೆನ್ಸ್​ ತೋರುತ್ತಿದ್ದು, ಆಯ್ಕೆಯಾಗೋದು ಖಚಿತ ಎನ್ನಲಾಗ್ತಿದೆ.

ಒಂದು ವೇಳೆ ಸ್ಪಿನ್ನರ್​​ಗಳನ್ನ ಆಯ್ಕೆ ಮಾಡಿದ ಬಳಿಕ, ಟೂರ್ನಿ ಮಧ್ಯೆ ಫಿಟ್​​ನೆಸ್​​ ಸಮಸ್ಯೆ ಕಾಡಿದ್ರೆ, ತಂಡ ಇಕ್ಕಟ್ಟಿಗೆ ಸಿಲುಕುವಂತಾಗುತ್ತೆ. ಹಾಗಾಗಿ ಅಶ್ವಿನ್​, ವೈಟ್​ಬಾಲ್​​ಗೆ​ ಮರಳಲು ಇದು ಸೂಕ್ತ ಸಮಯ ಅನ್ನೋದು ಬಿಸಿಸಿಐ ನಂಬಿಕೆ. ಟೆಸ್ಟ್​​​ನಲ್ಲಿ ಮಿಂಚ್ತಿರುವ ಕೇರಂ ಸ್ಪಿನ್ನರ್​, ಐಪಿಎಲ್​​ನಲ್ಲೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಶ್ವಿನ್​,​ ಟಿ20 ವಿಶ್ವಕಪ್​​ಗೆ ಆಯ್ಕೆಯಾಗೋದು ಕನ್ಫರ್ಮ್​ ಎನ್ನಲಾಗ್ತಿದೆ. ಆದರೆ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೀತಾರಾ ಇಲ್ವಾ ಅನ್ನೋದನ್ನ ಕಾದುನೋಡಬೇಕಿದೆ.

blank

Source: newsfirstlive.com Source link