ಕೆಲಸದಿಂದ ಕಿತ್ತರೆಂದು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿದ ಚಾಲಾಕಿ!

ಕೆಲಸದಿಂದ ಕಿತ್ತರೆಂದು ಕೆಲಸ ಮಾಡುತ್ತಿದ್ದ ಅಂಗಡಿಗೆ ಕನ್ನ ಹಾಕಿದ ಚಾಲಾಕಿ!

ಬೆಂಗಳೂರು : ಕೆಲಸದಿಂದ ತೆಗೆದು ಹಾಕಿದ್ದರಿಂದ ಕೋಪಗೊಂಡ ಉದ್ಯೋಗಿಯೊರ್ವ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್​ನಲ್ಲಿಯೇ ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

blank

ನಾಗಾಲ್ಯಾಂಡ್ ಮೂಲದ ಆಟೋನಾಲ ಎಂಬಾತ ಕಳ್ಳತನ ಮಾಡಿದ ವ್ಯಕ್ತಿ. ಆರೋಪಿ ಆಟೋನಾಲ ಜರಗನಹಳ್ಳಿ ಕೆಫೆರೋಶ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಮದ್ಯ ಸೇವಿಸಿ ಗ್ರಾಹಕರ ಜೊತೆ ಅನುಚಿತ ವರ್ತನೆ ತೋರಿದ್ದ ಎನ್ನಲಾಗಿದ್ದು, ಆರೋಪಿಯ ದುರ್ವತನೆಯಿಂದ ಬೇಸತ್ತ ರೆಸ್ಟೋರೆಂಟ್ ಮಾಲೀಕ ಆಗಸ್ಟ್​ 27 ರಂದು ಆತನಿಗೆ ಬಾಕಿ ಇರುವ ಸಂಬಳ ಕೊಟ್ಟು ಇನ್ಮುಂದೆ ಕೆಲಸಕ್ಕೆ ಬಾರದಾಗಿ ಹೇಳಿದ್ದನಂತೆ.

ಇದನ್ನೂ ಓದಿ: ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ.. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಶ್ರೀಲಂಕನ್ನರು

blank

ಇದರಿಂದ ಕುಪಿತಗೊಂಡ ಆರೋಪಿ ಆಟೋನಾಲ, ಕೆಲಸ ಬಿಡಿಸಿದ ಎರಡು ದಿನಗಳ ನಂತರ ಅಂದರೆ ಆಗಸ್ಟ್​ 23ರಂದು ರೆಸ್ಟೋರೆಂಟ್ ಹಿಂಬದಿ ಪ್ಯಾಸೇಜ್ ನಿಂದ ಒಳಬಂದು, ಐವತ್ತು ಸಾವಿರ ನಗದು ಎಗರಿಸಿ ಎಸ್ಕೇಪ್ ಆಗಿದ್ದಾನೆ. ಕೈಯ್ಯಲ್ಲಿ ಚಾಕು ಹಿಡಿದು ಕ್ಯಾಶ್ ಬಾಕ್ಸ್ ನಲ್ಲಿದ್ದ 50 ಸಾವಿರ ನಗದು ಎಗರಿಸಿರೋ ಆರೋಪಿಯ ಕೈಚಳಕ ರೆಸ್ಟೋರೆಂಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಂಗಾಲಾದ ಮಾಲೀಕ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Source: newsfirstlive.com Source link